Home Bibles 2 ಸಮುವೇಲ 15:12 · ಕನ್ನಡ ಬೈಬಲ್
2 ಸಮುವೇಲ 15:12 · ಕನ್ನಡ ಬೈಬಲ್

ಅಬ್ಷಾ ಲೋಮನು ಬಲಿಗಳನ್ನು ಅರ್ಪಿಸುತ್ತಿರುವಾಗ ದಾವೀ ದನ ಆಲೋಚನಾ ಕರ್ತನಾಗಿರುವ ಗೀಲೋವಿಯ ನಾದ ಅಹೀತೋಫೆಲನನ್ನು ಗೀಲೋವೆಂಬ ಅವನ ಪಟ್ಟಣದಿಂದ ಕರೇಕಳುಹಿಸಿದನು. ಅಬ್ಷಾಲೋಮನ ಸಂಗಡ ಕೂಡುವ ಜನರು ಆಗಾಗ್ಗೆ ಹೆಚ್ಚಿದ್ದರಿಂದ ಒಳಸಂಚಿನ ಗುಂಪು ಬಲವಾಯಿತು.

Cross references

ಅಂಕೆಗಳ ಪುಸ್ತಕ 23:1

ಆಗ ಬಿಳಾಮನು ಬಾಲಾಕನಿಗೆ--ಏಳು ಬಲಿಪೀಠಗಳನ್ನು ಕಟ್ಟಿ, ಏಳು ಹೋರಿ ಗಳನ್ನೂ ಏಳು ಟಗರುಗಳನ್ನೂ ನನಗೆ ಇಲ್ಲಿ ಸಿದ್ಧಮಾಡು ಅಂದನು.

ಅಂಕೆಗಳ ಪುಸ್ತಕ 23:14

ಅಲ್ಲಿಂದ ಅವರನ್ನು ನನಗೋ ಸ್ಕರ ಶಪಿಸು ಅಂದನು. ಹಾಗೆ ಬಾಲಾಕನು ಬಿಳಾಮ ನನ್ನು ಪಿಸ್ಗಾದ ತುದಿಗೆ ಚೋಫೀಮನ ಬೈಲಿಗೆ ಕರ ಕೊಂಡು ಹೋಗಿ ಏಳು ಬಲಿಪೀಠಗಳನ್ನು ಕಟ್ಟಿ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿ ದನು.

ಅಂಕೆಗಳ ಪುಸ್ತಕ 23:30

ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದನು.

ಯೆಹೋಶುವ 15:51

ಗೋಷೆನ್‌, ಹೋಲೋನ್‌ಗಿಲೋ ಎಂಬ ಹನ್ನೊಂದು ಪಟ್ಟಣ ಗಳು ಅವುಗಳ ಗ್ರಾಮಗಳು.

2 ಸಮುವೇಲ 15:31

ಅಹೀತೋಫೆಲನು ಅಬ್ಷಾಲೋ ಮನ ಬಳಿಯಲ್ಲಿ ಒಳಸಂಚಿನವರ ಸಂಗಡ ಇದ್ದಾ ನೆಂದು ದಾವೀದನಿಗೆ ತಿಳಿಸಲ್ಪಟ್ಟಾಗ ದಾವೀದನು--ಕರ್ತನೇ, ಅಹೀತೋಫೆಲನ ಆಲೋಚನೆಯನ್ನು ಹುಚ್ಚುತನವಾಗ ಮಾಡು ಅಂದನು.

2 ಸಮುವೇಲ 16:20

ಆಗ ಅಬ್ಷಾಲೋಮನು ಅಹೀತೋಫೆಲನಿಗೆ--ನಾವು ಮಾಡಬೇಕಾದದ್ದನ್ನು ನೀನು ಯೋಚನೆ ಮಾಡಿ ಹೇಳು ಅಂದನು.

2 ಸಮುವೇಲ 16:23

ಆ ದಿವಸಗಳಲ್ಲಿ ಅಹೀತೋಫೆಲನು ಆಲೋಚಿಸಿದ ಆಲೋಚನೆಯು ಒಬ್ಬನು ದೈವೋಕ್ತಿಗಳನ್ನು ವಿಚಾರಿಸುವ ಹಾಗೆ ಇತ್ತು. ಅಹೀತೋಫೆಲನ ಆಲೋಚನೆಯೆಲ್ಲಾ ದಾವೀದನಿಗೂ ಅಬ್ಷಾಲೋಮನಿಗೂ ಹಾಗೆಯೇ ಇತ್ತು.

2 ಸಮುವೇಲ 17:14

ಆಗ ಅಬ್ಷಾ ಲೋಮನೂ ಇಸ್ರಾಯೇಲಿನ ಎಲ್ಲಾ ಜನರೂಅಹೀತೋಫೆಲನ ಆಲೋಚನೆಗಿಂತ ಅರ್ಕೀಯನಾದ ಹೂಷೈಯ ಆಲೋಚನೆ ಒಳ್ಳೇದು ಅಂದರು. ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೇ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ಕರ್ತನು ನೇಮಿಸಿದ್ದನು.

2 ಸಮುವೇಲ 17:23

ಅಹೀತೋಫೆಲನು ತನ್ನ ಯೋಚನೆಯ ಪ್ರಕಾರ ನಡೆಯಲಿಲ್ಲವೆಂದು ನೋಡಿದಾಗ ತನ್ನ ಕತ್ತೆಯ ಮೇಲೆ ತಡಿಯನ್ನು ಹಾಕಿ ಏರಿ ಪಟ್ಟಣದಲ್ಲಿರುವ ತನ್ನ ಮನೆಗೆ ಹೋಗಿ ಅದನ್ನು ಕ್ರಮಪಡಿಸಿ ಉರ್ಲುಹಾಕಿ ಕೊಂಡು ಸತ್ತು ತನ್ನ ತಂದೆಯ ಸಮಾಧಿಯಲ್ಲಿ ಹೂಣಲ್ಪಟ್ಟನು.

2 ಸಮುವೇಲ 23:34

ಅರಾರ್ಯನಾದ ಶಾರಾರನ ಮಗನಾದ ಅಹೀಯಾಮ್‌, ಮಾಕಾತ್ಯರಲ್ಲಿ ಒಬ್ಬನ ಮಗನಾಗಿರುವ ಅಹಸ್ಬೈ ಮಗನಾದ ಎಲೀಫೆ ಲೆಟನು, ಗಿಲೋವಿಯನಾಗಿರುವ ಅಹೀತೋಫೆಲನ ಮಗನಾದ ಎಲೀಯಾಮನು,

1 ಅರಸುಗಳು 21:9

ಅವಳು ಪತ್ರಗಳಲ್ಲಿ--ನೀವು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರದ ಸ್ಥಳದಲ್ಲಿ ನಿಲ್ಲಿಸಿ--

1 ಅರಸುಗಳು 21:12

ಅವರು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ನಿಲ್ಲಿಸಿ ದರು.

1 ದಿನವೃತ್ತಾಂತ 27:33

ಅರಸನ ಆಲೋಚನೆಗಾರನು ಅಹೀತೋಫೆಲನು, ಅರಸನ ಸ್ನೇಹಿತನು ಅರ್ಕೀಯನಾದ ಹೂಷೈಯು.ಅಹೀ ತೋಫೆಲನ ತರುವಾಯ ಬೆನಾಯನ ಮಗನಾದ ಯೆಹೋಯಾದಾವನೂ ಎಬ್ಯಾತಾರನೂ. ಅರಸನ ಸೈನ್ಯದ ಅಧಿಪತಿಯು ಯೋವಾಬನು.

ಕೀರ್ತನೆಗಳು 3:1

ಕರ್ತನೇ, ನನ್ನನ್ನು ಕಳವಳಪಡಿಸುವವರು ಹೆಚ್ಚಿದ್ದಾರೆ! ನನಗೆ ವಿರೋಧವಾಗಿ ಏಳುವವರು ಅನೇಕರು.

ಕೀರ್ತನೆಗಳು 41:9

ಹೌದು, ನನ್ನ ರೊಟ್ಟಿಯನ್ನು ತಿಂದಂಥ, ನಾನು ಭರವಸವಿಟ್ಟಂಥ, ನನ್ನ ಆಪ್ತ ಸ್ನೇಹಿತನು ನನಗೆ ವಿರೋಧವಾಗಿ ತನ್ನ ಕಾಲನ್ನು ಅಡ್ಡಗೊಟ್ಟಿದ್ದಾನೆ.

ಕೀರ್ತನೆಗಳು 41:10

ಆದರೆ ನೀನು, ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸಿ ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಪ್ರತೀಕಾರವನ್ನು ಮಾಡುವೆನು.

ಕೀರ್ತನೆಗಳು 43:1

ಓ ದೇವರೇ, ನನಗೆ ನ್ಯಾಯತೀರಿಸು. ಭಕ್ತಿ ಇಲ್ಲದ ಜನಾಂಗದ ಸಂಗಡ ನನ್ನ ನ್ಯಾಯವನ್ನು ವಾದಿಸು; ಮೋಸವೂ ಅನ್ಯಾಯವೂ ಉಳ್ಳ ಮನುಷ್ಯನಿಂದ ನನ್ನನ್ನು ತಪ್ಪಿಸು.

ಕೀರ್ತನೆಗಳು 50:16

ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ?

ಕೀರ್ತನೆಗಳು 55:12

ನನ್ನನ್ನು ನಿಂದಿಸಿದವನು ಶತ್ರುವಲ್ಲ; ಶತ್ರುವಾದರೆ ತಾಳಿಕೊಳ್ಳುತ್ತಿದ್ದೆನು; ನಿನಗೆ ವಿರೋಧವಾಗಿ ಹೆಚ್ಚಿಸಿ ಕೊಳ್ಳುವವನು ನನ್ನ ಹಗೆಯವನಲ್ಲ; ಹಗೆಯವನಾದರೆ ಅವನಿಗೆ ಅಡಗಿಕೊಳ್ಳುತ್ತಿದ್ದೆನು.

ಸಾಮೇತಿಗಳು 15:8

ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.

ಸಾಮೇತಿಗಳು 21:27

ದುಷ್ಟರ ಯಜ್ಞವು ಅಸಹ್ಯ; ಹೀಗಾದರೆ ದುರ್ಬುದ್ಧಿ ಯಿಂದ ಅದನ್ನು ಅರ್ಪಿಸಿದರೆ ಇನ್ನೂ ಎಷ್ಟೋ ಅಸಹ್ಯ ಕರವಾಗಿದೆ.

ಯೆಶಾಯ 1:10

ಸೊದೋಮಿನ ಅಧಿಪತಿಗಳೇ, ನೀವು ಕರ್ತನ ಮಾತನ್ನು ಕೇಳಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ನ್ಯಾಯಪ್ರಮಾಣಕ್ಕೆ ಕಿವಿಗೊಡಿರಿ.

ಯೆರೆಮಿಯ 6:20

ಆದದರಿಂದ ಕರ್ತ ನಾದ ದೇವರು ಹೀಗೆ ಹೇಳುತ್ತಾನೆ--ಇಗೋ, ಈ ಸ್ಥಳದ ಮೇಲೆಯೂ ಮನುಷ್ಯರ ಮೇಲೆಯೂ ಮೃಗಗಳ ಮೇಲೆಯೂ ಹೊಲದ ಮರಗಳ ಮೇಲೆಯೂ ಭೂಮಿಯ ಫಲದ ಮೇಲೆಯೂ ನನ್ನ ಕೋಪವೂ ಮತ್ತು ಉಗ್ರತೆಯೂ ಹೊಯ್ಯಲ್ಪಡುವದು; ಅದು ಉರಿಯುವದು ಆರಿಹೋಗುವದಿಲ್ಲ.

ಮೀಕ 7:5

ಸ್ನೇಹಿತನಲ್ಲಿ ನಂಬಿಕೆ ಇಡಬೇಡಿರಿ; ಆಪ್ತಸ್ನೇಹಿತನಲ್ಲಿ ಭರವಸವಿಡಬೇಡಿರಿ; ನಿನ್ನ ಎದೆಯ ಮೇಲೆ ಮಲಗುವವಳಿಗೆ ನಿನ್ನ ಬಾಯಿಯ ಬಾಗಲುಗಳನ್ನು ಕಾಯಿ.

ಯೋಹಾನ 13:18

ನಾನು ನಿಮ್ಮೆಲ್ಲರ ವಿಷಯದಲ್ಲಿ ಮಾತ ನಾಡುವದಿಲ್ಲ; ನಾನು ಆರಿಸಿಕೊಂಡವರನ್ನು ಬಲ್ಲೆನು; ಆದರೆ--ನನ್ನೊಂದಿಗೆ ರೊಟ್ಟಿಯನ್ನು ತಿನ್ನುವವನು ನನಗೆ ವಿರೋಧವಾಗಿ ತನ್ನ ಹಿಮ್ಮಡಿಯನ್ನು ಎತ್ತಿದ್ದಾನೆ ಎಂಬ ಬರಹವು ನೆರವೇರಬೇಕಾಗಿದೆ.

ತೀತ 1:16

ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.

Interlinear

Choose Theme