ಅವರು ಅವನಿಗೆ ಹೇಳಿದ್ದೇನಂದರೆ--ಹಿಜ್ಕೀಯನು ಹೇಳುವದೇನಂದರೆ--ಇದು ಇಕ್ಕಟ್ಟೂ ಗದರಿಕೆಯೂ ನಿಂದೆಯೂ ಆದ ದಿವಸ; ಯಾಕಂದರೆ ಹೆರಿಗೆಯ ಸಮಯವು ಬಂತು ಆದರೆ ಹೆರುವ ಶಕ್ತಿ ಇಲ್ಲ.
Cross references
ಅರಸನು ಹೇಳುವದೇನಂದರೆ--ಹಿಜ್ಕೀಯನು ನಿಮ್ಮನ್ನು ಮೋಸ ಗೊಳಿಸದೆ ಇರಲಿ; ಅವನು ನಿಮ್ಮನ್ನು ಅವನ ಕೈಯೊಳ ಗಿಂದ ತಪ್ಪಿಸಲಾರನು.
ಅಕ್ರಮ ಕ್ಕೋಸ್ಕರ ಗದರಿಕೆಗಳಿಂದ ನೀನು ಮನುಷ್ಯನನ್ನು ಶಿಕ್ಷಿಸಿದರೆ ಅವನ ಸೌಂದರ್ಯವನ್ನು ನುಸಿಯ ಹಾಗೆ ಹಾಳುಮಾಡುತ್ತೀ; ನಿಶ್ಚಯವಾಗಿ ಪ್ರತಿ ಮನುಷ್ಯನು ವ್ಯರ್ಥವಾದವನೇ--ಸೆಲಾ.
ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ.
ನಮ್ಮನ್ನು ಕರುಣಿಸು; ಓ ಕರ್ತನೇ, ನಮ್ಮನ್ನು ಕರುಣಿಸು; ಬಹಳವಾಗಿ ತಿರ ಸ್ಕಾರದಿಂದ ತುಂಬಿದ್ದೇವೆ.ಭೋಗಿಗಳ ಹಾಸ್ಯದಿಂದ ನಮ್ಮ ಹೃದಯವು ತುಂಬಿಯದೆ, ಗರ್ವಿಷ್ಟರ ನಿಂದೆ ಯಿಂದ ನಮ್ಮ ಮನಸ್ಸು ಬೇಸತ್ತು ಹೋಯಿತು.
ಓ ಕರ್ತನೇ, ಬಸುರಾದ ಸ್ತ್ರೀಯು ಹೆರುವ ದಕ್ಕೆ ಸವಿಾಪ ಬಂದಾಗ ನೋವಿನಲ್ಲಿದ್ದು ತನ್ನ ಬೇನೆ ಯಲ್ಲಿ ಅರಚುವಂತೆ ಓ ಕರ್ತನೇ, ನಾವು ನಿನ್ನ ಸಮ್ಮುಖದಲ್ಲಿದ್ದೆವು.
ನಾನು ಪ್ರಸವಕ್ಕೆ ತಂದ ಮೇಲೆ ಹೆರದಂತೆ ಮಾಡೆನೋ ಎಂದು ಕರ್ತನು ಹೇಳುತ್ತಾನೆ; ಇಲ್ಲವೆ ಹೆರುವಂತೆ ಮಾಡುವವನಾದ ನಾನು ಗರ್ಭವನ್ನು ಮುಚ್ಚುವೆನೇ ಎಂದು ನಿನ್ನ ದೇವರು ಹೇಳುತ್ತಾನೆ.
ಸಮಾರ್ಯದ ಪರ್ವ ತಗಳಲ್ಲಿ ತಿರುಗಿ ದ್ರಾಕ್ಷೇಗಿಡಗಳನ್ನು ನೆಡುವಿ; ನೆಡು ವವರು ನೆಟ್ಟು ಸಾಧಾರಣವಾದವುಗಳಂತೆ ಫಲ ಅನುಭ ವಿಸುವರು.
ತಾವು ತಮ್ಮ ಅಪರಾಧವನ್ನು ಅರಿಕೆಮಾಡಿ ನನ್ನ ಮುಖವನ್ನು ಹುಡುಕುವ ವರೆಗೂ ನಾನು ತಿರುಗಿ ಕೊಂಡು ನನ್ನ ಸ್ಥಳಕ್ಕೆ ಹೋಗುವೆನು, ಅವರ ಕಷ್ಟದಲ್ಲಿ ಅವರು ನನ್ನನ್ನು ಬೇಗ ಹುಡುಕುವರು.
ಹೆರು ವವಳ ಸಂಕಟಗಳು ಅವನ ಮೇಲೆಯೇ ಬರುವವು. ಅವನು ಬುದ್ಧಿಹೀನ ಮಗನಾಗಿದ್ದಾನೆ; ಮಕ್ಕಳು ಹುಟ್ಟುವ ಸ್ಥಳದಲ್ಲಿ ಅವನು ಬಹಳ ಹೊತ್ತು ನಿಲ್ಲುವದಿಲ್ಲ.
ಈ ಹೊತ್ತು ನೀವು ಆತನ ಧ್ವನಿಯನ್ನು ಕೇಳಿದರೆ ಎಂದು ಹೇಳುವಾಗ (ನಿಮ್ಮ ಹಿರಿಯರು) ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದಯ ಗಳನ್ನು ಕಠಿಣಮಾಡಿಕೊಳ್ಳಬೇಡಿರಿ.