Home Bibles 2 ಅರಸುಗಳು 23:31 · ಕನ್ನಡ ಬೈಬಲ್
2 ಅರಸುಗಳು 23:31 · ಕನ್ನಡ ಬೈಬಲ್

ಯೆಹೋವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ಮೂರು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿ ಲಿಬ್ನ ಪಟ್ಟಣದ ಯೆರೆವಿಾಯನ ಮಗಳಾಗಿದ್ದು ಹಮೂಟಲ್‌ ಎಂಬವಳಾಗಿದ್ದಳು.

Cross references

2 ಅರಸುಗಳು 24:18

ಚಿದ್ಕೀಯನು ಆಳಲು ಆರಂಭಿಸಿದಾಗ ಇಪ್ಪ ತ್ತೊಂದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಅವನ ತಾಯಿ ಲಿಬ್ನದ ಯೆರೆವಿಾಯನ ಮಗಳಾಗಿದ್ದ ಹಮೂಟಲ್‌ ಎಂಬ ವಳು.

1 ದಿನವೃತ್ತಾಂತ 3:15

ಯೋಷಿಯನ ಮಕ್ಕಳು--ಚೊಚ್ಚಲ ಮಗ ನಾದ ಯೋಹನಾನನು, ಎರಡನೆಯವನಾದ ಯೆಹೋ ಯಾಕೀಮನು, ಮೂರನೆಯವನಾದ ಚಿದ್ಕೀಯನು, ನಾಲ್ಕನೆಯವನಾದ ಶಲ್ಲೂಮನು.

2 ದಿನವೃತ್ತಾಂತ 36:1

ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು, ತಕ್ಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದ ಲಾಗಿ ಅವನನ್ನು ಅರಸನಾಗಿ ಮಾಡಿದರು.

ಯೆರೆಮಿಯ 22:11

ಪ್ರವಾದಿಯೂ ಯಾಜಕನೂ ಕೂಡ ಭ್ರಷ್ಟರೇ; ಹೌದು, ನನ್ನ ಆಲಯದಲ್ಲಿ ಅವರ ಕೆಟ್ಟತನವನ್ನು ಕಂಡಿದ್ದೇನೆಂದು ಕರ್ತನು ಅನ್ನುತ್ತಾನೆ.

Interlinear

Choose Theme