ಆಗ ಯೆರಿಕೋವಿನಲ್ಲಿ ರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಕರ್ತನು ಇಂದು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು. ಅದಕ್ಕವನು--ನಾನು ಕೂಡ ಬಲ್ಲೆ, ಸುಮ್ಮನೆ ಇರ್ರಿ ಅಂದನು.
Cross references
ಅದಕ್ಕೆ ಅವನ ತಂದೆಯು ಒಪ್ಪದೆ--ನನಗೆ ತಿಳಿಯಿತು, ನನ್ನ ಮಗನೇ, ನನಗೆ ತಿಳಿಯಿತು. ಅವನು ಸಹ ಜನಾಂಗವಾಗುವದಲ್ಲದೆ ಅವನು ದೊಡ್ಡವನಾ ಗುವನು. ಆದಾಗ್ಯೂ ಅವನ ತಮ್ಮನು ನಿಶ್ಚಯವಾಗಿ ಅವನಿಗಿಂತ ದೊಡ್ಡವನಾಗುವನು. ಅವನ ಸಂತ ತಿಯು ಜನಾಂಗಗಳ ಸಮೂಹವಾಗುವದು ಅಂದನು.
ಕರ್ತನ ಸೇವಕನಾದ ಮೋಶೆ ಸತ್ತ ತರುವಾಯ ಕರ್ತನು ಮೋಶೆಯ ಸೇವಕನಾದ ನೂನನ ಮಗನಾಗಿರುವ ಯೆಹೋಶುವನಿಗೆ--
ತರುವಾಯ ಫಿಲಿಷ್ಟಿಯರ ಠಾಣವಿರುವ ದೇವರ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣದಲ್ಲಿ ಪ್ರವೇಶಿಸುವಾಗ ನಿನಗೆದುರಾಗಿ ವೀಣೆ, ದಮ್ಮಡಿ, ಪಿಳ್ಳಂಗೋವಿ, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡವರಾಗಿ ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವದು. ಅವರು ಪ್ರವಾದಿಸುವರು.
ಆದರೆ ಪ್ರವಾದಿಗಳ ಮಕ್ಕಳಲ್ಲಿ ಒಬ್ಬನು ಕರ್ತನ ಮಾತಿನಿಂದ ತನ್ನ ಜೊತೆಗಾರನಿಗೆ--ನೀನು ದಯ ಮಾಡಿ ನನ್ನನ್ನು ಹೊಡೆ ಅಂದನು.
ಆಗ ಬೇತೇಲಿನಲ್ಲಿರುವ ಪ್ರವಾದಿಗಳ ಮಕ್ಕಳು ಎಲೀಷನ ಬಳಿಗೆ ಬಂದು ಅವನಿಗೆ--ಇಂದು ಕರ್ತನು ನಿನ್ನ ಯಜಮಾನನನ್ನು ನಿನ್ನ ಬಳಿಯಿಂದ ತಕ್ಕೊಳ್ಳುವನೆಂದು ತಿಳಿದಿದ್ದೀಯೋ ಅಂದರು.
ಪ್ರವಾದಿಗಳ ಮಕ್ಕಳ ಹೆಂಡತಿಯರಲ್ಲಿ ಒಬ್ಬಳು ಎಲೀಷನಿಗೆ ಕೂಗಿ--ನಿನ್ನ ದಾಸ ನಾದ ನನ್ನ ಗಂಡನು ಸತ್ತನು; ನಿನ್ನ ದಾಸನು ಕರ್ತನಿಗೆ ಭಯಪಡುವವನಾಗಿದ್ದನೆಂದು ನೀನು ಬಲ್ಲೆ; ಈಗ ಸಾಲಗಾರನು ನನ್ನ ಇಬ್ಬರು ಮಕ್ಕಳನ್ನು ತನಗೆ ದಾಸ ರಾಗಿ ತೆಗೆದುಕೊಳ್ಳಲು ಬಂದಿದ್ದಾನೆ ಅಂದಳು.
ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು.
ಪ್ರವಾದಿಗಳ ಮಕ್ಕಳು ಎಲೀಷನಿಗೆ-- ಇಗೋ, ಈಗ ನಾವು ನಿನ್ನ ಸಂಗಡ ವಾಸವಾಗಿರುವ ಸ್ಥಳವು ನಮಗೆ ಇಕ್ಕಟ್ಟಾಗಿದೆ.
ಪ್ರವಾದಿಯಾದ ಎಲೀಷನು ಪ್ರವಾದಿಗಳ ಮಕ್ಕಳಲ್ಲಿ ಒಬ್ಬನನ್ನು ಕರೆದು ಅವನಿಗೆ--ನಡುವನ್ನು ಕಟ್ಟಿಕೊಂಡು ಈ ಎಣ್ಣೆಯ ಪಾತ್ರೆಯನ್ನು ನಿನ್ನ ಕೈಯಲ್ಲಿ ತೆಗೆದುಕೊಂಡು ಗಿಲ್ಯಾದಿನಲ್ಲಿರುವ ರಾಮೋತಿಗೆ ಹೋಗು.
ಹರಿಯುವದಕ್ಕೆ ಒಂದು ಸಮಯ, ಹೊಲಿಯುವದಕ್ಕೆ ಒಂದು ಸಮಯ ಸುಮ್ಮನೆ ಇರುವದಕ್ಕೆ ಒಂದು ಸಮಯ, ಮಾತಾಡು ವದಕ್ಕೆ ಒಂದು ಸಮಯ;
ಓ ದ್ವೀಪನಿವಾಸಿಗಳೇ, ನನ್ನ ಮುಂದೆ ಮೌನದಿಂದಿರ್ರಿ; ಜನಗಳು ಹೊಸ ಬಲ ವನ್ನು ಹೊಂದಿಕೊಳ್ಳಲಿ; ಅವರು ನನ್ನ ಸವಿಾಪಕ್ಕೆ ಬಂದು ಮಾತಾಡಲಿ; ನ್ಯಾಯತೀರ್ಪಿಗಾಗಿ ಸವಿಾಪಕ್ಕೆ ಒಟ್ಟಾಗಿ ಬರೋಣ.
ಆಗ ಆಮೋಸನು ಅಮಚ್ಯನಿಗೆ ಪ್ರತ್ಯುತ್ತರವಾಗಿ ಹೇಳಿದ್ದೇನಂದರೆ--ನಾನು ಪ್ರವಾದಿಯಲ್ಲ, ಪ್ರವಾ ದಿಯ ಮಗನೂ ಅಲ್ಲ; ಆದರೆ ನಾನು ಕುರುಬನೂ ಹತ್ತಿ ಹಣ್ಣುಗಳನ್ನು ಕೂಡಿಸುವವನೂ ಆಗಿದ್ದೇನೆ.