Home Bibles 2 ಸಮುವೇಲ 20:7 · ಕನ್ನಡ ಬೈಬಲ್
2 ಸಮುವೇಲ 20:7 · ಕನ್ನಡ ಬೈಬಲ್

ಹಾಗೆಯೇ ಅವನ ಹಿಂದೆ ಯೋವಾಬನ ಜನರೂ ಕೆರೇತ್ಯರೂ ಪೆಲೇ ತ್ಯರೂ ಎಲ್ಲಾ ಪರಾಕ್ರಮಶಾಲಿಗಳೂ ಬಿಕ್ರಿಯ ಮಗ ನಾದ ಶೆಬನನ್ನು ಹಿಂದಟ್ಟಲು ಯೆರೂಸಲೇಮಿನಿಂದ ಹೊರಟರು.

Cross references

2 ಸಮುವೇಲ 8:16

ಚೆರೂಯಳ ಮಗನಾದ ಯೋವಾಬನು ಸೈನ್ಯಾಧಿಪತಿಯಾಗಿದ್ದನು; ಅಹೀಲೂ ದನ ಮಗನಾದ ಯೆಹೋಷಾಫಾಟನು ಲೇಖಕನಾ ಗಿದ್ದನು.

2 ಸಮುವೇಲ 8:18

ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.

2 ಸಮುವೇಲ 15:18

ಅವನ ಎಲ್ಲಾ ಸೇವಕರೂ ಕೆರೇತ್ಯರೂ ಪೆಲೇತ್ಯರೂ ಅವನ ಹಿಂದೆ ಗತ್‌ ಊರಿನಿಂದ ಅವನ ಸಂಗಡ ಬಂದ ಗಿತ್ತಿಯರಾದ ಆರುನೂರು ಮಂದಿಯೂ ಅರಸನ ಮುಂದೆ ನಡೆದರು.

2 ಸಮುವೇಲ 20:23

ಯೋವಾಬನು ಇಸ್ರಾಯೇಲ್ಯರ ಮುಖ್ಯ ಸೇನಾ ಪತಿಯಾಗಿದ್ದನು; ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಮೇಲೆಯೂ ಪೆಲೇತ್ಯರ ಮೇಲೆಯೂ ಅಧಿಪತಿಯಾಗಿದ್ದನು;

2 ಸಮುವೇಲ 23:22

ಇವುಗಳನ್ನು ಯೆಹೋಯಾ ದಾವನ ಮಗನಾದ ಬೆನಾಯನು ಮಾಡಿದ್ದರಿಂದ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರು ಗೊಂಡವನಾಗಿದ್ದನು.

1 ಅರಸುಗಳು 1:38

ಹಾಗೆಯೇ ಯಾಜಕನಾದ ಚಾದೋಕನೂ ಪ್ರವಾದಿಯಾದ ನಾತಾನನೂ ಯೆಹೋಯಾದಾವನ ಮಗನಾದ ಬೆನಾಯನೂ ಕೆರೆತ್ಯರೂ ಪೆಲೇತ್ಯರೂ ಹೋಗಿ ಸೊಲೊಮೋನನನ್ನು ಅರಸನಾದ ದಾವೀ ದನ ಹೇಸರ ಕತ್ತೆಯ ಮೇಲೆ ಏರಿಸಿ ಗೀಹೋನಿಗೆ ಕರತಂದರು.

1 ಅರಸುಗಳು 1:44

ಇದಲ್ಲದೆ ಅರಸನು ಅವನ ಸಂಗಡ ಯಾಜಕನಾದ ಚಾದೋಕನನ್ನೂ ಪ್ರವಾದಿಯಾದ ನಾತಾನನನ್ನೂ ಯೆಹೋಯಾದಾವನ ಮಗನಾದ ಬೆನಾಯನನ್ನೂ ಕೆರೇತ್ಯರನ್ನೂ ಪೆಲೇತ್ಯರನ್ನೂ ಕಳುಹಿ ಸಿದ್ದಾನೆ.

Interlinear

Choose Theme