Home Bibles 2 ಸಮುವೇಲ 16:9 · ಕನ್ನಡ ಬೈಬಲ್
2 ಸಮುವೇಲ 16:9 · ಕನ್ನಡ ಬೈಬಲ್

ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ--ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ದೂಷಿಸುವದೇನು? ನಾನೇ ದಾಟಿಹೋಗಿ ಅವನ ತಲೆಯನ್ನು ತೆಗೆದುಕೊಳ್ಳಲು ಅಪ್ಪಣೆಯಾಗಲಿ ಅಂದನು.

Cross references

ನಿರ್ಗಮಕಾಂಡ 22:28

ದೇವರನ್ನು ನಿಂದಿಸಬೇಡ; ಇಲ್ಲವೆ ನಿನ್ನ ಜನರ ಅಧಿಕಾರಿಗಳನ್ನು ಶಪಿಸಬೇಡ.

1 ಸಮುವೇಲ 24:14

ಇಸ್ರಾಯೇಲಿನ ಅರಸನು ಯಾರನ್ನು ಬೆನ್ನಟ್ಟಿ ಹೊರಟನು? ಯಾರನ್ನು ನೀನು ಹಿಂದಟ್ಟುತ್ತೀ? ಸತ್ತನಾಯಿಯನ್ನೇ? ಒಂದು ಕೀಟವನ್ನೇ?

1 ಸಮುವೇಲ 26:6

ಆಗ ದಾವೀದನು ಹಿತ್ತಿಯನಾದ ಅಹೀಮೆಲೆಕನನ್ನೂ ಚೆರೂಯಳ ಮಗ ನಾಗಿರುವ ಯೋವಾಬನ ಸಹೋದರನಾದ ಅಬೀಷೈ ಯನ್ನೂ ನೋಡಿ--ನನ್ನ ಸಂಗಡ ದಂಡಿನಲ್ಲಿ ಪ್ರವೇಶಿ ಸಲು ಬರುವವನು ಯಾರೆಂದು ಕೇಳಿದನು; ಅದಕ್ಕೆ ಅಬೀಷೈಯು--ನಾನು ನಿನ್ನ ಸಂಗಡ ಬರುವೆನು ಅಂದನು.

1 ಸಮುವೇಲ 26:8

ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು.

2 ಸಮುವೇಲ 3:8

ಆಗ ಅಬ್ನೇರನು ಈಷ್ಬೋ ಶೆತನ ಮಾತುಗಳಿಗೆ ಬಹು ಕೋಪಗೊಂಡು--ನಾನು ನಿನ್ನನ್ನು ದಾವೀದನ ಕೈಯಲ್ಲಿ ಒಪ್ಪಿಸಿಕೊಡದೆ ಈ ದಿನದ ವರೆಗೂ ಯೆಹೂದವನ್ನು ವಿರೋಧಿಸಿ ನಿನ್ನ ತಂದೆ ಯಾದ ಸೌಲನ ಮನೆಗೂ ಅವನ ಸಹೋದರರಿಗೂ ಸ್ನೇಹಿತರಿಗೂ ದಯೆತೋರಿಸಿದ ನನ್ನನ್ನು ನೀನು ಈ ಹೊತ್ತು ಈ ಸ್ತ್ರೀಗೋಸ್ಕರ ನನ್ನಲ್ಲಿ ಅಕ್ರಮ ಎಣಿಸು ವದಕ್ಕೆ ನಾನು ನಾಯಿಯ ತಲೆಯೋ?

2 ಸಮುವೇಲ 3:30

ಹೀಗೆಯೇ ಅಬ್ನೇರ ನನ್ನು ಕೊಂದುಹಾಕಿದರು; ಅವನು ಅವರ ಸಹೋ ದರನಾದ ಅಸಾಹೇಲನನ್ನು ಗಿಬ್ಯೋನಿನ ಯುದ್ಧದಲ್ಲಿ ಕೊಂದುಹಾಕಿದ್ದನು.

2 ಸಮುವೇಲ 9:8

ಆಗ ಅವನು ಅಡ್ಡಬಿದ್ದು--ನೀನು ನನ್ನಂಥ ಸತ್ತನಾಯಿಯನ್ನು ದೃಷ್ಟಿಸುವ ಹಾಗೆ ನಿನ್ನ ದಾಸನು ಎಷ್ಟರವನು ಅಂದನು.

ಯೋಬ 31:30

ಶಾಪದಿಂದ ಅವನ ಪ್ರಾಣ ವನ್ನು ಕೇಳುವುದರಿಂದ ನನ್ನ ಬಾಯಿಯು ಪಾಪ ಮಾಡಗೊಡಿಸಲಿಲ್ಲ.

ಯೆರೆಮಿಯ 40:13

ಆಗ ಆದದ್ದೇನಂದರೆ--ಇಷ್ಮಾಯೇಲನ ಸಂಗಡ ಇದ್ದ ಜನರೆಲ್ಲರೂ ಕಾರೇಹನ ಮಗನಾದ ಯೋಹಾನಾನನನ್ನೂ ಅವನ ಸಂಗಡ ಇದ್ದ ಸೈನ್ಯಾಧಿ ಪತಿಗಳೆಲ್ಲರನ್ನೂ ನೋಡಿದಾಗ ಸಂತೋಷಪಟ್ಟರು.

ಲೂಕ 9:54

ಆತನ ಶಿಷ್ಯರಾದ ಯಾಕೋಬ ಯೋಹಾನರು ಇದನ್ನು ನೋಡಿ--ಕರ್ತನೇ, ಎಲೀಯನು ಮಾಡಿದ ಪ್ರಕಾರ ಅವರನ್ನು ದಹಿಸಿಬಿಡುವಂತೆ ಆಕಾಶದಿಂದ ಬೆಂಕಿ ಬೀಳುವ ಹಾಗೆ ನಾವು ಅಪ್ಪಣೆಕೊಡಲು ನಿನಗೆ ಮನಸ್ಸುಂಟೋ ಎಂದು ಅವರು ಕೇಳಿದರು.

ಅಪೋಸ್ತಲರ ಕೃತ್ಯಗಳು 23:5

ಆಗ ಪೌಲನು--ಸಹೋದರರೇ, ಅವನು ಮಹಾಯಾಜಕನೆಂದು ನನಗೆ ತಿಳಿಯ ಲಿಲ್ಲ; --ನಿನ್ನ ಜನರ ಅಧಿಪತಿಯ ವಿಷಯವಾಗಿ ನೀನು ಕೆಟ್ಟದ್ದನ್ನು ಮಾತನಾಡಬಾರದು ಎಂಬದಾಗಿ ಬರೆದದೆ ಎಂದು ಹೇಳಿದನು.

1 ಪೇತ್ರ 2:17

ಎಲ್ಲರನ್ನು ಸನ್ಮಾನಿ ಸಿರಿ, ಸಹೋದರರನ್ನು ಪ್ರೀತಿಸಿರಿ, ದೇವರಿಗೆ ಭಯ ಪಡಿರಿ, ಅರಸನನ್ನು ಸನ್ಮಾನಿಸಿರಿ.

Interlinear

Choose Theme