ಆದರೆ ಅರಸನು--ಅವನು ತನ್ನ ಮನೆಗೆ ತಿರುಗಿ ಹೋಗಲಿ; ಅವನು ನನ್ನ ಮುಖವನ್ನು ನೋಡಬಾರದು ಅಂದನು. ಆದದರಿಂದ ಅಬ್ಷಾಲೋಮನು ಅರಸನ ಮುಖವನ್ನು ನೋಡದೆ ತನ್ನ ಮನೆಗೆ ತಿರುಗಿ ಹೋದನು.
Cross references
ಆಗ ಯೆಹೂದನು ಅವನಿಗೆ--ಆ ಮನುಷ್ಯನು ನಮಗೆ--ನಿಮ್ಮ ತಮ್ಮನನ್ನು ನಿಮ್ಮ ಸಂಗಡ ಕರಕೊಂಡುಬಾರದ ಹೊರತು ನೀವು ನನ್ನ ಮುಖ ವನ್ನು ನೋಡಬಾರದೆಂದು ನಮಗೆ ಖಂಡಿತವಾಗಿ ಹೇಳಿದ್ದಾನೆ.
ಆಗ ಫರೋಹನು ಅವನಿಗೆ--ನನ್ನನ್ನು ಬಿಟ್ಟು ಹೋಗು, ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು; ಯಾಕಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವಿ ಅಂದನು.ಮೋಶೆಯು ಅವನಿಗೆ--ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವದಿಲ್ಲ ಅಂದನು.
ಅದಕ್ಕವನು--ಒಳ್ಳೇದು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡುವೆನು; ಆದರೆ ಒಂದನ್ನು ನಾನು ನಿನ್ನನ್ನು ಕೇಳುತ್ತೇನೆ; ಏನಂದರೆ, ನೀನು ನನ್ನ ಮುಖವನ್ನು ನೋಡುವದಕ್ಕೆ ಬರುವಾಗ ಸೌಲನ ಮಗಳಾದ ವಿಾಕಲಳನ್ನು ನೀನು ಕರಕೊಂಡು ಬಾರದೆ ಹೋದರೆ ನೀನು ನನ್ನ ಮುಖವನ್ನು ನೋಡಬಾರದು ಅಂದನು.
ಹೀಗೆಯೇ ಅಬ್ಷಾಲೋಮನು ಅರಸನ ಮುಖ ವನ್ನು ನೋಡದೆ ಪೂರ್ಣವಾಗಿ ಎರಡು ವರುಷ ಯೆರೂಸಲೇಮಿನಲ್ಲಿ ವಾಸವಾಗಿದ್ದನು.
ಅವರು ಆತನ ಮುಖವನ್ನು ನೋಡುವರು; ಅವರ ಹಣೆಗಳ ಮೇಲೆ ಆತನ ಹೆಸರು ಇರುವದು.