Home Bibles 2 ಸಮುವೇಲ 1:10 · ಕನ್ನಡ ಬೈಬಲ್
2 ಸಮುವೇಲ 1:10 · ಕನ್ನಡ ಬೈಬಲ್

ಆದದರಿಂದ ಇವನು ಬಿದ್ದ ತರುವಾಯ ಬದುಕಲಾರನೆಂದು ನಾನು ತಿಳಿದು ಅವನ ಮೇಲೆ ನಿಂತು ಅವನನ್ನು ಕೊಂದುಹಾಕಿದೆನು. ಅವನ ತಲೆಯ ಮೇಲಿದ್ದ ಕಿರೀಟವನ್ನೂ ಅವನ ಕೈಯಲ್ಲಿದ್ದ ಕಡಗ ವನ್ನೂ ತೆಗೆದುಕೊಂಡು ಅವುಗಳನ್ನು ನನ್ನ ಒಡೆಯನಿಗೆ ಇಲ್ಲಿ ತಂದೆನು ಅಂದನು.

Cross references

ನ್ಯಾಯಾಧಿಪತಿಗಳು 1:7

ಆಗ ಅದೋನೀಬೆಜೆಕನು--ನಾನು ಕೈಕಾಲು ಗಳ ಹೆಬ್ಬೆರಳುಗಳನ್ನು ಕತ್ತರಿಸಿದ ಎಪ್ಪತ್ತು ಮಂದಿ ಅರಸುಗಳು ನನ್ನ ಮೇಜಿನ ಕೆಳಗೆ ತಮ್ಮ ಆಹಾರ ವನ್ನು ಕೂಡಿಸಿದರು; ನಾನು ಹೇಗೆ ಮಾಡಿದೆನೋ ಹಾಗಾಯೇ ದೇವರು ನನಗೆ ಮುಯ್ಯಿಗೆ ಮುಯ್ಯಿಮಾಡಿದ್ದಾನೆ ಅಂದನು. ಅವನನ್ನು ಯೆರೂಸಲೇಮಿಗೆ ತಕ್ಕೊಂಡು ಬಂದರು; ಅವನು ಅಲ್ಲಿ ಸತ್ತನು.

ನ್ಯಾಯಾಧಿಪತಿಗಳು 9:54

ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕ ನನ್ನು ಕರೆದು ಅವನಿಗೆ--ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಕತ್ತಿಯನ್ನು ಇರಿದು ನನ್ನನ್ನು ಕೊಲ್ಲು ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು; ಅವನು ಸತ್ತನು.

1 ಸಮುವೇಲ 22:18

ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು.

1 ಸಮುವೇಲ 31:4

ಆದಕಾರಣ ಅವನು ತನ್ನ ಆಯುಧ ಹಿಡಿಯುವವನಿಗೆ--ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ತಿವಿದುಬಿಟ್ಟು ಅವಮಾನ ಮಾಡದ ಹಾಗೆ ನೀನು ನಿನ್ನ ಕತ್ತಿಯನ್ನು ಹಿರಿದು ನನ್ನನ್ನು ಅದರಿಂದ ತಿವಿ ಅಂದನು. ಆದರೆ ಅವನ ಆಯುಧ ಹಿಡಿಯು ವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡ ಲೊಲ್ಲದೆ ಹೋದನು. ಆಗ ಸೌಲನು ತಾನೇ ಕತ್ತಿ ಯನ್ನು ತಕ್ಕೊಂಡು ಅದರ ಮೇಲೆ ಬಿದ್ದನು.

2 ಸಮುವೇಲ 12:30

ಅದರ ಅರಸನ ತಲೆಯಮೇಲೆ ಇದ್ದ ಕಿರೀಟವನ್ನು ತೆಗೆದುಕೊಂಡನು. ಅದು ಬಂಗಾರದ್ದಾಗಿ ಒಂದು ತಲಾಂತಿನ ತೂಕವಾಗಿತ್ತು; ರತ್ನಗಳಿಂದ ಕೆತ್ತಲ್ಪಟ್ಟಿತ್ತು. ಅದು ದಾವೀದನ ತಲೆಯ ಮೇಲೆ ಇರಿಸಲ್ಪಟ್ಟಿತು. ಇದಲ್ಲದೆ ಅವನು ಆ ಪಟ್ಟಣದಿಂದ ಬಹು ಅಧಿಕವಾಗಿ ಕೊಳ್ಳೆಯನ್ನು ತಂದನು.ಆದರೆ ಅದರಲ್ಲಿದ್ದ ಜನರನ್ನು ಅವನು ಹೊರಗೆ ತಂದು ಅವರನ್ನು ಗರಗಸ ಸಲಿಕೆ ಕೊಡ್ಲಿಯ ಕೆಲಸಕ್ಕೂ ಇಟ್ಟಿಗೆ ಭಟ್ಟಿಯ ಕೆಲಸಕ್ಕೂ ಇಟ್ಟನು. ಈ ಪ್ರಕಾರವೇ ಅಮ್ಮೊನನ ಮಕ್ಕಳ ಎಲ್ಲಾ ಪಟ್ಟಣಗಳಿಗೂ ಮಾಡಿ ದಾವೀದನೂ ಜನರೆಲ್ಲರೂ ಯೆರೂಸಲೇಮಿಗೆ ತಿರಿಗಿ ಬಂದರು.

2 ಅರಸುಗಳು 11:12

ಆಗ ಅವನು ಅರಸನ ಮಗನನ್ನು ಹೊರಗೆ ಕರತಂದು ಕಿರೀಟವನ್ನು ಅವನ ತಲೆಯ ಮೇಲೆ ಇರಿಸಿ ಸಾಕ್ಷಿಯನ್ನು ಕೊಟ್ಟನು. ಅವರು ಅವನನ್ನು ಅರಸನಾಗ ಮಾಡಿ ಅಭಿಷೇಕಿಸಿ ಚಪ್ಪಾಳೆ ಹೊಡೆದುಅರಸನು ಬಾಳಲಿ ಅಂದರು.

ವಿಲಾಪಗಳು 5:16

ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ.

ಮತ್ತಾಯ 7:2

ನೀವು ಮಾಡುವ ತೀರ್ಪಿ ನಿಂದಲೇ ನಿಮಗೆ ತೀರ್ಪಾಗುವದು; ಮತ್ತು ನೀವು ಅಳೆಯುವ ಅಳತೆಯಿಂದಲೇ ನಿಮಗೆ ತಿರಿಗಿ ಅಳತೆ ಯಾಗುವದು.

Interlinear

Choose Theme