Home Bibles 2 ಸಮುವೇಲ 13:14 · ಕನ್ನಡ ಬೈಬಲ್
2 ಸಮುವೇಲ 13:14 · ಕನ್ನಡ ಬೈಬಲ್

ಅವನು ಅವಳ ಮಾತನ್ನು ಕೇಳಲೊಲ್ಲದೆ ತಾನು ಅವಳಿಗಿಂತ ಬಲವುಳ್ಳವನಾಗಿದ್ದದರಿಂದ ಅವಳನ್ನು ಕುಂದಿಸಿ ಅವಳ ಸಂಗಡ ಮಲಗಿದನು.

Cross references

ಆದಿಕಾಂಡ 34:2

ದೇಶದ ಪ್ರಭುವಾಗಿದ್ದ ಹಿವ್ವಿಯನಾದ ಹಮೋರನ ಮಗನಾದ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಕೂಡಿ ಅಶುದ್ಧ ಮಾಡಿದನು.

ದ್ವಿತೀಯೋಪದೇಶಕಾಂಡ 22:25

ಒಬ್ಬ ಮನುಷ್ಯನು ನಿಶ್ಚಯಮಾಡಿದ ಹುಡುಗಿ ಯನ್ನು ಹೊಲದಲ್ಲಿ ಕಂಡು ಅವಳನ್ನು ಬಲಾತ್ಕರಿಸಿ ಅವಳ ಸಂಗಡ ಮಲಗಿದರೆ ಅವಳ ಸಂಗಡ ಮಲಗಿದ ಮನುಷ್ಯನು ಮಾತ್ರ ಸಾಯಬೇಕು. ಆದರೆ ಆ ಹುಡುಗಿಗೆ ಏನೂ ಮಾಡಬೇಡ

ನ್ಯಾಯಾಧಿಪತಿಗಳು 20:5

ಆದರೆ ಗಿಬೆಯ ಪಟ್ಟಣದವರು ನನಗೆ ವಿರೋಧವಾಗಿ ಎದ್ದು ನಾನು ಇಳಿದಿದ್ದ ಮನೆ ಯನ್ನು ರಾತ್ತಿಯಲ್ಲಿ ಮುತ್ತಿಕೊಂಡು ನನ್ನನ್ನು ಕೊಂದು ಹಾಕುವದಕ್ಕೆ ಆಲೋಚಿಸಿ ನನ್ನ ಉಪಪತ್ನಿಯನ್ನು ಕುಂದಿಸಿದರು; ಅವಳು ಸತ್ತುಹೋದಳು.

2 ಸಮುವೇಲ 12:11

ಕರ್ತನು--ಇಗೋ, ನಾನು ನಿನ್ನ ಮನೆಯಲ್ಲಿ ಕೆಟ್ಟದ್ದನ್ನು ನಿನಗೆ ವಿರೋಧವಾಗಿ ಏಳುವಂತೆ ಮಾಡಿ ನಿನ್ನ ಕಣ್ಣುಗಳ ಮುಂದೆ ನಿನ್ನ ಹೆಂಡತಿಯರನ್ನು ತೆಗೆದು ನಿನ್ನ ನೆರೆಯವನಿಗೆ ಕೊಡುವೆನು. ಅವನು ಹಗಲಿನಲ್ಲಿಯೇ ಅವರ ಸಂಗಡ ಮಲಗುವನು.

ಎಸ್ತೇರ್ 7:8

ಅರಸನು ಅರ ಮನೆಯ ತೋಟದಿಂದ ದ್ರಾಕ್ಷಾರಸದ ಔತಣ ಸ್ಥಳಕ್ಕೆ ತಿರಿಗಿ ಬಂದಾಗ ಹಾಮಾನನು ಎಸ್ತೇರಳು ಕುಳಿತಿರುವ ಹಾಸಿಗೆಯ ಮೇಲೆ ಬಿದ್ದಿದ್ದನು. ಆಗ ಅರಸನು--ನನ್ನ ಮುಂದೆ ಅವನು ರಾಣಿಯನ್ನು ಬಲಾತ್ಕಾರ ಮಾಡು ವನೋ ಅಂದನು. ಆ ಮಾತು ಅರಸನ ಬಾಯಿಂದ ಹೊರಟಾಗ ಸೇವಕರು ಹಾಮಾನನ ಮುಖವನ್ನು ಮುಚ್ಚಿದರು.

Interlinear

Choose Theme