Home Bibles 2 ಅರಸುಗಳು 4:12 · ಕನ್ನಡ ಬೈಬಲ್
2 ಅರಸುಗಳು 4:12 · ಕನ್ನಡ ಬೈಬಲ್

ಅವನು ತನ್ನ ಸೇವಕನಾದ ಗೇಹಜಿಗೆ--ನೀನು ಶೂನೇಮ್ಯಳನ್ನು ಕರೆ ಅಂದನು. ಅವನು ಅವಳನ್ನು ಕರೆದದ್ದರಿಂದ ಅವಳು ಬಂದು ಮುಂದೆ ನಿಂತಳು.

Cross references

1 ಅರಸುಗಳು 18:43

ತನ್ನ ಸೇವಕ ನಿಗೆ--ನೀನು ಹೋಗಿ ಸಮುದ್ರದ ಕಡೆ ನೋಡು ಅಂದನು. ಅವನು ಹೋಗಿ ನೋಡಿ--ಏನೂ ಇಲ್ಲ ಅಂದನು. ಅವನು--ಏಳು ಸಾರಿ ತಿರಿಗಿ ಹೋಗಿ ನೋಡು ಅಂದನು.

1 ಅರಸುಗಳು 19:3

ಅವನು ಅದನ್ನು ಕೇಳಿ ಎದ್ದು ತನ್ನ ಪ್ರಾಣಕ್ಕೋಸ್ಕರ ಯೆಹೂದಕ್ಕೆ ಸೇರಿದ ಬೇರ್ಷೆಬಕ್ಕೆ ಹೊರಟುಹೋಗಿ ಅಲ್ಲಿ ತನ್ನ ಸೇವಕನನ್ನು ಬಿಟ್ಟನು.

2 ಅರಸುಗಳು 3:11

ಆದರೆ ಯೆಹೋಷಾಫಾಟನು -- ಪ್ರವಾದಿಯ ಮೂಲಕವಾಗಿ ಕರ್ತನನ್ನು ಕೇಳುವ ಹಾಗೆ ಇಲ್ಲಿ ಕರ್ತನ ಪ್ರವಾದಿಯು ಯಾವನೂ ಇಲ್ಲವೋ ಅಂದನು. ಆಗ ಇಸ್ರಾಯೇಲ್ಯರ ಅರಸನ ಸೇವಕರಲ್ಲಿ ಒಬ್ಬನು ಪ್ರತ್ಯು ತ್ತರವಾಗಿ--ಎಲೀಯನ ಕೈಗಳ ಮೇಲೆ ನೀರು ಹೊಯಿದ ಶಾಫಾಟನ ಮಗನಾದ ಎಲೀಷನು ಇಲ್ಲಿದ್ದಾನೆಂದು ಹೇಳಿದನು. ಆಗ ಯೆಹೋಷಾಫಾಟನು--ಅವನ ಬಳಿ ಯಲ್ಲಿ ಕರ್ತನ ವಾಕ್ಯ ಉಂಟು ಅಂದನು.

2 ಅರಸುಗಳು 4:29

ಆಗ ಅವನು ಗೇಹಜಿಗೆ--ನೀನು ನಿನ್ನ ನಡುವನ್ನು ಕಟ್ಟಿ ಕೊಂಡು ನನ್ನ ಕೋಲನ್ನು ನಿನ್ನ ಕೈಯಲ್ಲಿ ಹಿಡುಕೊಂಡು ಹೋಗು. ನಿನಗೆ ಯಾವನಾದರೂ ಎದುರುಗೊಂಡರೆ ಅವನನ್ನು ವಂದಿಸಬೇಡ; ಯಾವನಾದರೂ ನಿನ್ನನ್ನು ವಂದಿಸಿದರೆ ಅವನಿಗೆ ಪ್ರತ್ಯುತ್ತರ ಹೇಳಬೇಡ; ನನ್ನ ಕೋಲನ್ನು ಆ ಹುಡುಗನ ಮುಖದ ಮೇಲೆ ಹಾಕು ಅಂದನು.

2 ಅರಸುಗಳು 5:20

ಆದರೆ ದೇವರ ಮನುಷ್ಯನಾದ ಎಲೀಷನ ಸೇವಕ ನಾಗಿರುವ ಗೇಹಜಿಯು--ಇಗೋ, ನನ್ನ ಯಜಮಾ ನನು ಈ ಅರಾಮ್ಯನಾದ ನಾಮಾನನು ತಕ್ಕೊಂಡು ಬಂದದ್ದನ್ನು ಅವನ ಕೈಯಿಂದ ತಕ್ಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಕರ್ತನ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾ ದರೂ ತಕ್ಕೊಳ್ಳುವೆನು ಅಂದುಕೊಂಡನು.

2 ಅರಸುಗಳು 8:4

ಅರಸನು ದೇವರ ಮನುಷ್ಯನ ಸೇವ ಕನಾದ ಗೇಹಜಿಯ ಸಂಗಡ ಮಾತನಾಡಿ--ಎಲೀ ಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರವಾಗಿ ತಿಳಿಸೆಂದು ಅವನಿಗೆ ಹೇಳಿದನು.

ಅಪೋಸ್ತಲರ ಕೃತ್ಯಗಳು 13:5

ಅವರು ಸಲವಿಾಸಿನಲ್ಲಿದ್ದಾಗ ಯೆಹೂದ್ಯರ ಸಭಾ ಮಂದಿರಗಳಲ್ಲಿ ದೇವರವಾಕ್ಯವನ್ನು ಸಾರಿದರು. ಯೋಹಾನನು ಸಹ ಪರಿಚಾರಕನಾಗಿ ಅವರ ಸಂಗಡ ಇದ್ದನು.

Interlinear

Choose Theme