Home Bibles 2 ಅರಸುಗಳು 19:36 · ಕನ್ನಡ ಬೈಬಲ್
2 ಅರಸುಗಳು 19:36 · ಕನ್ನಡ ಬೈಬಲ್

ಅಶ್ಶೂರಿನ ಅರಸನಾದ ಸನ್ಹೇರೀಬನು ಹಿಂತಿರುಗಿಹೋಗಿ ನಿನೆವೆಯಲ್ಲಿ ವಾಸ ವಾಗಿದ್ದನು.ಅವನು ತನ್ನ ದೇವರಾದ ನಿಸ್ರೋಕನ ಮನೆಯಲ್ಲಿ ಆರಾಧಿಸುತ್ತಿರುವಾಗ ಅವನ ಮಕ್ಕಳಾದ ಅದ್ರಮ್ಮೆಲೆಕನೂ ಸರೆಚೆರನೂ ಅವನನ್ನು ಕತ್ತಿಯಿಂದ ಹೊಡೆದು ಅರರಾಟ್‌ ದೇಶಕ್ಕೆ ತಪ್ಪಿಸಿಕೊಂಡು ಹೋದರು. ಅವನ ಮಗನಾದ ಏಸರ್‌ಹದ್ದೋನನು ಅವನಿಗೆ ಬದಲಾಗಿ ಅರಸನಾದನು.

Cross references

ಆದಿಕಾಂಡ 10:11

ಆ ದೇಶದೊಳಗಿಂದ ಅಶ್ಶೂರನು ಹೊರಟು ನಿನವೆ ರೆಹೋಬೋತ್‌ ಎಂಬ ಪಟ್ಟಣ, ಕೆಲಹ,

2 ಅರಸುಗಳು 19:7

ಇಗೋ, ನಾನು ಅವನ ಮೇಲೆ ಗಾಳಿಯನ್ನು ಕಳುಹಿಸುವೆನು. ಅವನು ಒಂದು ಸುದ್ದಿ ಯನ್ನು ಕೇಳಿ ತನ್ನ ದೇಶಕ್ಕೆ ಹಿಂತಿರುಗುವನು. ಇದಲ್ಲದೆ ತನ್ನ ದೇಶದಲ್ಲಿ ಕತ್ತಿಯಿಂದ ಅವನನ್ನು ಬೀಳಮಾಡು ವೆನು ಎಂದು ಕರ್ತನು ಹೇಳುತ್ತಾನೆ ಅಂದನು.

2 ಅರಸುಗಳು 19:28

ನೀನು ನನಗೆ ವಿರೋಧವಾಗಿ ಮಾಡುವ ನಿನ್ನ ರೌದ್ರವೂ ನಿನ್ನ ಅಹಂಕಾರವೂ ನನ್ನ ಕಿವಿಗಳಲ್ಲಿ ಬಂದದರಿಂದ ನಾನು ನನ್ನ ಕೊಂಡಿಯನ್ನು ನಿನ್ನ ಮೂಗಿನಲ್ಲಿಯೂ ನನ್ನ ಕಡಿವಾಣವನ್ನು ನಿನ್ನ ಬಾಯಲ್ಲಿಯೂ ಹಾಕಿ ನೀನು ಬಂದ ಮಾರ್ಗದಲ್ಲಿ ನಿನ್ನನ್ನು ಹಿಂತಿರುಗಿಸುವೆನು.

2 ಅರಸುಗಳು 19:33

ಅವನು ಬಂದ ಮಾರ್ಗವಾಗಿಯೇ ತಿರಿಗಿ ಹೋಗುವನು; ಆದರೆ ಅವನು ಈ ಪಟ್ಟಣದಲ್ಲಿ ಬರುವದಿಲ್ಲವೆಂದು ಕರ್ತನು ಹೇಳುತ್ತಾನೆ.

ಯೋನ 1:2

ಹೇಗಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ಅದಕ್ಕೆ ವಿರೋಧವಾಗಿ ಕೂಗು; ಅವರ ಕೆಟ್ಟತನವು ನನ್ನ ಸನ್ನಿಧಿಗೆ ಮುಟ್ಟಿದೆ ಎಂಬದು.

ಯೋನ 3:2

ಏನಂದರೆ--ಎದ್ದು ಆ ದೊಡ್ಡ ಪಟ್ಟಣವಾದ ನಿನೆವೆಗೆ ಹೋಗಿ ನಾನು ನಿನಗೆ ಹೇಳಿದ ಪ್ರಕಟನೆಯನ್ನು ಅದಕ್ಕೆ ಸಾರು ಎಂದು ಹೇಳಿದನು.

ನಹೂಮ 1:1

ನಿನೆವೆಯ ಭಾರವು. ಎಲ್ಕೋಷಿನವನಾದ ನಹೂಮನ ದರ್ಶನದ ಪುಸ್ತಕವು.

ನಹೂಮ 2:8

ನಿನೆವೆ ಹುಟ್ಟಿದಂದಿನಿಂದ ನೀರಿನ ಕೆರೆಯ ಹಾಗಿತ್ತು; ಆದರೂ ಅವರು ಓಡಿಹೋಗುತ್ತಾರೆ; ನಿಲ್ಲಿರಿ, ನಿಲ್ಲಿರಿ ಅಂದರೂ ಒಬ್ಬನೂ ಹಿಂದಕ್ಕೆ ನೋಡುವದಿಲ್ಲ.

ಮತ್ತಾಯ 12:41

ನ್ಯಾಯವಿಚಾರಣೆಯಲ್ಲಿ ನಿನೆವೆಯ ಜನರು ಈ ಸಂತತಿಯೊಂದಿಗೆ ಎದ್ದು ಅವರನ್ನು ಖಂಡಿಸು ವರು; ಯಾಕಂದರೆ ಯೋನನು ಸಾರಿದಾಗ ಅವರು ಮಾನಸಾಂತರಪಟ್ಟರು; ಮತ್ತು ಇಗೋ, ಇಲ್ಲಿ ಯೋನ ನಿಗಿಂತಲೂ ದೊಡ್ಡವನಿದ್ದಾನೆ.

Interlinear

Choose Theme