Home Bibles 2 ಸಮುವೇಲ 11:16 · ಕನ್ನಡ ಬೈಬಲ್
2 ಸಮುವೇಲ 11:16 · ಕನ್ನಡ ಬೈಬಲ್

ಹಾಗೆಯೇ ಯೋವಾಬನು ಆ ಪಟ್ಟಣವನ್ನು ನೋಡಿಕೊಂಡಾಗ ಯಾವ ಸ್ಥಳದಲ್ಲಿ ಪರಾಕ್ರಮಶಾಲಿಗಳು ಇರುವರೆಂದು ತಿಳುಕೊಂಡನೋ ಅಲ್ಲಿ ಊರೀಯನನ್ನು ನಿಲ್ಲಿಸಿದನು.

Cross references

1 ಸಮುವೇಲ 22:17

ಅರಸನು ತನ್ನ ಬಳಿಯಲ್ಲಿ ನಿಂತಿರುವ ಕಾಲಾಳಿಗೆನೀವು ತಿರುಗಿಕೊಂಡು ಕರ್ತನ ಯಾಜಕರನ್ನು ಕೊಂದು ಹಾಕಿರಿ. ಅವರ ಕೈ ದಾವೀದನ ಸಂಗಡ ಸಹಾಯ ವಾಗಿದೆ. ಅವನು ಓಡಿಹೋಗುವದನ್ನು ಅವರು ತಿಳಿದಿದ್ದು ಅದನ್ನು ನನಗೆ ತಿಳಿಸದೆ ಹೋದರು ಅಂದನು. ಆದರೆ ಅರಸನ ಸೇವಕರು ಕರ್ತನ ಯಾಜಕರ ಮೇಲೆ ಬೀಳಲು ತಮ್ಮ ಕೈಯನ್ನು ಚಾಚಲೊಲ್ಲದೆ ಹೋದರು.

2 ಸಮುವೇಲ 3:27

ಅಬ್ನೇರನು ಹೆಬ್ರೋನಿಗೆ ತಿರಿಗಿ ಬಂದ ತರುವಾಯ ಯೋವಾಬನು ಬಾಗಲಲ್ಲಿ ಅವನ ಸಂಗಡ ಸಮಾಧಾನವಾಗಿ ಮಾತ ನಾಡಿ ಅವನನ್ನು ಒಂದು ಕಡೆ ಕರಕೊಂಡು ಹೋಗಿ ತನ್ನ ತಮ್ಮನಾದ ಅಸಾಹೇಲನ ರಕ್ತಾಪರಾಧದ ನಿಮಿತ್ತ ಅಲ್ಲಿ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ಇರಿದು ಕೊಂದುಹಾಕಿದನು.

2 ಸಮುವೇಲ 11:21

ಅವರು ಗೋಡೆ ಯಿಂದ ಎಸೆಯುವರೆಂದು ನಿಮಗೆ ತಿಳಿದಿರಲಿಲ್ಲವೋ? ಯೆರುಬ್ಬೆಷೆತನ ಮಗನಾದ ಅಬೀಮೆಲೆಕನನ್ನು ಕೊಂದ ವರಾರು? ತೇಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲಿನ ತುಂಡನ್ನು ಅವನ ಮೇಲೆ ಹಾಕಿದಾಗ ಅವನು ಸತ್ತನಲ್ಲವೇ? ನೀವು ಗೋಡೆಗೆ ಇಷ್ಟು ಸವಿಾಪವಾಗಿ ಹೋದದ್ದೇನು ಎಂದು ನಿನ್ನನ್ನು ಕೇಳಿದರೆ ಆಗ ನೀನು--ನಿನ್ನ ಸೇವಕ ನಾದ ಊರೀಯನೆಂಬ ಹಿತ್ತಿಯನು ಸತ್ತನೆಂದು ಹೇಳು ಅಂದನು.

2 ಸಮುವೇಲ 20:9

ಆಗ ಯೋವಾಬನು ಅಮಾಸನಿಗೆ--ನನ್ನ ಸಹೋದರನೇ, ಕ್ಷೇಮವೋ ಅಂದನು. ಯೋವಾಬನು ಮುದ್ದಿಡುವುದಕ್ಕೋಸ್ಕರ ತನ್ನ ಬಲಗೈಯಿಂದ ಅವನ ಗಡ್ಡವನ್ನು ಹಿಡಿದನು. ಆದರೆ ಅಮಾಸನು ಯೋವಾಬನ ಕೈಯಲ್ಲಿದ್ದ ಕತ್ತಿ ಯನ್ನು ಗಮನಿಸದಿದ್ದಾಗ ಯೋವಾಬನು ಅವನನ್ನು ಕರುಳುಗಳು ಹೊರಬರುವ ಹಾಗೆ ಅವನ ಪಕ್ಕೆಯ ಐದನೇ ಎಲುಬಿನಲ್ಲಿ ತಿವಿದನು.

1 ಅರಸುಗಳು 2:5

ಇದಲ್ಲದೆ ಚೆರೂಯಳ ಮಗನಾದ ಯೋವಾಬನು ನನಗೂ ಇಸ್ರಾಯೇಲಿನ ಸೈನ್ಯಗಳಿಗೆ ಇಬ್ಬರು ಅಧಿಪತಿಗಳಾದ ನೇರನ ಮಗನಾದ ಅಬ್ನೇರ ನಿಗೂ ಯೇತ್ರನ ಮಗನಾದ ಅಮಾಸನಿಗೂ ಏನು ಮಾಡಿದನೋ ನೀನು ಬಲ್ಲೆ. ಯಾಕಂದರೆ ಅವನು ಅವರನ್ನು ಕೊಂದು ಸಮಾಧಾನದಲ್ಲಿ ಯುದ್ಧದ ರಕ್ತ ವನ್ನು ಚೆಲ್ಲಿ ತನ್ನ ನಡುವಿನಲ್ಲಿರುವ ನಡುಕಟ್ಟಿನ ಮೇಲೆಯೂ ತನ್ನ ಪಾದಗಳಲ್ಲಿರುವ ಪಾದರಕ್ಷೆಗಳ ಮೇಲೆಯೂ ಯುದ್ಧದ ರಕ್ತವನ್ನು ಹಚ್ಚಿಕೊಂಡನು.

1 ಅರಸುಗಳು 2:31

ಅರಸನು ಅವ ನಿಗೆ--ಅವನು ಹೇಳಿದ ಪ್ರಕಾರ ಮಾಡು; ನನ್ನಿಂದಲೂ ನನ್ನ ತಂದೆಯ ಮನೆಯಿಂದಲೂ ಯೋವಾಬನು ಚೆಲ್ಲಿದ ನಿರಪರಾಧ ರಕ್ತವನ್ನು ತೊಲಗಿಸುವ ಹಾಗೆ ಅವನ ಮೇಲೆ ಬಿದ್ದು ಅವನನ್ನು ಹೂಣಿಡು.

1 ಅರಸುಗಳು 21:12

ಅವರು ಉಪವಾಸವನ್ನು ಪ್ರಕಟಮಾಡಿ ನಾಬೋತನನ್ನು ಜನರೊಳಗೆ ಎತ್ತರ ಸ್ಥಳದಲ್ಲಿ ನಿಲ್ಲಿಸಿ ದರು.

2 ಅರಸುಗಳು 10:6

ಆಗ ಅವನು ಅವರಿಗೆ ಎರಡನೇ ಸಾರಿ ಪತ್ರವನ್ನು ಬರೆದು--ನೀವು ನನ್ನವರಾಗಿದ್ದು ನನ್ನ ಮಾತು ಕೇಳುವ ವರಾಗಿದ್ದರೆ ನಿಮ್ಮ ಯಜಮಾನನ ಮಕ್ಕಳಾಗಿರುವ ಮನು ಷ್ಯರ ತಲೆಗಳನ್ನು ತಕ್ಕೊಂಡು ನಾಳೆ ಇಷ್ಟು ಹೊತ್ತಿಗೆ ಇಜ್ರೇಲಿಗೆ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದನು. ಅರಸನ ಮಕ್ಕಳಾದ ಎಪ್ಪತ್ತು ಮಂದಿ ಮಕ್ಕಳು ತಮ್ಮನ್ನು ಪೋಷಿಸುವ ಪಟ್ಟಣದ ಪ್ರಮುಖರ ಬಳಿಯಲ್ಲಿ ಇದ್ದರು.

ಸಾಮೇತಿಗಳು 29:12

ಸುಳ್ಳಿಗೆ ಕಿವಿಗೊಡುವ ಅಧಿಕಾರಿಗೆ ಕಿವಿಗೊಟ್ಟರೆ ಅವನ ಸೇವಕರೆಲ್ಲರೂ ದುಷ್ಟರೇ.

ಹೊಶೇಯ 5:11

ಎಫ್ರಾಯಾಮು ಆಜ್ಞೆಯಂತೆ ಇಷ್ಟ ಪೂರ್ವಕವಾಗಿ ನಡೆದ ಕಾರಣ ಅವನು ನ್ಯಾಯತೀರ್ಪಿನೊಳಗೆ ಕುಂದಿ ಹೋಗಿ ಜಜ್ಜಲ್ಪಟ್ಟನು.

ಅಪೋಸ್ತಲರ ಕೃತ್ಯಗಳು 5:29

ಆಗ ಪೇತ್ರನೂ ಉಳಿದ ಅಪೊಸ್ತಲರೂ ಪ್ರತ್ಯುತ್ತರವಾಗಿ--ನಾವು ಮನುಷ್ಯರಿಗಿಂತ ದೇವರಿಗೆ ವಿಧೇಯರಾಗತಕ್ಕದ್ದು.

Interlinear

Choose Theme