Home Bibles 2 ಸಮುವೇಲ 10:15 · ಕನ್ನಡ ಬೈಬಲ್
2 ಸಮುವೇಲ 10:15 · ಕನ್ನಡ ಬೈಬಲ್

ಅರಾಮ್ಯರು ತಾವು ಇಸ್ರಾಯೇಲ್ಯರ ಮುಂದೆ ಹೊಡೆಯಲ್ಪಟ್ಟದ್ದನ್ನು ಕಂಡಾಗ ಅವರು ಒಟ್ಟಾಗಿ ಕೂಡಿದರು.

Cross references

ಯೆಹೋಶುವ 11:1

ಹಾಚೋರಿನ ಅರಸನಾದ ಯಾಬೀನನು ಇವುಗಳನ್ನು ಕೇಳಿದಾಗ ಆದದ್ದೇನಂದರೆ, ಅವನು ಮಾದೋನಿನ ಅರಸನಾದ ಯೋಬಾಬನ ಬಳಿಗೂ ಶಿಮ್ರೋನಿನ ಅರಸನ ಬಳಿಗೂ ಅಕ್ಷಾಫಿನ ಅರಸನ ಬಳಿಗೂ

ಯೆಹೋಶುವ 11:5

ಈ ಅರಸುಗಳೆಲ್ಲಾ ಕೂಡಿಕೊಂಡು ಇಸ್ರಾಯೇಲಿನ ಸಂಗಡ ಯುದ್ಧಮಾಡಲು ಬಂದು ಒಟ್ಟಾಗಿ ಮೇರೋಮು ಎಂಬ ನೀರುಗಳ ಬಳಿಯಲ್ಲಿ ಇಳುಕೊಂಡರು.

ಕೀರ್ತನೆಗಳು 2:1

ಅನ್ಯಜನರು ಕೋಪೋದ್ರೇಕಗೊಳ್ಳುವದೂ ಪ್ರಜೆಗಳು ವ್ಯರ್ಥವಾದದ್ದನ್ನು ಯೋಚಿಸುವದೂ ಯಾಕೆ?

ಯೆಶಾಯ 8:9

ಓ ಪ್ರಜೆಗಳೇ, ನೀವು ಕೂಡಿಕೊಳ್ಳಿರಿ; ನೀವು ಒಡೆದು ಚೂರುಚೂರಾಗುವಿರಿ; ಎಲ್ಲಾ ದೂರ ದೇಶದ ವರೇ, ಕಿವಿಗೊಡಿರಿ, ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ; ನಡುಕಟ್ಟಿಕೊಳ್ಳಿರಿ ನೀವು ಒಡೆದು ಚೂರು ಚೂರಾಗುವಿರಿ.

ಮೀಕ 4:11

ಆದರೆ ಈಗ ಅನೇಕ ಜನಾಂಗಗಳು ನಿನಗೆ ವಿರೋಧವಾಗಿ ಕೂಡಿಬಂದಿವೆ; ಅವರು--ಅವಳು ಕೆಡಿಸಲ್ಪಡಲಿ, ಚೀಯೋನಿನ ಮೇಲೆ ನಮ್ಮ ಕಣ್ಣುಗಳು ದೃಷ್ಟಿಸಲಿ ಎಂದು ಹೇಳುತ್ತಾರೆ.

ಜೆಕರ್ಯ 14:2

ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ.

ಪ್ರಕಟನೆ 19:19

ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು.

Interlinear

Choose Theme