2 ಅರಸುಗಳು 25:26 · ಕನ್ನಡ ಬೈಬಲ್
ಆಗ ಹಿರಿ ಕಿರಿಯರಾದ ಎಲ್ಲಾ ಜನರೂ ದಂಡುಗಳ ಅಧಿ ಪತಿಗಳೂ ಎದ್ದು ಐಗುಪ್ತಕ್ಕೆ ಹೋದರು; ಯಾಕಂದರೆ ಕಸ್ದೀಯರಿಗೆ ಭಯಪಟ್ಟರು.
Cross references
ಯೆರೆಮಿಯ 41:16
ಆಗ ಆಗುವದೇನಂದರೆ --ನೀವು ಭಯಪಡುವ ಕತ್ತಿಯು ಆ ಐಗುಪ್ತದೇಶದಲ್ಲಿ, ನಿಮ್ಮನ್ನು ಹಿಡಿಯುವದು; ನೀವು ಹೆದರಿಕೊಳ್ಳುವ ಕ್ಷಾಮವು ಆ ಐಗುಪ್ತದೇಶಕ್ಕೆ ನಿಮ್ಮನ್ನು ಹಿಂದಟ್ಟುವದು, ಅಲ್ಲೇ ಸಾಯುವಿರಿ.
ಯೆರೆಮಿಯ 43:4
ಆದಾಗ್ಯೂ ನಾನು ನಿಮ್ಮ ಬಳಿಗೆ ನನ್ನ ಸೇವಕರಾದ ಪ್ರವಾದಿಗಳೆಲ್ಲರನ್ನು ಬೆಳಿಗ್ಗೆ ಎದ್ದು ಕಳುಹಿಸಿ--ಓ, ನಾನು ಹಗೆಮಾಡುವ ಈ ಅಸಹ್ಯವಾದ ಕಾರ್ಯವನ್ನು ಮಾಡಲೇ ಬೇಡಿರೆಂದು ಹೇಳಿದೆನು.
ಯೆರೆಮಿಯ 43:7
ಆದದರಿಂದ ಈಗ ಇಸ್ರಾಯೇಲಿನ ದೇವರೂ ಸೈನ್ಯಗಳ ದೇವರೂ ಆಗಿರುವ ಕರ್ತನು ಹೀಗೆ ಹೇಳುತ್ತಾನೆ--ಯಾಕೆ ನಿಮಗೆ ಉಳಿದಿರುವ ವರನ್ನು ಮಿಗಿಸದ ಹಾಗೆ ನೀವು ಗಂಡಸರನ್ನೂ ಹೆಂಗಸರನ್ನೂ ಮಗುವನ್ನೂ ಮೊಲೆ ಕೂಸನ್ನೂ ಯೆಹೂದದೊಳಗಿಂದ ಕಡಿದುಬಿಟ್ಟು ನಿಮ್ಮ ಪ್ರಾಣ ಗಳಿಗೆ ದೊಡ್ಡ ಕೇಡನ್ನು ಮಾಡಿಕೊಳ್ಳು ತ್ತೀರಿ?