Home Bibles ☰ Books 2 ಸಮುವೇಲ 20:3 · ಕನ್ನಡ ಬೈಬಲ್
2 ಸಮುವೇಲ 20:3 · ಕನ್ನಡ ಬೈಬಲ್

ದಾವೀದನು ಯೆರೂಸಲೇಮಿನಲ್ಲಿರುವ ತನ್ನ ಮನೆಗೆ ಬಂದನು; ಅರಸನು ಮನೆಯಲ್ಲಿ ಕಾಯಲಿಟ್ಟ ಉಪಪತ್ನಿಗಳಾದ ಹತ್ತುಮಂದಿ ಸ್ತ್ರೀಯರನ್ನು ತೆಗೆದು ಕೊಂಡು ಅವರನ್ನು ಒಂದು ಕಾವಲಿನಲ್ಲಿ ಇರಿಸಿ ಸಾಕುತ್ತಿದ್ದನು. ಆದರೆ ಅವರನ್ನು ತಿರುಗಿ ಕೂಡಲಿಲ್ಲ. ಹಾಗೆಯೇ ಅವರು ಸಾಯುವ ದಿವಸದ ವರೆಗೂ ಕಾವಲಲ್ಲಿ ಇರಿಸಲ್ಪಟ್ಟು ವಿಧವೆಯರ ಹಾಗೆಯೇ ಬದುಕಿದರು.

Cross references

ಆದಿಕಾಂಡ 40:3

ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಿರಿಸಿದನು. ಅದು ಯೋಸೇಫನು ಬಂಧಿಸಲ್ಪಟ್ಟ ಸ್ಥಳವಾಗಿತ್ತು.

2 ಸಮುವೇಲ 15:16

ಅರಸನು ಮನೆಗೆ ಕಾವಲಿರುವಂತೆ ಉಪಪತ್ನಿಗಳಾದ ಹತ್ತು ಮಂದಿ ಸ್ತ್ರೀಯರನ್ನು ಬಿಟ್ಟು ಅವನೂ ಅವನ ಮನೆ ಯವರೆಲ್ಲರೂ ಅವನ ಹಿಂದೆ ಹೊರಟು ಹೋದರು.

2 ಸಮುವೇಲ 16:21

ಅಹೀತೋಫೆಲನು ಅಬ್ಷಾಲೋಮನಿಗೆ--ನಿನ್ನ ತಂದೆಯು ಮನೆಗೆ ಕಾವಲಿಟ್ಟ ಉಪಪತ್ನಿಗಳೊಡನೆ ಸಂಗಮಿಸು; ಆಗ ನಿನ್ನ ತಂದೆ ಯಿಂದ ನೀನು ಹಗೆಮಾಡಲ್ಪಟ್ಟವನೆಂದು ಎಲ್ಲಾ ಇಸ್ರಾ ಯೇಲ್ಯರು ಕೇಳಿ ನಿನ್ನ ಸಂಗಡ ಇರುವ ಎಲ್ಲಾ ಜನರ ಕೈಗಳೂ ಬಲವಾಗಿರುವವು ಅಂದನು.

2 ಸಮುವೇಲ 16:22

ಹಾಗೆಯೇ ಅವರು ಅಬ್ಷಾಲೋಮನಿಗೋಸ್ಕರ ಮನೆಯ ಮೇಲೆ ಡೇರೆ ಹಾಕಿದರು; ಅಲ್ಲಿ ಅಬ್ಷಾಲೋಮನು ಎಲ್ಲಾ ಇಸ್ರಾಯೇಲ್ಯರ ಕಣ್ಣುಗಳ ಮುಂದೆ ತನ್ನ ತಂದೆಯ ಉಪಪತ್ನಿಗಳನ್ನು ಕೂಡಿದನು.ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು.

Interlinear

Choose Theme