Home Bibles 2 ಅರಸುಗಳು 18:32 · ಕನ್ನಡ ಬೈಬಲ್
2 ಅರಸುಗಳು 18:32 · ಕನ್ನಡ ಬೈಬಲ್

ನಾನು ಬಂದು ನಿಮ್ಮ ದೇಶದ ಹಾಗೆ ಧಾನ್ಯವೂ ದ್ರಾಕ್ಷಾರಸವೂ ಇರುವ ದೇಶಕ್ಕೆ, ರೊಟ್ಟಿಯೂ ದ್ರಾಕ್ಷೇ ತೋಟಗಳೂ ಇರುವ ದೇಶಕ್ಕೆ, ಎಣ್ಣೆಯನ್ನು ಕೊಡುವ ಇಪ್ಪೇ ಮರ ಗಳೂ ಜೇನೂ ಇರುವ ದೇಶಕ್ಕೆ, ನಿಮ್ಮನ್ನು ಕರಕೊಂಡು ಹೋಗುವ ವರೆಗೂ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷೇ ಫಲವನ್ನೂ ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯಲಿ. ಆದರೆ--ಕರ್ತನು ನಮ್ಮನ್ನು ತಪ್ಪಿಸುವನೆಂದು ಹಿಜ್ಕೀ ಯನು ನಿಮ್ಮನ್ನು ಪ್ರೇರೇಪಿಸುವಾಗ ಅವನ ಮಾತು ಕೇಳಬೇಡಿರಿ.

Cross references

ನಿರ್ಗಮಕಾಂಡ 3:8

ಆದಕಾರಣ ಅವರನ್ನು ಐಗುಪ್ತ್ಯರ ಕೈಯೊ ಳಗಿಂದ ಬಿಡುಗಡೆ ಮಾಡುವದಕ್ಕೂ ಆ ದೇಶದಿಂದ ಬಿಡಿಸಿ ಹಾಲೂ ಜೇನೂ ಹರಿಯುವ ವಿಸ್ತಾರವಾದ ಒಳ್ಳೇ ದೇಶಕ್ಕೆ ಅಂದರೆ ಕಾನಾನ್ಯರು, ಹಿತ್ತಿಯರು, ಅಮೋರಿಯರು, ಪೆರಿಜೀಯರು, ಹಿವ್ವಿಯರು, ಯೆಬೂಸಿಯರು ವಾಸವಾಗಿರುವ ದೇಶಕ್ಕೆ ನಡಿಸಿ ಕೊಂಡು ಹೋಗುವದಕ್ಕೂ ಇಳಿದು ಬಂದಿದ್ದೇನೆ.

ಅಂಕೆಗಳ ಪುಸ್ತಕ 13:26

ಅವರು ಹೋಗಿ ಮೋಶೆ ಆರೋನರ ಬಳಿಗೂ ಇಸ್ರಾಯೇಲ್‌ ಮಕ್ಕಳ ಸಮಸ್ತ ಸಭೆಯ ಬಳಿಗೂ ಪಾರಾನ್‌ ಅರಣ್ಯದಲ್ಲಿರುವ ಕಾದೇಶಿಗೂ ಬಂದು ಅವರಿಗೂ ಸಮಸ್ತ ಸಭೆಗೂ ವಿಷಯವನ್ನು ವಿವರಿಸಿ ಆ ದೇಶದ ಫಲಗಳನ್ನು ಅವರಿಗೆ ತೋರಿಸಿದರು.

ಅಂಕೆಗಳ ಪುಸ್ತಕ 14:8

ಕರ್ತನು ನಮ್ಮಲ್ಲಿ ಇಷ್ಟಪಟ್ಟರೆ ಹಾಲು ಜೇನೂ ಹರಿಯುವ ಆ ದೇಶಕ್ಕೆ ನಮ್ಮನ್ನು ಬರಮಾಡಿ ಅದನ್ನು ನಮಗೆ ಕೊಡುವನು.

ದ್ವಿತೀಯೋಪದೇಶಕಾಂಡ 8:7

ನಿನ್ನ ದೇವರಾದ ಕರ್ತನು ನಿನ್ನನ್ನು ಉತ್ತಮ ದೇಶಕ್ಕೆ ಬರಮಾಡುತ್ತಾನೆ; ಅದು ನೀರಿನ ಹಳ್ಳಗಳೂ ತಗ್ಗಿನಲ್ಲಿಯೂ ಬೆಟ್ಟದಲ್ಲಿಯೂ ಉಕ್ಕುವ ಬುಗ್ಗೆಗಳುಳ್ಳ ದೇಶವೇ.

ದ್ವಿತೀಯೋಪದೇಶಕಾಂಡ 8:8

ಗೋಧಿಯೂ ಜವೆಗೋಧಿಯೂ ದ್ರಾಕ್ಷೆಯೂ ಅಂಜೂರ ಮರಗಳೂ ದಾಳಿಂಬರಗಳೂ ಇರುವ ದೇಶವೇ; ಅದು ಹಿಪ್ಪೇ ಎಣ್ಣೆಯೂ ಜೇನೂ ಉಳ್ಳದೇಶವೇ.

ದ್ವಿತೀಯೋಪದೇಶಕಾಂಡ 11:12

ಅದು ನಿನ್ನ ದೇವರಾದ ಕರ್ತನು ಪರಾಂಬರಿಸುವ ದೇಶವೇ; ವರುಷದ ಆರಂಭ ದಿಂದ ಅಂತ್ಯದ ವರೆಗೂ ಯಾವಾಗಲೂ ನಿನ್ನ ದೇವ ರಾದ ಕರ್ತನ ಕಣ್ಣುಗಳು ಅದರ ಮೇಲೆ ಇವೆ.

ದ್ವಿತೀಯೋಪದೇಶಕಾಂಡ 32:13

ಅವನು ಹೊಲದ ಆದಾಯವನ್ನು ತಿನ್ನುವ ಹಾಗೆ ಭೂಮಿಯ ಎತ್ತರವಾದ ಸ್ಥಳಗಳಲ್ಲಿ ಅವನನ್ನು ಹೋಗ ಮಾಡಿ ಬಂಡೆಯೊಳಗಿಂದ ಜೇನನ್ನೂ ಬಿಳೀ ಕಲ್ಲಿನ ಬಂಡೆಯೊಳಗಿಂದ ಎಣ್ಣೆಯನ್ನೂ ಅವನಿಗೆ ಕುಡಿಯಲು ಕೊಟ್ಟನು.

2 ಅರಸುಗಳು 17:6

ಹೋಶೇ ಯನ ಒಂಭತ್ತನೇ ವರುಷದಲ್ಲಿ ಅಶ್ಶೂರಿನ ಅರಸನು ಸಮಾರ್ಯವನ್ನು ವಶಪಡಿಸಿಕೊಂಡು ಇಸ್ರಾಯೇಲನ್ನು ಅಶ್ಶೂರಿಗೆ ಸೆರೆಯಾಗಿ ಒಯ್ದು ಗೋಜಾನು ನದಿಯ ಬಳಿಯಲ್ಲಿರುವ ಹಲಹುನಲ್ಲಿಯೂ ಹಾಬೋರಿನ ಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು.

2 ಅರಸುಗಳು 17:23

ಹೀಗೆಯೇ ಇಸ್ರಾ ಯೇಲಿನವರು ಇಂದಿನ ವರೆಗೂ ತಮ್ಮ ದೇಶದಿಂದ ಅಶ್ಶೂರಿಗೆ ಸೆರೆಯಾಗಿ ಒಯ್ಯಲ್ಪಟ್ಟರು.

2 ಅರಸುಗಳು 18:11

ಅಶ್ಶೂರಿನ ಅರಸನು ಅಶ್ಶೂರಕ್ಕೆ ಇಸ್ರಾಯೇಲನ್ನು ಸೆರೆಯಾಗಿ ಒಯ್ದು ಗೋಜಾನ್‌ ನದಿಯ ಬಳಿಯಲ್ಲಿ ಹಲಹುನಲ್ಲಿಯೂ ಹಾಬೋರಿನಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು.

2 ಅರಸುಗಳು 19:10

ನೀವು ಯೆಹೂದದ ಅರಸನಾದ ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ--ಯೆರೂಸಲೇಮು ಅಶ್ಶೂ ರಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವದಿಲ್ಲವೆಂದು ನೀನು ನಂಬಿರುವ ನಿನ್ನ ದೇವರು ನಿನ್ನನ್ನು ಮೋಸಗೊಳಿಸ ದಿರಲಿ.

2 ಅರಸುಗಳು 24:14

ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ.

2 ಅರಸುಗಳು 25:11

ಪಟ್ಟಣದಲ್ಲಿ ಉಳಿದ ಜನ ರನ್ನೂ ಬಾಬೆಲಿನ ಅರಸನ ಕಡೆಗೆ ಬಿದ್ದವರನ್ನೂ ಗುಂಪಿ ನಲ್ಲಿ ಮಿಕ್ಕ ಜನರನ್ನೂ ಕಾವಲಿನ ಅಧಿಪತಿಯಾದ ನೆಬೂಜರದಾನನು ಸೆರೆಯಾಗಿ ಒಯ್ದನು.

ಕೀರ್ತನೆಗಳು 3:3

ಆದರೆ ಓ ನನ್ನ ಕರ್ತನೇ, ನನಗೆ ಗುರಾಣಿಯೂ ನನ್ನ ಘನವೂ ನನ್ನ ತಲೆ ಎತ್ತುವವನೂ ನೀನೇ.

ಕೀರ್ತನೆಗಳು 42:4

ಇವುಗಳನ್ನು ಜ್ಞಾಪಕಮಾಡಿಕೊಂಡಾಗ ನನ್ನ ಪ್ರಾಣವು ನನ್ನಲ್ಲಿ ಕ್ಷೀಣಿಸುತ್ತದೆ; ಸಮೂಹ ದೊಂದಿಗೆ ನಾನು ಹೋಗಿ ಉತ್ಸಾಹಧ್ವನಿಯಿಂದಲೂ ಸ್ತೋತ್ರದಿಂದಲೂ ಪರಿಶುದ್ಧ ದಿನವನ್ನು ಆಚರಿಸುವ ಸಮೂಹದ ಸಂಗಡ ದೇವರ ಆಲಯಕ್ಕೆ ಅವರೊಂ ದಿಗೆ ನಾನು ಹೋದೆನಲ್ಲಾ.

ಯೆಶಾಯ 36:17

ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿ ಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು.

Interlinear

Choose Theme