2 ಸಮುವೇಲ 16:13 · ಕನ್ನಡ ಬೈಬಲ್
ದಾವೀದನೂ ಅವನ ಸೇವಕರೂ ದಾರಿ ಹಿಡಿದು ಹೋಗುವಾಗ ಶಿಮ್ಮಿ ಬೆಟ್ಟದ ಪಾರ್ಶ್ವವಾಗಿ ಬಂದು ಅವನಿಗೆದುರಾಗಿ ನಡೆದು ದೂಷಿಸಿ ಅವನ ಕಡೆಗೆ ಮಣ್ಣನ್ನು ತೂರಿ ಕಲ್ಲುಗಳನ್ನು ಎಸೆದನು.
Cross references
2 ಸಮುವೇಲ 16:5
ಅರಸನಾದ ದಾವೀದನು ಬಹುರೀಮಿನ ವರೆಗೂ ಬಂದಾಗ ಇಗೋ, ಸೌಲನ ಗೋತ್ರದವನಾದಂಥ ಗೇರನ ಮಗನಾದ ಶಿಮ್ಮಿಯೆಂಬ ಹೆಸರುಳ್ಳ ಒಬ್ಬ ಮನುಷ್ಯನು ಅಲ್ಲಿಂದ ಹೊರಟು ದೂಷಿಸುತ್ತಾ ನಡೆದು ಬಂದನು.
ಅಪೋಸ್ತಲರ ಕೃತ್ಯಗಳು 23:23
ಆಗ ಅವನು ಇಬ್ಬರು ಶತಾಧಿಪತಿ ಗಳನ್ನು ತನ್ನ ಬಳಿಗೆ ಕರೆದು--ರಾತ್ರಿ ಮೂರು ಘಂಟೆಗೆ ಕೈಸರೈಯಕ್ಕೆ ಹೋಗುವದಕ್ಕಾಗಿ ಇನ್ನೂರು ಮಂದಿ ಸೈನಿಕರನ್ನೂ ಎಪ್ಪತ್ತು ಮಂದಿ ಕುದುರೆ ಸವಾರರನೂ ಇನ್ನೂರು ಮಂದಿ ಭಲ್ಲೆಯವರನ್ನೂ ಸಿದ್ಧಮಾಡಿ,