Home Bibles 2 ಅರಸುಗಳು 8:10 · ಕನ್ನಡ ಬೈಬಲ್
2 ಅರಸುಗಳು 8:10 · ಕನ್ನಡ ಬೈಬಲ್

ಅದಕ್ಕೆ ಎಲೀಷನು--ಅವನಿಗೆ ನಿಜ ವಾಗಿಯೂ ಸ್ವಸ್ಥನಾಗುವಿ ಎಂದು ಹೋಗಿ ಹೇಳು; ಆದರೆ ಅವನು ನಿಜವಾಗಿ ಸಾಯುವನೆಂದು ಕರ್ತನು ನನಗೆ ತೋರಿಸಿದ್ದಾನೆ ಅಂದನು.

Cross references

ಆದಿಕಾಂಡ 2:17

ಆದರೆ ಒಳ್ಳೇದು ಕೆಟ್ಟದರ ತಿಳುವಳಿಕೆಯನ್ನುಂಟು ಮಾಡುವ ಮರದ ಫಲವನ್ನು ನೀನು ತಿನ್ನಬಾರದು; ಅದನ್ನು ತಿಂದ ದಿನದಲ್ಲಿ ಖಂಡಿತವಾಗಿ ಸಾಯುವಿ ಅಂದನು.

ಆದಿಕಾಂಡ 41:39

ಫರೋಹನು ಯೋಸೇಫನಿಗೆ--ದೇವರು ನಿನಗೆ ಇವುಗಳೆನ್ನಲ್ಲಾ ತೋರಿಸಿದ ಮೇಲೆ ನಿನ್ನ ಹಾಗೆ ವಿವೇಕಿಯೂ ಬುದ್ಧಿವಂತನೂ ಯಾರೂ ಇಲ್ಲ.

1 ಅರಸುಗಳು 22:15

ಅರಸನು ಅವನಿಗೆ--ವಿಾಕಾಯೆ ಹುವೇ, ನಾವು ಗಿಲ್ಯಾದಿನಲ್ಲಿರುವ ರಾಮೋತಿನ ಮೇಲೆ ಯುದ್ಧಕ್ಕೆಹೋಗಬಹುದೋ ಹೋಗಬಾ ರದೋ ಅಂದನು. ಇವನು ಪ್ರತ್ಯುತ್ತರವಾಗಿ--ಹೋಗಿ ಸಾಫಲ್ಯ ಹೊಂದು; ಕರ್ತನು ಅದನ್ನು ಅರಸನ ಕೈಯಲ್ಲಿ ಒಪ್ಪಿಸಿಕೊಡುವನು ಅಂದನು.

2 ಅರಸುಗಳು 1:4

ಇದರ ನಿಮಿತ್ತ ನೀನು ಏರಿದ ಮಂಚದಿಂದ ಇಳಿಯದೆ ನಿಶ್ಚಯವಾಗಿ ಸಾಯುವಿ ಎಂದು ಕರ್ತನು ಹೇಳುತ್ತಾನೆ ಅಂದನು. ಆಗ ಎಲೀಯನು ಹೊರಟುಹೋದನು.

2 ಅರಸುಗಳು 1:16

ಹಾಗೆಯೇ ಅವನು ಎದ್ದು ಅವನ ಸಂಗಡ ಅರಸನ ಬಳಿಗೆ ಇಳಿದು ಹೋಗಿ ಅವನಿಗೆ--ಆತನ ವಾಕ್ಯವನ್ನು ವಿಚಾರಿಸಲು ಇಸ್ರಾಯೇಲಿನಲ್ಲಿ ದೇವರು ಇಲ್ಲವೆಂದು ನೀನು ಎಕ್ರೋ ನಿನ ದೇವರಾದ ಬಾಳ್ಜೆಬೂಬನನ್ನು ವಿಚಾರಿಸಲು ಜನ ರನ್ನು ಕಳುಹಿಸಿದ ಕಾರಣ ನೀನು ಏರಿದ ಮಂಚ ದಿಂದ ಇಳಿಯದೆ ನಿಶ್ಚಯವಾಗಿ ಸಾಯುವಿ ಎಂದು ಕರ್ತನು ಹೇಳುತ್ತಾನೆ ಅಂದನು.

2 ಅರಸುಗಳು 8:13

ಹಜಾಯೇಲನು -- ಇಂಥಾ ಮಹಾ ಕೆಲಸವನ್ನು ಮಾಡುವದಕ್ಕೆ ನಿನ್ನ ಸೇವಕನು ನಾಯಿಯೋ ಏನು ಅಂದನು. ಎಲೀಷನು -- ನೀನು ಅರಾಮ್ಯರ ಮೇಲೆ ಅರಸನಾಗುವಿ ಎಂದು ಕರ್ತನು ನನಗೆ ತಿಳಿಸಿ ದ್ದಾನೆ ಅಂದನು.

ಯೆಹೆಜ್ಕೇಲ 11:25

ಆಮೇಲೆ ಕರ್ತನು ನನಗೆ ತೋರಿಸಿದ ಎಲ್ಲಾ ಸಂಗತಿಗಳನ್ನು ಸೆರೆಯವರೊಂದಿಗೆ ನಾನು ಮಾತನಾಡಿದೆನು.

ಯೆಹೆಜ್ಕೇಲ 18:13

ಬಡ್ಡಿಗೆ ಕೊಟ್ಟು ಲಾಭ ತೆಗೆದುಕೊಂಡು ಅವನು ಬದುಕುವನೋ? ಅವನು ಬದುಕುವದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿ ದ್ದಾನೆ; ಅವನು ನಿಶ್ಚಯವಾಗಿ ಸಾಯುವನು ಅವನ ರಕ್ತವು ಅವನ ಮೇಲೆಯೇ ಇರುವದು.

ಆಮೋಸ 3:7

ನಿಶ್ಚಯ ವಾಗಿ ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ಮರ್ಮ ವನ್ನು ತಿಳಿಸದೆ ಕರ್ತನಾದ ದೇವರು ಏನನ್ನೂ ಮಾಡು ವದಿಲ್ಲ.

ಆಮೋಸ 7:1

ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು; ಇಗೋ, ಹಿಂಗಾರು ಮಳೆ ಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ ಅಂದರೆ, ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಕರ್ತನು ಮಿಡತೆಗಳನ್ನು ಉಂಟುಮಾಡಿದನು.

ಆಮೋಸ 7:4

ಕರ್ತನಾದ ದೇವರು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನಾದ ದೇವರು ಬೆಂಕಿಯಿಂದ ತರ್ಕ ಮಾಡುವದಕ್ಕೆ ಕರೆದನು. ಅದು ದೊಡ್ಡ ಅಗಾಧವನ್ನೂ ನುಂಗಿತು ಮತ್ತು ವಿಭಾಗವನ್ನು ತಿಂದುಬಿಟ್ಟಿತು.

ಆಮೋಸ 7:7

ಆತನು ನನಗೆ ಹೀಗೆ ತೋರಿಸಿದನು; ಇಗೋ, ಕರ್ತನು ನೂಲು ಮಟ್ಟದ ನೆಟ್ಟಗಿರುವ ಗೋಡೆಯ ಮೇಲೆ ನಿಂತಿದ್ದನು. ಆತನ ಕೈಯಲ್ಲಿ ನೂಲುಮಟ್ಟ ಇತ್ತು.

ಆಮೋಸ 8:1

ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು--ಇಗೋ, ಬೇಸಿಗೆ ಹಣ್ಣು ಗಳುಳ್ಳ ಪುಟ್ಟಿ ಅಂದನು.

ಜೆಕರ್ಯ 1:20

ಆಗ ಕರ್ತನು ನನಗೆ ನಾಲ್ಕು ಬಡಗಿಯವರನ್ನು ತೋರಿಸಿದನು.ಆಗ ನಾನು--ಇವರು ಏನು ಮಾಡುವದಕ್ಕೆ ಬರುತ್ತಾರೆ ಅಂದೆನು. ಅದಕ್ಕೆ ಆತನು ಮಾತನಾಡಿ ಹೇಳಿದ್ದೇನಂದರೆ--ಯಾವನಾದರೂ ತಲೆಯನ್ನು ಎತ್ತದ ಹಾಗೆ ಯೆಹೂದವನ್ನು ಚದರಿಸಿದ ಕೊಂಬುಗಳು. ಆದರೆ ಇವರು ಅವರನ್ನು ಹೆದರಿಸಿ ಯೆಹೂದ ದೇಶದ ಮೇಲೆ ಅದನ್ನು ಚದರಿಸುವದಕ್ಕೆ ಕೊಂಬನ್ನು ಎತ್ತಿದ ಅನ್ಯಜನಾಂಗಗಳ ಕೊಂಬುಗಳನ್ನು ಕೆಳಗೆ ಹಾಕುವದಕ್ಕೆ ಬಂದಿದ್ದಾರೆ ಅಂದನು.

ಪ್ರಕಟನೆ 22:1

ಆಮೇಲೆ ಅವನು ಸ್ಫಟಿಕದಂತೆ ಸ್ವಚ್ಛವಾದ ಮತ್ತು ಶುದ್ಧವಾದ ಜೀವಜಲದ ನದಿ ಯನ್ನು ನನಗೆ ತೋರಿಸಿದನು; ಅದು ದೇವರ ಮತ್ತು ಕುರಿಮರಿಯಾದಾತನ ಸಿಂಹಾಸನದಿಂದ ಹೊರಡುವ ದಾಗಿತ್ತು.

Interlinear

Choose Theme