Home Bibles 2 ಅರಸುಗಳು 9:2 · ಕನ್ನಡ ಬೈಬಲ್
2 ಅರಸುಗಳು 9:2 · ಕನ್ನಡ ಬೈಬಲ್

ನೀನು ಅಲ್ಲಿಗೆ ಸೇರಿದಾಗ ನಿಂಷಿಯ ಮಗನಾಗಿರುವ ಯೆಹೋಷಾಫಾಟನ ಮಗ ನಾದ ಯೇಹುವನ್ನು ಅಲ್ಲಿ ನೋಡಿ ಒಳಗೆ ಹೋಗಿ ಅವನನ್ನು ತನ್ನ ಸಹೋದರರ ಮಧ್ಯದಿಂದ ಏಳ ಮಾಡಿ ಒಳಗಿನ ಕೊಠಡಿಗೆ ಕರಕೊಂಡು ಹೋಗಿ ಎಣ್ಣೆಯ ಪಾತ್ರೆಯನ್ನು ತಕ್ಕೊಂಡು ಅವನ ತಲೆಯ ಮೇಲೆ ಹೊಯ್ದು

Cross references

1 ಅರಸುಗಳು 19:16

ಹಜಾಯೇಲನ ಕತ್ತಿಗೆ ತಪ್ಪಿದವನನ್ನು ಯೇಹುವ ಕೊಂದುಹಾಕುವನು;

1 ಅರಸುಗಳು 20:30

ಮಿಕ್ಕಾದವರು ಅಫೇಕ್‌ ಪಟ್ಟಣದೊಳಗೆ ಓಡಿ ಹೋದರು. ಅಲ್ಲಿ ಒಂದು ಗೋಡೆಯು ಉಳಿದ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಕೊಠಡಿಯ ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.

1 ಅರಸುಗಳು 22:25

ಅದಕ್ಕೆ ವಿಾಕಾಯೆಹುವುಇಗೋ, ನಿನ್ನನ್ನು ಬಚ್ಚಿಟ್ಟುಕೊಳ್ಳಲು ಒಳಕೊಠಡಿ ಯೊಳಗೆ ನೀನು ಹೋಗುವ ದಿವಸದಲ್ಲಿ ನೋಡುವಿ ಅಂದನು.

2 ಅರಸುಗಳು 9:5

ಅವನು ಅಲ್ಲಿ ಸೇರಿದಾಗ ಇಗೋ, ಸೈನ್ಯಾಧಿಪತಿಗಳು ಕುಳಿತುಕೊಂಡಿದ್ದರು. ಆಗ ಅವನು -- ಅಧಿಪತಿಯೇ, ನಿನಗೆ ಹೇಳಬೇಕಾದ ಮಾತು ನನಗೆ ಉಂಟು ಅಂದನು. ಯೇಹುವು ಅವ ನಿಗೆ--ನಮ್ಮೆಲ್ಲರಲ್ಲಿ ಯಾರಿಗೆ ಅಂದನು. ಅವನುಅಧಿಪತಿಯೇ, ನಿನಗೆ ಅಂದನು.

2 ಅರಸುಗಳು 9:11

ಆಗ ಯೇಹುವು ತನ್ನ ಯಜಮಾನನ ಸೇವಕರ ಬಳಿಗೆ ಹೊರಟು ಬಂದನು. ಅವರು ಅವನಿಗೆ ಎಲ್ಲವೂ ಕ್ಷೇಮವೋ? ಈ ಹುಚ್ಚನು ನಿನ್ನ ಬಳಿಗೆ ಬಂದದ್ದೇನು ಅಂದರು. ಅವನು ಅವರಿಗೆ--ಆ ಮನುಷ್ಯನನ್ನೂ ಅವನ ಮಾತನ್ನೂ ನೀವು ಬಲ್ಲಿರಿ ಅಂದನು.

2 ಅರಸುಗಳು 9:14

ಹೀಗೆ ನಿಂಷಿಯ ಮಗನಾಗಿ ರುವ ಯೆಹೋಷಾಫಾಟನ ಮಗನಾದ ಯೇಹುವು ಯೆಹೋರಾಮನಿಗೆ ವಿರೋಧವಾಗಿ ಒಳಸಂಚು ಮಾಡಿ ದನು. ಅರಾಮ್ಯರ ಅರಸನಾದ ಹಜಾಯೇಲನ ನಿಮಿತ್ತ ಯೆಹೋರಾಮನೂ ಎಲ್ಲಾ ಇಸ್ರಾಯೇಲ್ಯರೂ ಗಿಲ್ಯಾ ದಿನ ರಾಮೋತಿನಲ್ಲಿ ಕಾಯುತ್ತಾ ಇದ್ದರು.

2 ಅರಸುಗಳು 9:20

ಆಗ ಕಾವಲುಗಾರನು--ಇವನೂ ಅವರ ಬಳಿಗೆ ಹೋಗಿ ತಿರಿಗಿ ಬರಲಿಲ್ಲ. ಇದಲ್ಲದೆ ಓಡಿಸುವದು ನಿಂಷಿಯ ಮಗನಾದ ಯೇಹುವು ಓಡಿಸುವ ಹಾಗಿದೆ; ಯಾಕಂದರೆ ಅವನು ಹುಚ್ಚುತನವಾಗಿ ಓಡಿಸುತ್ತಾನೆ ಅಂದನು.

Interlinear

Choose Theme