ಆಗ ಅರಸನು ಶಿಮ್ಮಿಗೆ --ನೀನು ಸಾಯುವದಿಲ್ಲ ಅಂದನು. ಇದಲ್ಲದೆ ಅರಸನು ಅವನಿಗೆ ಆಣೆ ಇಟ್ಟನು.
Cross references
ಆಗ ಸೌಲನು--ಕರ್ತನು ಈ ದಿವಸ ಇಸ್ರಾಯೇಲಿನಲ್ಲಿ ರಕ್ಷಣೆಯನ್ನುಂಟುಮಾಡಿ ದ್ದರಿಂದ ಈ ಹೊತ್ತು ಯಾವನೂ ಕೊಲ್ಲಲ್ಪಡಬಾರದು ಅಂದನು.
ಆಗ ಸೌಲನು--ಕರ್ತನ ಜೀವದಾಣೆ, ಈ ಕಾರ್ಯಕ್ಕೋಸ್ಕರ ನಿನಗೆ ದಂಡನೆ ಬಾರದು ಎಂದು ಅವಳಿಗೆ ಕರ್ತನ ಮೇಲೆ ಪ್ರಮಾಣ ಇಟ್ಟನು.
ದಾವೀದನು ಅವನಿಗೆ--ನೀನು ನನ್ನನ್ನು ಆ ದಂಡಿಗೆ ಕರಕೊಂಡು ಹೋಗುತ್ತೀಯಾ ಎಂದು ಕೇಳಿದನು. ಅದಕ್ಕವನು--ನೀನು ನನ್ನನ್ನು ಕೊಂದು ಹಾಕುವದಿಲ್ಲ ಇಲ್ಲವೆ ನನ್ನನ್ನು ನನ್ನ ಯಾಜಮಾನನ ಕೈಯಲ್ಲಿ ಒಪ್ಪಿಸಿಕೊಡುವದಿಲ್ಲ ಎಂದು ನನಗೆ ದೇವರ ಹೆಸರಿನಿಂದ ಪ್ರಮಾಣಕೊಟ್ಟರೆ ನಿನ್ನನ್ನು ಆ ದಂಡಿಗೆ ಕರಕೊಂಡು ಹೋಗುತ್ತೇನೆ ಅಂದನು.
ಆದರೆ ಅರಸನು--ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ; ಯಾಕಂದರೆ--ದಾವೀದ ನನ್ನು ದೂಷಿಸು ಎಂದು ಕರ್ತನು ಅವನಿಗೆ ಹೇಳಿದ್ದಾನೆ; ಹಾಗಾದರೆ ಯಾಕೆ ಹೀಗೆ ಮಾಡುತ್ತೀ ಎಂದು ಹೇಳುವ ವನಾರು ಅಂದನು.
ಇದಲ್ಲದೆ ನಾನು ಮಹನಯಿಮಿಗೆ ಹೋಗುವ ದಿನದಲ್ಲಿ ಘೋರವಾದ ಶಾಪದಿಂದ ನನ್ನನ್ನು ಶಪಿಸಿದ ಬಹುರೀಮಿನ ಬೆನ್ಯಾ ವಿಾನನಾದ ಗೇರನ ಮಗನಾಗಿರುವ ಶಿಮ್ಮಿಯು ನಿನ್ನ ಬಳಿಯಲ್ಲಿದ್ದಾನೆ. ಅವನು ಯೊರ್ದನಿನ ಬಳಿಯಲ್ಲಿ ನನ್ನನ್ನು ಎದುರುಗೊಳ್ಳಲು ಬಂದದರಿಂದ ನಾನು ನಿನ್ನನ್ನು ಕತ್ತಿಯಿಂದ ಕೊಲ್ಲಿಸುವದಿಲ್ಲವೆಂದು ಕರ್ತನ ಹೆಸರಿನಲ್ಲಿ ಆಣೆ ಇಟ್ಟೆನು.
ಯಾವ ದಿನದಲ್ಲಿ ನೀನು ಹೊರಟು ಕಿದ್ರೋನೆಂಬ ಹಳ್ಳವನ್ನು ದಾಟುವಿಯೋ ಆ ದಿನದಲ್ಲಿ ನಿಶ್ಚಯವಾಗಿ ಸಾಯುವಿ ಎಂದು ಖಂಡಿತಾ ತಿಳಿದುಕೋ. ನಿನ್ನ ರಕ್ತವು ನಿನ್ನ ತಲೆಯ ಮೇಲೆ ಇರುವದು ಅಂದನು.
ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯ ನಿಗೆ ಆಜ್ಞಾಪಿಸಿದ್ದರಿಂದ ಅವನು ಹೊರಟು ಅವನ ಮೇಲೆ ಬಿದ್ದನು; ಅವನು ಸತ್ತನು. ಹೀಗೆ ರಾಜ್ಯವು ಸೊಲೊಮೋನನ ಕೈಯಲ್ಲಿ ಸ್ಥಿರ ಮಾಡಲ್ಪಟ್ಟಿತು.
ಮನುಷ್ಯರು ನಿಜವಾಗಿಯೂ ತಮಗಿಂತ ಹೆಚ್ಚಿನವನ ಆಣೆಯಿಡು ತ್ತಾರಷ್ಟೆ; ಆಣೆಯನ್ನು ಸ್ಥಿರಪಡಿಸಿದ ಮೇಲೆ ಅವರೊಳಗೆ ವಿವಾದವೇನೂ ಇರುವದಿಲ್ಲ.