ಆಗ ಅವನು ತಿರುಗಿ ಬಂದು ಮನೆಯಲ್ಲಿ ಸ್ವಲ್ಪಹೊತ್ತು ಅತ್ತಿತ್ತ ತಿರುಗಾಡಿ ಏರಿಹೋಗಿ ಅವನ ಮೇಲೆ ಬೋರ್ಲ ಬಿದ್ದನು. ಆಗ ಆ ಹುಡುಗನು ಏಳು ಸಾರಿ ಸೀತು ತರುವಾಯ ತನ್ನ ಕಣ್ಣುಗಳನ್ನು ತೆರೆದನು.
Cross references
ಕರ್ತನು ಎಲೀಯನ ಸ್ವರವನ್ನು ಕೇಳಿದ್ದರಿಂದ ಹುಡುಗನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರಿಗಿ ಬಂತು.
ತನ್ನ ಸೇವಕ ನಿಗೆ--ನೀನು ಹೋಗಿ ಸಮುದ್ರದ ಕಡೆ ನೋಡು ಅಂದನು. ಅವನು ಹೋಗಿ ನೋಡಿ--ಏನೂ ಇಲ್ಲ ಅಂದನು. ಅವನು--ಏಳು ಸಾರಿ ತಿರಿಗಿ ಹೋಗಿ ನೋಡು ಅಂದನು.
ಆಗ ಎಲೀಷನುನೀನು ಹೋಗಿ ಯೊರ್ದನಿನಲ್ಲಿ ಏಳು ಸಾರಿ ಸ್ನಾನ ಮಾಡು; ಆಗ ನಿನ್ನ ಶರೀರವು ಮೊದಲಿನಂತೆ ಮಾರ್ಪ ಡುವದು; ನೀನು ಶುದ್ಧನಾಗುವಿ ಎಂದು ಹೇಳಿ ಅವನ ಬಳಿಗೆ ಸೇವಕನನ್ನು ಕಳುಹಿಸಿದನು.
ಆಗ ಅವನು ಇಳಿದುಹೋಗಿ ದೇವರ ಮನುಷ್ಯನ ವಾಕ್ಯದ ಪ್ರಕಾರ ಯೊರ್ದನಿನಲ್ಲಿ ಏಳುಸಾರಿ ಮುಣುಗಿದನು; ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು; ಅವನು ಶುದ್ಧನಾದನು.
ಎಲೀಷನು ತಾನು ಬದುಕಿಸಿದ ಮಗನ ತಾಯಿಯಾದವಳಿಗೆ -- ನೀನು ಎದ್ದು ನೀನೂ ನಿನ್ನ ಮನೆಯವರೂ ಎಲ್ಲಿ ಇಳುಕೊಳ್ಳುವದಕ್ಕೆ ಸ್ಥಳ ಉಂಟೋ ಅಲ್ಲಿ ಹೋಗಿ ಇಳುಕೊಂಡಿರು. ಯಾಕಂದರೆ ಕರ್ತನು ಬರವನ್ನು ಕಳುಹಿಸುವದಕ್ಕಿದ್ದಾನೆ. ಅದು ದೇಶದ ಮೇಲೆ ಏಳು ವರುಷದ ವರೆಗೂ ಇರುವದು ಎಂದು ಹೇಳಿದನು.
ಅವನು ಸತ್ತವನನ್ನು ಬದುಕಿಸಿದನೆಂದು, ಗೇಹಜಿಯು ಅರಸ ನಿಗೆ ವಿವರವಾಗಿ ಹೇಳುತ್ತಿರುವಾಗ ಏನಾಯಿತಂದರೆ ಇಗೋ, ಬದುಕಿಸಿದ ಮಗನ ತಾಯಿಯಾದ ಆ ಸ್ತ್ರೀಯು ತನ್ನ ಮನೆಗೋಸ್ಕರವೂ ಹೊಲಕ್ಕೋಸ್ಕರವೂ ಅರಸನಿಗೆ ಮೊರೆಯಿಡುತ್ತಿದ್ದಳು. ಆಗ ಗೇಹಜಿಯುನನ್ನ ಒಡೆಯನೇ, ಅರಸನೇ, ಇವಳೇ ಆ ಸ್ತ್ರೀಯು, ಎಲೀಷನು ಬದುಕಿಸಿದ ಇವಳ ಮಗನು ಇವನೇ ಅಂದನು.
ಆಗ ಏನಾಯಿ ತಂದರೆ, ಅವರು ಒಬ್ಬ ಮನುಷ್ಯನನ್ನು ಹೂಣಿಡಲು ಹೋಗುವಾಗ ಇಗೋ, ದಂಡನ್ನು ಕಂಡು ಆ ಮನುಷ್ಯ ನನ್ನು ಎಲೀಷನ ಸಮಾಧಿಯಲ್ಲಿ ಬಿಸಾಡಿದರು. ಸತ್ತ ಮನುಷ್ಯನು ಅದರಲ್ಲಿ ಬಿದ್ದಾಗ ಎಲೀಷನ ಎಲುಬು ಗಳಿಗೆ ತಗುಲಿ ಜೀವ ಉಂಟಾದವನಾಗಿ ತನ್ನ ಕಾಲೂರಿ ಎದ್ದು ನಿಂತನು.
ಆತನು ಬಂದು ಪೆಟ್ಟಿಗೆಯನ್ನು ಮುಟ್ಟಿದಾಗ ಅದನ್ನು ಹೊತ್ತುಕೊಂಡಿದ್ದವರು ಕದಲದೆ ನಿಂತರು; ಆಗ ಆತನು--ಯೌವನಸ್ಥನೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಅಂದನು.
ಆಗ ಆಕೆಯು ಬದುಕಿ ಕೂಡಲೆ ಎದ್ದಳು; ಆಕೆಗೆ ಊಟಕ್ಕೆ ಕೊಡುವಂತೆ ಆತನು ಅಪ್ಪಣೆ ಕೊಟ್ಟನು.ಆಗ ಆಕೆಯ ತಂದೆತಾಯಿಗಳು ಬೆರಗಾದರು; ಆದರೆ ನಡೆದದ್ದನ್ನು ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.
ಆತನು ಹೀಗೆ ಮಾತನಾಡಿದ ಮೇಲೆ--ಲಾಜರನೇ, ಹೊರಗೆ ಬಾ ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.
ಪೇತ್ರನು ಅವರೆ ಲ್ಲರನ್ನು ಹೊರಕ್ಕೆ ಕಳುಹಿಸಿ ಮೊಣಕಾಲೂರಿ ಪ್ರಾರ್ಥನೆ ಮಾಡಿ ಶವದ ಕಡೆಗೆ ತಿರುಗಿಕೊಂಡು--ತಬಿಥಾ, ಏಳು ಅಂದನು; ಆಕೆಯು ಕಣ್ಣು ತೆರೆದು ಪೇತ್ರನನ್ನು ನೋಡಿ ಎದ್ದು ಕೂತುಕೊಂಡಳು.