Home Bibles 2 ಅರಸುಗಳು 4:40 · ಕನ್ನಡ ಬೈಬಲ್
2 ಅರಸುಗಳು 4:40 · ಕನ್ನಡ ಬೈಬಲ್

ಜನರಿಗೆ ಅದನ್ನು ತಿನ್ನುವದಕ್ಕೆ ಬಡಿಸಿದರು. ಆಹಾರವನ್ನು ತಿನ್ನುತ್ತಿರುವಾಗ ಏನಾಯಿ ತಂದರೆ, ಅವರು--ದೇವರ ಮನುಷ್ಯನೇ, ಗಡಿಗೆಯಲ್ಲಿ ವಿಷ ಎಂದು ಕೂಗಿದರು. ಯಾಕಂದರೆ ಅದರಲ್ಲಿದ್ದದ್ದನ್ನು ಅವರು ತಿನ್ನಲಾರದೆ ಇದ್ದರು.

Cross references

ನಿರ್ಗಮಕಾಂಡ 10:17

ಹೀಗಿರುವದರಿಂದ ಈಗ ಈ ಒಂದೇ ಸಾರಿ ನನ್ನ ಪಾಪವನ್ನು ಕ್ಷಮಿಸಬೇಕೆಂದು ನಾನು ನಿಮ್ಮನ್ನು ಬೇಡುತ್ತೇನೆ. ಈ ಮರಣವನ್ನು ಮಾತ್ರ ನನ್ನಿಂದ ತೊಲಗಿಸುವಂತೆ ನಿಮ್ಮ ದೇವರಾದ ಕರ್ತನನ್ನು ಬೇಡಿ ಕೊಳ್ಳಿರಿ ಅಂದನು.

ನಿರ್ಗಮಕಾಂಡ 15:23

ಅವರು ಮಾರಾಗೆ ಬಂದ ಮೇಲೆ ಮಾರಾದ ನೀರನ್ನು ಕುಡಿಯಲಾರದೆ ಇದ್ದರು; ಯಾಕಂದರೆ ಅದು ಕಹಿಯಾಗಿತ್ತು. ಆದಕಾರಣ ಅದರ ಹೆಸರು ಮಾರಾ ಎಂದು ಕರೆಯಲ್ಪಟ್ಟಿತು.

ದ್ವಿತೀಯೋಪದೇಶಕಾಂಡ 33:1

ದೇವರ ಮನುಷ್ಯನಾದ ಮೋಶೆ ಸಾಯುವದಕ್ಕಿಂತ ಮುಂಚೆ ಇಸ್ರಾಯೇಲ್‌ ಮಕ್ಕಳಿಗೆ ಕೊಟ್ಟ ಆಶೀರ್ವಾದವು ಯಾವದಂದರೆ--

1 ಅರಸುಗಳು 17:18

ಆಗ ಅವಳು ಎಲೀಯ ನಿಗೆ--ಓ ದೇವರ ಮನುಷ್ಯನೇ, ನನಗೂ ನಿನಗೂ ಏನು? ನನ್ನ ಅಕ್ರಮವನ್ನು ಜ್ಞಾಪಕಪಡಿಸುವ ದಕ್ಕೂ ನನ್ನ ಮಗನು ಸಾಯುವದಕ್ಕೂ ನನ್ನ ಬಳಿಗೆ ಬಂದಿಯೋ ಅಂದಳು.

2 ಅರಸುಗಳು 1:9

ಆಗ ಅರಸನು ಐವತ್ತು ಮಂದಿಗೆ ಪ್ರಧಾನನನ್ನು ಅವನ ಐವತ್ತು ಮಂದಿಯ ಸಂಗಡ ಇವನ ಬಳಿಗೆ ಕಳುಹಿಸಿದನು. ಅವನು ಇವನ ಬಳಿಗೆ ಹೋದಾಗ ಇಗೋ, ಇವನು ಬೆಟ್ಟದ ತುದಿಯ ಮೇಲೆ ಕುಳಿತಿದ್ದನು. ಆಗ ಅವನು ಎಲೀಯನಿಗೆ--ದೇವರ ಮನುಷ್ಯನೇ, ಇಳಿದು ಬಾ ಎಂದು ಅರಸನು ಹೇಳುತ್ತಾನೆ ಅಂದನು.

2 ಅರಸುಗಳು 1:11

ತಿರುಗಿ ಅರಸನು ಇವನ ಬಳಿಗೆ ಐವತ್ತು ಮಂದಿಯ ಪ್ರಧಾನ ನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಅವನು ಬಂದು ಇವನಿಗೆ--ದೇವರ ಮನುಷ್ಯನೇ, ಬೇಗ ಇಳಿದು ಬಾ ಎಂದು ಅರಸನು ಹೇಳುತ್ತಾನೆ ಅಂದನು.

2 ಅರಸುಗಳು 1:13

ತಿರುಗಿ ಅವನು ಐವತ್ತು ಮಂದಿಯ ಪ್ರಧಾನನಾದ ಮೂರನೆಯವ ನನ್ನೂ ಅವನ ಐವತ್ತು ಮಂದಿಯನ್ನೂ ಕಳುಹಿಸಿದನು. ಈ ಐವತ್ತು ಮಂದಿಗೆ ಪ್ರಧಾನನಾದ ಮೂರನೆಯ ವನು ಬಂದು ಎಲೀಯನ ಮುಂದೆ ತನ್ನ ಮೊಣ ಕಾಲೂರಿಕೊಂಡು ಇವನಿಗೆ--ದೇವರ ಮನುಷ್ಯನೇ, ನೀನು ದಯೆತೋರು, ನನ್ನ ಪ್ರಾಣವೂ ನಿನ್ನ ಸೇವಕ ರಾದ ಈ ಐವತ್ತು ಮಂದಿಯ ಪ್ರಾಣಗಳೂ ನಿನ್ನ ಸಮ್ಮುಖದಲ್ಲಿ ಅಮೂಲ್ಯವಾಗಿರಲಿ.

2 ಅರಸುಗಳು 4:9

ಆದದರಿಂದ ನನ್ನ ಗಂಡನಿಗೆ--ಇಗೋ, ನಮ್ಮ ಬಳಿಯಲ್ಲಿ ಯಾವಾಗಲೂ ಹಾದು ಹೋಗುವ ಇವನು ಪರಿಶುದ್ಧನಾದ ದೇವರ ಮನುಷ್ಯನಾಗಿದ್ದಾ ನೆಂದು ನನಗೆ ತಿಳಿಯುತ್ತದೆ.

ಮಾರ್ಕ 16:18

ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು.

Interlinear

Choose Theme