ದಾವೀದನ ಸೇವಕರು ಅಮ್ಮೋನನ ಮಕ್ಕಳ ದೇಶಕ್ಕೆ ಬಂದಾಗ ಅಮ್ಮೋನನ ಮಕ್ಕಳ ಪ್ರಧಾನರು ತಮ್ಮ ಯಜಮಾನನಾದ ಹಾನೂನ ನಿಗೆ--ದಾವೀದನು ಆದರಣೆ ಹೇಳುವವರನ್ನು ನಿನ್ನ ಬಳಿಗೆ ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನ ಪಡಿಸುತ್ತಾನೆಂದು ಯೋಚಿಸುತ್ತೀಯೋ? ಈ ಪಟ್ಟಣ ವನ್ನು ಶೋಧಿಸುವದಕ್ಕೂ ಪಾಳತಿನೋಡುವದಕ್ಕೂ ಅದನ್ನು ಕೆಡವಿಹಾಕುವದಕ್ಕೂ ದಾವೀದನು ತನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸಿದ್ದಲ್ಲವೋ ಅಂದರು.
Cross references
ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವ ರಿಗೆ--ನೀವು ಗೂಢಚಾರರು; ದೇಶದ ಒಳಗುಟ್ಟನ್ನು ನೋಡುವದಕ್ಕಾಗಿ ಬಂದಿದ್ದೀರಿ ಅಂದನು.
ನಿಮ್ಮಲ್ಲಿ ಒಬ್ಬನನ್ನು ಕಳುಹಿಸಿರಿ; ಅವನು ನಿಮ್ಮ ಸಹೋದರ ನನ್ನು ಕರಕೊಂಡು ಬರಲಿ. ಆದರೆ ನೀವು ಸೆರೆಮನೆ ಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ ಇಲ್ಲವೋ ಎಂದು ನಿಮ್ಮ ಮಾತುಗಳು ಪರೀಕ್ಷಿಸಲ್ಪಡು ವವು. ಇಲ್ಲದಿದ್ದರೆ ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು ಎಂದು ಹೇಳಿದನು.
ನೇರನ ಮಗನಾದ ಅಬ್ನೇರನನ್ನು ನೀನು ಅರಿತಿದ್ದಿಯಲ್ಲಾ. ನಿಶ್ಚಯವಾಗಿ ಅವನು ನಿನ್ನನ್ನು ಮೋಸಗೊಳಿಸಲು ನಿನ್ನ ಹೊರಡು ವಿಕೆಯನ್ನೂ ಬರುವಿಕೆಯನ್ನೂ ತಿಳಿಯುವಂತೆಯೂ ನೀನು ಮಾಡುವದನ್ನೆಲ್ಲಾ ತಿಳಿಯುವದಕ್ಕೂ ಬಂದಿದ್ದನು ಅಂದನು.
ಮರ್ಯಾದೆ ಗೆಟ್ಟು ನಡೆಯುವದಿಲ್ಲ, ಸ್ವಾರ್ಥತೆಯನ್ನು ಬಯಸು ವದಿಲ್ಲ, ಬೇಗನೆ ಕೋಪಗೊಳ್ಳುವದಿಲ್ಲ, ಕೆಟ್ಟದ್ದನ್ನು ಯೋಚಿಸುವದಿಲ್ಲ.
ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ.