ನಾನು ಹೊಳೆಗಳಲ್ಲಿ ಸ್ನಾನ ಮಾಡಿ ಶುದ್ಧನಾಗುವ ಹಾಗೆ ದಮಸ್ಕದ ನದಿಗಳಾದ ಅಬಾನಾ ಪರ್ಪರ್ ಇಸ್ರಾಯೇಲಿನ ಎಲ್ಲಾ ನೀರಿಗಿಂತ ಉತ್ತಮವಲ್ಲವೋ ಎಂದು ಹೇಳಿ ತಿರುಗಿಕೊಂಡು ಕೋಪದಿಂದ ಹೋದನು.
Cross references
ಮಂಜೂಷವನ್ನು ಹೊತ್ತ ಯಾಜಕರು ಯೊರ್ದನಿಗೆ ಬಂದು ನೀರಿನಲ್ಲಿ ತಮ್ಮ ಕಾಲುಗಳನ್ನು ಇಡುತ್ತಲೇ ಸುಗ್ಗೀ ಕಾಲದಲ್ಲೆಲ್ಲಾ ದಡವಿಾರಿ ಹರಿಯುವ ಯೊರ್ದನ್ ಹೊಳೆಯ ನೀರು ನಿಂತು ಹೋಯಿತು.
ಎಲೀಯನು ತನ್ನ ಹೊದಿಕೆಯನ್ನು ತೆಗೆದು ಮಡಚಿಕೊಂಡು ನೀರನ್ನು ಹೊಡೆದನು. ಆಗ ಆ ನೀರು ವಿಭಾಗವಾದದರಿಂದ ಅವರಿಬ್ಬರೂ ಒಣ ಭೂಮಿಯ ಮೇಲೆ ದಾಟಿಹೋದರು.
ಎಲೀಯನಿಂದ ಬಿದ್ದ ಹೊದಿಕೆಯನ್ನು ತಕ್ಕೊಂಡು ನೀರನ್ನು ಹೊಡೆದು--ಎಲೀಯನ ದೇವರಾದ ಕರ್ತನು ಎಲ್ಲಿದ್ದಾನೆ ಅಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ ಅದು ಎರಡು ಭಾಗವಾದದ್ದರಿಂದ ಎಲೀ ಷನು ದಾಟಿಹೋದನು.
ಆಗ ನಾಮಾನನುಹಾಗಾದರೆ ಎರಡು ಹೇಸರ ಕತ್ತೆಗಳು ಹೊರತಕ್ಕ ಮಣ್ಣು ನಿನ್ನ ಸೇವಕನಿಗೆ ದಯಮಾಡಬೇಕಲ್ಲಾ. ನಿನ್ನ ಸೇವಕನು ಇನ್ನು ಮೇಲೆ ಕರ್ತನಿಗೆ ಹೊರತಾಗಿ ಅನ್ಯದೇವರುಗಳಿಗೆ ದಹನಬಲಿಯನ್ನಾದರೂ ಬಲಿ ಯನ್ನಾದರೂ ಅರ್ಪಿಸನು.
ಮುಂಗೋಪಿಯು ಬುದ್ಧಿಹೀನನಾಗಿ ವರ್ತಿಸುತ್ತಾನೆ; ಕುಯುಕ್ತಿಯುಳ್ಳವನು ಹಗೆಮಾಡು ತ್ತಾನೆ.
ಮನುಷ್ಯನ ವಿವೇಕವು ಅವನ ಕೋಪವನ್ನು ಅಡ್ಡಿಮಾಡುತ್ತದೆ. ದೋಷವನ್ನು ಲಕ್ಷಿ ಸದೆ ಇರುವದು ಅವನಿಗೆ ಘನತೆಯಾಗಿದೆ.
ನನ್ನ ಸಂಗಡ ಲೆಬನೋನಿನಿಂದ ಬಾ, ಪತ್ನಿಯೇ; ಲೆಬನೋನಿನಿಂದ ನನ್ನ ಸಂಗಡ ಬಾ. ಅಮಾನದ ಶಿಖರದಿಂದ, ಶೆನೀರ್, ಹೆರ್ಮೋನ್ ಶಿಖರದಿಂದ, ಸಿಂಹದ ಗವಿಗಳಿಂದ, ಚಿರತೆಗಳ ಪರ್ವತಗಳಿಂದ ದೃಷ್ಟಿಸು.
ಆಮೇಲೆ ಅವನು ನನ್ನನ್ನು ಮತ್ತೆ ಆಲಯದ ಬಾಗಲಿನ ಕಡೆಗೆ ಕರೆದುಕೊಂಡು ಹೋದನು. ಇಗೋ, ಆಲಯದ ಹೊಸ್ತಿಲಿನ ಕೆಳಗಿ ನಿಂದ ನೀರು ಹೊರಟು ಪೂರ್ವದ ಕಡೆಗೆ ನೀರು ಹರಿಯಿತು; ಆಲಯದ ಮುಂಭಾಗದಲ್ಲಿ ನೀರು ಇತ್ತು; ಆ ನೀರು ಬಲಪಾರ್ಶ್ವದಿಂದ ಯಜ್ಞವೇದಿಯ ದಕ್ಷಿಣದ ಕಡೆಗೆ ಹರಿಯಿತು.
ಆ ದಿನದಲ್ಲಿ ದಾವೀದನ ಮನೆತನದ ವರಿಗೂ ಯೆರೂಸಲೇಮಿನ ನಿವಾಸಿಗ ಳಿಗೂ ಪಾಪದ ನಿಮಿತ್ತ ಮತ್ತು ಅಶುದ್ಧತ್ವದ ನಿಮಿತ್ತ ಬುಗ್ಗೆ ತೆರೆಯಲ್ಪಡುವದು.
ಆ ದಿನದಲ್ಲಿ ಆಗುವದೇನಂದರೆ, ಯೆರೂಸಲೇಮಿ ನೊಳಗಿದ್ದ ಜೀವಜಲಗಳು ಹೊರಡುವವು; ಅವುಗ ಳಲ್ಲಿ ಅರ್ಧ ಪೂರ್ವ ಸಮುದ್ರಕ್ಕೆ ಅರ್ಧ ಪಶ್ಚಿಮ ಸಮುದ್ರಕ್ಕೆ ಹೋಗುವವು; ಅದು ಬೇಸಿಗೆ ಕಾಲ ದಲ್ಲಿಯೂ ಚಳಿಗಾಲದಲ್ಲಿಯೂ ಇರುವದು.
ಆ ದಿವಸಗಳಲ್ಲಿ ಆದದ್ದೇನಂದರೆ, ಯೇಸು ಗಲಿಲಾಯದ ನಜರೇತಿನಿಂದ ಬಂದು ಯೊರ್ದನಿನಲ್ಲಿ ಯೋಹಾನನಿಂದ ಬಾಪ್ತಿಸ್ಮಮಾಡಿಸಿಕೊಂಡನು.