Home Bibles 2 ಸಮುವೇಲ 18:22 · ಕನ್ನಡ ಬೈಬಲ್
2 ಸಮುವೇಲ 18:22 · ಕನ್ನಡ ಬೈಬಲ್

ಕೂಷ್ಯನು ಯೋವಾಬನಿಗೆ ಅಡ್ಡಬಿದ್ದು ಓಡಿಹೋದನು. ಆಗ ಚಾದೋಕನ ಮಗನಾದ ಅಹೀಮಾಚನು ಯೋವಾಬನಿಗೆ--ನಾನು ಕೂಷ್ಯನ ಹಿಂದೆ ಓಡಿಹೋಗುವ ಹಾಗೆ ಹೇಗಾದರೂ ಅಪ್ಪಣೆ ಕೊಡಬೇಕು ಅಂದನು. ಅದಕ್ಕೆ ಯೋವಾಬನು--ನನ್ನ ಮಗನೇ, ನಿನಗೆ ವರ್ತಮಾನ ಇಲ್ಲದಿರುವಾಗ ನೀನು ಓಡುವದು ಯಾಕೆ ಅಂದನು. ಅವನು ಹೇಗಾ ದರೂ ಓಡಿಹೋಗುತ್ತೇನೆ ಅಂದಾಗ ಓಡು ಅಂದನು.

Cross references

1 ಅರಸುಗಳು 11:22

ಫರೋಹನು ಅವನಿಗೆ -- ಯಾಕೆ? ಇಗೋ, ನೀನು ನಿನ್ನ ದೇಶಕ್ಕೆ ಹೋಗಬೇಕೆಂಬುವ ಹಾಗೆ ನೀನು ನನ್ನ ಸಂಗಡ ಇರುವಾಗ ನಿನಗೆ ಏನು ಕೊರತೆಯಾಯಿತು ಅಂದಾಗ ಅವನು--ಏನೂ ಇಲ್ಲ; ಆದರೆ ಹೇಗಾದರೂ ನಾನು ಅಲ್ಲಿಗೆ ಹೋಗುತ್ತೇನೆ ಅಂದನು.

ರೋಮಾಪುರದವರಿಗೆ 1:28

ಇದಲ್ಲದೆ ಅವರು ತಮ್ಮ ತಿಳುವಳಿಕೆಯಿಂದ ದೇವರನ್ನು ಸ್ಮರಿಸುವದಕ್ಕೆ ಮನಸ್ಸಿಲ್ಲದ ಕಾರಣ ದೇವರು ಅವರನ್ನು ಮಾಡಬಾರದವುಗಳನ್ನು ಮಾಡು ವಂತೆ ಅನಿಷ್ಟಭಾವಕ್ಕೆ ಒಪ್ಪಿಸಿದನು.

ಎಫೆಸದವರಿಗೆ 5:4

ಇಲ್ಲವೆ ಹೊಲಸುತನ ಹುಚ್ಚು ಮಾತು ಕುಚೋದ್ಯ ಇವು ಬೇಡ, ಅಯುಕ್ತವಾಗಿವೆ; ಇವು ಗಳನ್ನು ಬಿಟ್ಟು ಆತನಿಗೆ ಉಪಕಾರ ಸ್ತುತಿಮಾಡುವದೇ ಉತ್ತಮ.

Interlinear

Choose Theme