2 ಸಮುವೇಲ 18:12 · ಕನ್ನಡ ಬೈಬಲ್
ಆದರೆ ಆ ಮನುಷ್ಯನು ಯೋವಾಬನಿಗೆ--ನನ್ನ ಕೈಯಲ್ಲಿ ಸಾವಿರ ಶೆಕೇಲ್ ಬೆಳ್ಳಿಯನ್ನು ಕೊಟ್ಟರೂ ನಾನು ಅರಸನ ಮಗನ ಮೇಲೆ ನನ್ನ ಕೈ ಚಾಚುವದಿಲ್ಲ. ಯಾಕಂದರೆಯೌವನಸ್ಥನಾದ ಅಬ್ಷಾಲೋಮನನ್ನು ಯಾರೂ ಮುಟ್ಟದ ಹಾಗೆ ಜಾಗ್ರತೆಯಾಗಿರ್ರಿ ಎಂದು ಅರಸನು ನಿನಗೂ ಅಬೀಷೈನಿಗೂ ಇತ್ತೈಗೂ ನಮಗೆ ಕೇಳಿಸು ವಂತೆ ಆಜ್ಞಾಪಿಸಿದ್ದನು.
Cross references
2 ಸಮುವೇಲ 18:5
ಆದರೆ ಅರಸನು ಯೋವಾಬನಿಗೂ ಅಬೀ ಷೈಯನಿಗೂ ಇತ್ತೈಗೂ ಆಜ್ಞಾಪಿಸಿ--ನನಗೋಸ್ಕರ ಯೌವನಸ್ಥನಾದ ಅಬ್ಷಾಲೋಮನನ್ನು ಕರುಣಿಸಿರಿ ಅಂದನು. ಹೀಗೆ ಅರಸನು ಅಬ್ಷಾಲೋಮನನ್ನು ಕುರಿತು ಅಧಿಪತಿಗಳೆಲ್ಲರಿಗೂ ಕೊಟ್ಚ ಆಜ್ಞೆಯನ್ನು ಜನರೆಲ್ಲರೂ ಕೇಳಿದರು.
2 ಸಮುವೇಲ 19:1
ಆಗ ಇಗೋ, ಅರಸನು ಅಬ್ಷಾಲೋಮನಿ ಗೋಸ್ಕರ ಅತ್ತು ದುಃಖಪಡುತ್ತಾ ಇದ್ದಾ ನೆಂದು ಯೋವಾಬನಿಗೆ ತಿಳಿಸಲ್ಪಟ್ಟಿತು.