Home Bibles 2 ಅರಸುಗಳು 23:11 · ಕನ್ನಡ ಬೈಬಲ್
2 ಅರಸುಗಳು 23:11 · ಕನ್ನಡ ಬೈಬಲ್

ಬೈಲ ಲ್ಲಿರುವ ಪ್ರಧಾನನಾದ ನಾತಾನ್‌ ಮೆಲೆಕನ ಕೊಠಡಿಯ ಹತ್ತಿರ ಇದ್ದ ಕರ್ತನ ಮನೆಯ ದ್ವಾರದ ಬಳಿಯಲ್ಲಿ ಯೆಹೂದದ ಅರಸುಗಳು ಸೂರ್ಯನಿಗೆ ಕೊಟ್ಟ ಕುದುರೆ ಗಳನ್ನು ತೆಗೆದುಹಾಕಿ ಸೂರ್ಯನ ರಥಗಳನ್ನು ಬೆಂಕಿ ಯಿಂದ ಸುಟ್ಟುಬಿಟ್ಟನು.

Cross references

ದ್ವಿತೀಯೋಪದೇಶಕಾಂಡ 4:19

ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.

2 ಅರಸುಗಳು 23:5

ಇದಲ್ಲದೆ ಯೆಹೂದದ ಪಟ್ಟಣಗಳಲ್ಲಿರುವ ಉನ್ನತ ಸ್ಥಳಗಳ ಲ್ಲಿಯೂ ಯೆರೂಸಲೇಮಿನ ಸುತ್ತಲಿರುವ ಉನ್ನತ ಸ್ಥಳಗಳಲ್ಲಿಯೂ ಧೂಪವನ್ನು ಸುಡಲು ಯೆಹೂದದ ಅರಸುಗಳು ನೇಮಿಸಿದ್ದ ಪೂಜಾರಿಗಳನ್ನೂ ಬಾಳನಿಗೂ ಸೂರ್ಯನಿಗೂ ಚಂದ್ರನಿಗೂ ಹನ್ನೆರಡು ರಾಶಿಗಳಿಗೂ ಆಕಾಶದ ಎಲ್ಲಾ ಸೈನ್ಯಕ್ಕೂ ಧೂಪಸುಡುವವರಾರೂ ಇರದ ಹಾಗೆ ಮಾಡಿದನು.

1 ದಿನವೃತ್ತಾಂತ 26:18

ಪಶ್ಚಿಮ ಭಾಗವಾದ ಪರ್ಬರಿಗೆ ಹೋಗುವ ರಾಜ ಮಾರ್ಗದಲ್ಲಿ ನಾಲ್ಕು ಮಂದಿಯೂ ಪರ್ಬರಿನ ಬಳಿಯಲ್ಲಿ ಇಬ್ಬರು ಇದ್ದರು.

2 ದಿನವೃತ್ತಾಂತ 14:5

ಇದಲ್ಲದೆ ಅವನು ಉನ್ನತ ಸ್ಥಳಗಳನ್ನೂ ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಅವನ ಮುಂದೆ ಶಾಂತ ವಾಗಿತ್ತು.

2 ದಿನವೃತ್ತಾಂತ 34:4

ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ

ಯೆಹೆಜ್ಕೇಲ 8:16

ಆಗ ಅವನು ನನ್ನನ್ನು ಕರ್ತನ ಆಲ ಯದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋದನು. ಇಗೋ, ಕರ್ತನ ಮಂದಿರದ ಬಾಗಿಲಲ್ಲಿ ದ್ವಾರಾಂಗ ಳಕ್ಕೂ ಯಜ್ಞವೇದಿಗೂ ಮಧ್ಯದಲ್ಲಿ ಸುಮಾರು ಇಪ್ಪ ತ್ತೈದು ಮಂದಿಯು ಕರ್ತನ ಮಂದಿರಕ್ಕೆ ಬೆನ್ನು ಕೊಟ್ಟು, ಪೂರ್ವದಿಕ್ಕಿನ ಕಡೆಗೆ ತಮ್ಮ ಮುಖಗಳನ್ನು ತಿರು ಗಿಸಿ ಸೂರ್ಯ ನಮಸ್ಕಾರ ಮಾಡುತ್ತಿದ್ದರು.

Interlinear

Choose Theme