ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಅವನ ತಾಯಿ ರೂಮದ ಪೆದಾಯನ ಮಗಳು ಜೆಬೂದಾಳೆಂಬವಳು.ಅವನು ತನ್ನ ತಂದೆಗಳು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
Cross references
ಯೋಷಿಯನ ಮಕ್ಕಳು--ಚೊಚ್ಚಲ ಮಗ ನಾದ ಯೋಹನಾನನು, ಎರಡನೆಯವನಾದ ಯೆಹೋ ಯಾಕೀಮನು, ಮೂರನೆಯವನಾದ ಚಿದ್ಕೀಯನು, ನಾಲ್ಕನೆಯವನಾದ ಶಲ್ಲೂಮನು.
ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಆದರೆ ತನ್ನ ದೇವ ರಾದ ಕರ್ತನ ಸಮ್ಮುಖದಲ್ಲಿ ಅವನು ಕೆಟ್ಟದ್ದನ್ನು ಮಾಡಿ ದನು.
ಯೆಹೂದದ ಅರಸನಾದ ಯೋಷೀಯನ ಮಗನಾಗಿರುವ ಯೆಹೋಯಾ ಕೀಮನ ದಿನಗಳಲ್ಲಿಯೂ ಕೂಡ ಯೆಹೂದದ ಅರಸ ನಾದ ಯೋಷೀಯನ ಮಗನಾಗಿರುವ ಚಿದ್ಕೀಯನ ಹನ್ನೊಂದನೇ ವರುಷದ ಅಂತ್ಯದ ವರೆಗೂ ಐದನೇ ತಿಂಗಳಲ್ಲಿ ಯೆರೂಸಲೇಮು ಸೆರೆಯಾಗಿ ಒಯ್ಯಲ್ಪಡು ವವರೆಗೂ ಕರ್ತನ ವಾಕ್ಯವು ಉಂಟಾಯಿತು.
ಯೆಹೂದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ಆಳಿ ಕೆಯ ಪ್ರಾರಂಭದಲ್ಲಿ ಈ ವಾಕ್ಯವು ಕರ್ತನಿಂದ ಯೆರೆ ವಿಾಯನಿಗೆ ಬಂತು ಯಾವದಂದರೆ
ಯೆಹೂದದ ಅರಸನಾದ ಯೆಹೋಯಾ ಕೀಮನ ಆಳಿಕೆಯ ಮೂರನೆಯ ವರುಷ ದಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೂ ಸಲೇಮಿಗೆ ಬಂದು ಮುತ್ತಿಗೆ ಹಾಕಿದನು.