Home Bibles 2 ಅರಸುಗಳು 21:19 · ಕನ್ನಡ ಬೈಬಲ್
2 ಅರಸುಗಳು 21:19 · ಕನ್ನಡ ಬೈಬಲ್

ಆಮೋನನು ಆಳಲು ಆರಂಭಿಸಿದಾಗ ಇಪ್ಪತ್ತೆ ರಡು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಎರಡು ವರುಷ ಆಳಿದನು. ಅವನ ತಾಯಿಯೂ ಯೊಟ್ಬಾ ಊರಿನವನಾದ ಹಾರೂಚನ ಮಗಳಾದ ಮೆಷುಲ್ಲೆ ಮೆತ್‌ ಎಂಬ ಹೆಸರುಳ್ಳವಳು.

Cross references

1 ಅರಸುಗಳು 15:25

ಯೆಹೂದದ ಅರಸನಾದ ಆಸನ ಎರಡನೇ ವರುಷದಲ್ಲಿ ಯಾರೊಬ್ಬಾಮನ ಮಗನಾದ ನಾದಾಬನು ಇಸ್ರಾಯೇಲಿನ ಮೇಲೆ ಆಳಲು ಆರಂಭಿಸಿ ಎರಡು ವರುಷ ಆಳಿದನು.

1 ಅರಸುಗಳು 16:8

ಯೆಹೂದದ ಅರಸನಾದ ಆಸನ ಇಪ್ಪತ್ತಾರನೇ ವರುಷದಲ್ಲಿ ಬಾಷನ ಮಗನಾದ ಏಲನು ಇಸ್ರಾಯೇ ಲಿನ ಮೇಲೆ ತಿರ್ಚದಲ್ಲಿ ಎರಡು ವರುಷ ಆಳಲಾರಂಭಿ ಸಿದನು.

1 ಅರಸುಗಳು 22:51

ಅಹಾಬನ ಮಗನಾದ ಅಹಜ್ಯನು ಯೆಹೂದದ ಅರಸನಾದ ಯೆಹೋಷಾಫಾಟನ ಹದಿನೇಳನೆ ವರುಷ ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಆಳಲಾ ರಂಭಿಸಿ ಎರಡು ವರುಷ ಆಳಿದನು. ಆದರೆ ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನುಮಾಡಿ

2 ಅರಸುಗಳು 15:23

ಯೆಹೂದದ ಅರಸನಾದ ಅಜರ್ಯನ ಆಳ್ವಿಕೆಯ ಐವತ್ತನೇ ವರುಷದಲ್ಲಿ ಮೆನಹೇಮನ ಮಗನಾದ ಪೆಕಹನು ಸಮಾರ್ಯದಲ್ಲಿ ಇಸ್ರಾಯೇಲಿನ ಮೇಲೆ ಎರಡು ವರುಷ ಆಳಿದನು.

2 ಅರಸುಗಳು 21:18

ಮನಸ್ಸೆಯು ತನ್ನ ಪಿತೃಗಳ ಸಂಗಡ ನಿದ್ರಿಸಿದನು ಅವನನ್ನು ಅವನ ಮನೆಯ ತೋಟವಾದ ಉಜ್ಜನ ತೋಟದಲ್ಲಿ ಹೂಣಿ ಟ್ಟರು. ಅವನ ಮಗನಾದ ಆಮೋನನು ಅವನಿಗೆ ಬದಲಾಗಿ ಅರಸನಾದನು.

1 ದಿನವೃತ್ತಾಂತ 3:14

ಇವನ ಮಗನು ಅಮೋನನು; ಇವನ ಮಗನು ಯೋಷೀ ಯನು.

2 ದಿನವೃತ್ತಾಂತ 33:21

ಆಮೋನನು ಆಳಲು ಆರಂಭಿಸಿದಾಗ ಇಪ್ಪತ್ತೆ ರಡು ವರುಷದವನಾಗಿದ್ದು, ಯೆರೂಸಲೇಮಿನಲ್ಲಿ ಎರಡು ವರುಷ ಆಳಿದನು.

ಮತ್ತಾಯ 1:10

ಹಿಜ್ಕೀಯನಿಂದ ಮನಸ್ಸೆಯು ಹುಟ್ಟಿದನು; ಮನಸ್ಸೆಯಿಂದ ಆಮೋನನು ಹುಟ್ಟಿದನು; ಆಮೋನನಿಂದ ಯೋಷೀಯನು ಹುಟ್ಟಿದನು;

Interlinear

Choose Theme