Home Bibles 2 ಸಮುವೇಲ 1:19 · ಕನ್ನಡ ಬೈಬಲ್
2 ಸಮುವೇಲ 1:19 · ಕನ್ನಡ ಬೈಬಲ್

ಏನಂದರೆ--ಇಸ್ರಾಯೇಲಿನ ಸೌಂದರ್ಯವು ಉನ್ನತಸ್ಥಳಗಳ ಮೇಲೆ ಕೊಲ್ಲಲ್ಪಟ್ಟಿದೆ. ಪರಾಕ್ರಮ ಶಾಲಿಗಳು ಹೇಗೆ ಬಿದ್ದರು!

Cross references

ದ್ವಿತೀಯೋಪದೇಶಕಾಂಡ 4:7

ನಾವು ಆತನಿಗೆ ಮೊರೆ ಯಿಡುವ ಎಲ್ಲಾ ವಿಷಯಗಳಲ್ಲಿ ನಮ್ಮ ದೇವರಾದ ಕರ್ತನು ನಮಗೆ ಸವಿಾಪವಿರುವ ಪ್ರಕಾರ ಬೇರೆ ಸವಿಾಪವಾದ ದೇವರುಳ್ಳ ದೊಡ್ಡ ಜನಾಂಗ ಯಾವದು?

1 ಸಮುವೇಲ 31:8

ಮಾರನೇ ದಿವಸದಲ್ಲಿ ಫಿಲಿಷ್ಟಿಯರು ಕೊಲ್ಲಲ್ಪಟ್ಟವ ರನ್ನು ಸುಲುಕೊಳ್ಳಲು ಬಂದಾಗ ಗಿಲ್ಬೋವ ಬೆಟ್ಟದಲ್ಲಿ ಬಿದ್ದಿರುವ ಸೌಲನನ್ನೂ ಅವನ ಮೂವರು ಮಕ್ಕಳನ್ನೂ ಕಂಡುಕೊಂಡು

2 ಸಮುವೇಲ 1:23

ಸೌಲನೂ ಯೋನಾತಾನನೂ ಜೀವದಿಂದಿದ್ದಾಗ ಪ್ರಿಯಕರವಾಗಿಯೂ ಸಂತೋಷಕರವಾಗಿಯೂ ಇದ್ದರು; ತಮ್ಮ ಮರಣದಲ್ಲಿಯೂ ಅಗಲಿ ಹೋಗದೆ ಇದ್ದರು. ಅವರು ಹದ್ದುಗಳಿಗಿಂತ ವೇಗವುಳ್ಳವರೂ ಸಿಂಹಗಳಿಗಿಂತ ಬಲ ವುಳ್ಳವರೂ ಆಗಿದ್ದರು.

2 ಸಮುವೇಲ 1:25

ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ! ಯೋನಾತಾನನೇ, ನೀನು ನಿನ್ನ ಉನ್ನತಸ್ಥಳಗಳಲ್ಲಿ ಕೊಲ್ಲಲ್ಪಟ್ಟಿ.

2 ಸಮುವೇಲ 1:27

ಪರಾಕ್ರಮಶಾಲಿಗಳು ಹೇಗೆ ಯುದ್ಧದಲ್ಲಿ ಬಿದ್ದಿದ್ದಾರೆ; ಯುದ್ಧದ ಆಯುಧಗಳು ನಾಶವಾಗಿ ಹೋದವಲ್ಲಾ.

ಯೆಶಾಯ 4:2

ಆ ದಿನದಲ್ಲಿ ಕರ್ತನ ಕೊಂಬೆಯು ಸುಂದರವಾ ಗಿಯೂ ಮಹಿಮೆಯುಳ್ಳದ್ದಾಗಿಯೂ ಇರುವದು. ಭೂಮಿಯ ಫಲವು ಇಸ್ರಾಯೇಲ್ಯರಲ್ಲಿ ಉಳಿದವರಿಗೆ ಉತ್ತಮವಾಗಿಯೂ ರಮ್ಯವಾಗಿಯೂ ಇರುವದು.

ಯೆಶಾಯ 53:2

ಆತನು ಚಿಗುರಿನಂತೆಯೂ ಒಣನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಆತನ ಮುಂದೆ ಬೆಳೆ ಯುವನು. ಆತನಿಗೆ ಯಾವ ರೂಪವಾಗಲಿ ಅಂದವಾ ಗಲಿ ಇರಲಿಲ್ಲ; ನಾವು ಆತನನ್ನು ನೋಡಿದಾಗ ಅಲ್ಲಿ ನಾವು ಅಪೇಕ್ಷಿಸುವಂಥ ಯಾವ ಚಂದವೂ ಇರಲಿಲ್ಲ.

ವಿಲಾಪಗಳು 2:1

ಕರ್ತನು ಹೇಗೆ ತನ್ನ ಕೋಪದಲ್ಲಿ ಮೇಘದಿಂದ ಚೀಯೋನಿನ ಮಗಳನ್ನು ಮುಚ್ಚಿ, ಇಸ್ರಾಯೇಲಿನ ಸೌಂದರ್ಯವನ್ನು ಆಕಾಶದಿಂದ ಭೂಮಿಗೆ ಎಸೆದು ತನ್ನ ಕೋಪದ ದಿನದಲ್ಲಿ ತನ್ನ ಪಾದಪೀಠವನ್ನು ಜ್ಞಾಪಕಮಾಡಿಕೊಳ್ಳಲಿಲ್ಲಾ!

ವಿಲಾಪಗಳು 5:16

ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ.

ಜೆಕರ್ಯ 11:7

ಆಗ ಕೊಯ್ಗುರಿಗಳ ಮಂದೆ ಯನ್ನು ಹೌದು, ಬಡವಾದ ಮಂದೆಯನ್ನೇ ಮೇಯಿಸಿದೆನು; ನನಗಾಗಿ ಎರಡು ಕೋಲುಗಳನ್ನು ತಕ್ಕೊಂಡೆನು; ಒಂದಕ್ಕೆ ಸೌಂದರ್ಯ ಎಂದೂ ಮತ್ತೊಂದಕ್ಕೆ ಬಂಧ ಗಳೆಂದೂ ಹೆಸರಿಟ್ಟೆನು; ಹೀಗೆ ಮಂದೆಯನ್ನು ಮೇಯಿ ಸಿದೆನು.

ಜೆಕರ್ಯ 11:10

ಆಗ ಸೌಂದರ್ಯವೆಂಬ ನನ್ನ ಕೋಲನ್ನು ತಕ್ಕೊಂಡು ಅದನ್ನು ಮುರಿದುಬಿಟ್ಟೆನು; ಹೀಗೆ ಜನರೆಲ್ಲರ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ಮುರಿದುಬಿಟ್ಟೆನು,

Interlinear

Choose Theme