Home Bibles 2 ಸಮುವೇಲ 20:26 · ಕನ್ನಡ ಬೈಬಲ್
2 ಸಮುವೇಲ 20:26 · ಕನ್ನಡ ಬೈಬಲ್

ಯಾಯಾರಿನವನಾದ ಈರನೂ ದಾವೀದನ ಬಳಿಯಲ್ಲಿ ಮುಖ್ಯ ಅಧಿಪತಿಯಾಗಿದ್ದನು.

Cross references

ಆದಿಕಾಂಡ 41:43

ತನಗಿದ್ದ ಎರಡನೆಯ ರಥದಲ್ಲಿ ಅವನನ್ನು ಕೂರಿಸಿ ದಾಗ--ಅವನ ಮುಂದೆ ಮೊಣಕಾಲೂರಿರಿ ಎಂದು ಜನರು ಕೂಗಿದರು. ಹೀಗೆ ಅವನನ್ನು ಐಗುಪ್ತ ದೇಶದ ಮೇಲೆಲ್ಲಾ ಆಳುವವನನ್ನಾಗಿ ನೇಮಿಸಿದನು.

ಆದಿಕಾಂಡ 41:45

ಫರೋಹನು ಯೋಸೇಫನಿಗೆ ಸಾಫ್ನತ್ಪನ್ನೇಹ ಎಂದು ಹೆಸರಿಟ್ಟನು. ತರುವಾಯ ಓನಿನ ಯಾಜಕನಾದ ಪೋಟೀಫೆರನ ಮಗಳಾದ ಆಸನತ್‌ ಎಂಬಾಕೆಯನ್ನು ಅವನಿಗೆ ಹೆಂಡತಿಯಾಗಿ ಕೊಟ್ಟನು. ಆಗ ಯೋಸೇಫನು ಐಗುಪ್ತದೇಶದಲ್ಲೆಲ್ಲಾ ಹೊರಟು ಸಂಚರಿಸಿದನು.

ನಿರ್ಗಮಕಾಂಡ 2:14

ಅದಕ್ಕ ವನು--ಯಾರು ನಿನ್ನನ್ನು ನಮ್ಮ ಮೇಲೆ ಪ್ರಭುವ ನ್ನಾಗಿಯೂ ನ್ಯಾಯಾಧಿಪತಿಯನ್ನಾಗಿಯೂ ನೇಮಿಸಿ ದ್ದಾರೆ? ಆ ಐಗುಪ್ತ್ಯನನ್ನು ಕೊಂದುಹಾಕಿದಂತೆ ನನ್ನನ್ನೂ ಕೊಂದುಹಾಕಬೇಕೆಂದಿದ್ದೀಯೋ ಅಂದನು. ಆಗ ಮೋಶೆಯು ಭಯಪಟ್ಟು--ನಿಶ್ಚಯವಾಗಿ ಈ ಕಾರ್ಯವು ತಿಳಿದುಬಂತು ಎಂದು ಅಂದುಕೊಂಡನು.

ನಿರ್ಗಮಕಾಂಡ 2:16

ಮಿದ್ಯಾನಿನ ವೈದಿಕನಿಗೆ ಏಳು ಮಂದಿ ಕುಮಾರ್ತೆಯರಿದ್ದರು. ಇವರು ಬಂದು ತಮ್ಮ ತಂದೆಯ ಮಂದೆಗಳಿಗೆ ನೀರು ಸೇದಿ ದೋಣಿಗಳನ್ನು ತುಂಬಿಸು ತ್ತಿದ್ದರು.

ನಿರ್ಗಮಕಾಂಡ 24:11

ಆದರೆ ಇಸ್ರಾಯೇಲ್‌ ಮಕ್ಕಳ ಶ್ರೇಷ್ಠರ ಮೇಲೆ ಆತನು ಕೈ ಹಾಕಲಿಲ್ಲ. ಅವರು ಸಹ ದೇವರ ದರ್ಶನದ ನಂತರ ತಿಂದು ಕುಡಿದರು.

ದ್ವಿತೀಯೋಪದೇಶಕಾಂಡ 3:14

ಮನಸ್ಸೆಯ ಮಗನಾದ ಯಾಯಾರನು ಅರ್ಗೋ ಬಿನ ದೇಶವನ್ನೆಲ್ಲಾ ಗೆಷೂರ್ಯರ, ಮಾಕಾತ್ಯರ ಮೇರೆಯ ವರೆಗೆ ತಕ್ಕೊಂಡು ಆ ಬಾಷಾನಿಗೆ ತನ್ನ ಹೆಸರಿನ ಪ್ರಕಾರ ಇಂದಿನ ವರೆಗೆ ಹವ್ವೊತ್‌ ಯಾಯಾ ರೆಂದು ಹೆಸರಿಟ್ಟನು.

ನ್ಯಾಯಾಧಿಪತಿಗಳು 10:4

ಅವನಿಗೆ ಮೂವತ್ತು ಕತ್ತೇಮರಿಗಳ ಮೇಲೆ ಏರುವ ಮೂವತ್ತು ಮಂದಿ ಕುಮಾರರು ಇದ್ದರು. ಇವರಿಗೆ ಗಿಲ್ಯಾದ್‌ ದೇಶದಲ್ಲಿ ಮೂವತ್ತು ಪಟ್ಟಣಗಳಿದ್ದವು; ಅವುಗಳಿಗೆ ಈ ದಿನದ ವರೆಗೂ ಹವೋತ್ಯಾಯಾರೆಂಬ ಹೆಸರಿದೆ.

2 ಸಮುವೇಲ 8:18

ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.

2 ಸಮುವೇಲ 23:38

ಇತ್ರಿಯರಾದ ಈರಾ ಗಾರೇಬನು,ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು.

1 ಅರಸುಗಳು 4:5

ನಾತಾ ನನ ಮಗನಾದ ಅಜರ್ಯನು ಅಧಿಪತಿಗಳ ಮೇಲ್ವಿಚಾ ರಕನು; ನಾತಾನನ ಮಗನಾದ ಜಾಬೂದನು ಮುಖ್ಯ ಸ್ಥನೂ ಅರಸನ ಸ್ನೇಹಿತನೂ ಆಗಿದ್ದನು.

1 ದಿನವೃತ್ತಾಂತ 11:40

ಇತ್ರೀಯನಾದ ಈರನು ಗಾರೇಬನು,

2 ದಿನವೃತ್ತಾಂತ 35:15

ದಾವೀದನೂ ಆಸಾ ಫನೂ ಹೇಮಾನನೂ ಅರಸನ ಪ್ರವಾದಿಯಾದ ಯೆದುತೂನನೂ ಇವರ ಆಜ್ಞೆಯ ಪ್ರಕಾರ ಆಸಾಫನ ಮಕ್ಕಳಾದ ಹಾಡುಗಾರರು ತಮ್ಮ ಸ್ಥಳದಲ್ಲಿದ್ದರು; ಹಾಗೆಯೇ ದ್ವಾರಪಾಲಕರು ಪ್ರತಿಯೊಂದು ಬಾಗಲಲ್ಲಿ ಇದ್ದರು; ಅವರು ತಮ್ಮ ಸೇವೆಯನ್ನು ಬಿಡಲು ಆಗದೆ ಇತ್ತು; ಯಾಕಂದರೆ ಅವರ ಸಹೋದರರಾದ ಲೇವಿಯರು ಅವರ ನಿಮಿತ್ತ ಸಿದ್ಧಮಾಡಿದರು.

Interlinear

Choose Theme