Home Bibles 2 ಅರಸುಗಳು 17:10 · ಕನ್ನಡ ಬೈಬಲ್
2 ಅರಸುಗಳು 17:10 · ಕನ್ನಡ ಬೈಬಲ್

ಇದಲ್ಲದೆ ಅವರು ಎತ್ತರವಾದ ಎಲ್ಲಾ ಗುಡ್ಡಗಳಲ್ಲಿ ತೋಪುಗಳನ್ನು ಹಾಕಿ ಹಸುರಾದ ಎಲ್ಲಾ ಮರಗಳ ಕೆಳಗೂ ತಮಗೆ ವಿಗ್ರಹಗಳನ್ನು ನಿಲ್ಲಿಸಿ

Cross references

ನಿರ್ಗಮಕಾಂಡ 34:13

ಆದರೆ ನೀವು ಅವರ ಯಜ್ಞ ವೇದಿಗಳನ್ನು ಹಾಳುಮಾಡಿ ವಿಗ್ರಹಗಳನ್ನು ಒಡೆದು (ಅಶೇರ) ವಿಗ್ರಹ ಸ್ತಂಭಗಳನ್ನು ಕಡಿದುಹಾಕಬೇಕು.

ಲೇವ್ಯಕಾಂಡ 26:1

ನೀವು ನಿಮಗಾಗಿ ವಿಗ್ರಹಗಳನ್ನಾಗಲಿ ಕೆತ್ತಿದ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ; ನಿಲ್ಲಿಸುವ ಪ್ರತಿಮೆಯನ್ನಾಗಲಿ ಮಾಡಿಕೊಳ್ಳಬೇಡಿರಿ. ಕಲ್ಲಿನ ವಿಗ್ರಹಗಳನ್ನಾಗಲಿ ನಿಮ್ಮ ದೇಶದಲ್ಲಿಟ್ಟು ಕೊಂಡು ಅವುಗಳಿಗೆ ಅಡ್ಡ ಬೀಳಬೇಡಿರಿ. ನಿಮ್ಮ ದೇವರಾಗಿರುವ ಕರ್ತನು ನಾನೇ.

ದ್ವಿತೀಯೋಪದೇಶಕಾಂಡ 12:2

ನೀವು ಸ್ವಾಧೀನಮಾಡಿಕೊಳ್ಳುವ ಜನಾಂಗ ಗಳು ತಮ್ಮ ದೇವರುಗಳಿಗೆ ಎತ್ತರವಾದ ಬೆಟ್ಟಗಳ ಮೇಲೆಯೂ ಗುಡ್ಡಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಸೇವೆಮಾಡಿದ ಸ್ಥಳಗಳನ್ನು, ನೀವು ಪೂರ್ಣವಾಗಿ ನಾಶಮಾಡಬೇಕು.

ದ್ವಿತೀಯೋಪದೇಶಕಾಂಡ 16:21

ನೀನು ನಿನಗೆ ಮಾಡಿಕೊಳ್ಳುವ ನಿನ್ನ ದೇವರಾದ ಕರ್ತನ ಯಜ್ಞವೇದಿಯ ಸವಿಾಪದಲ್ಲಿ ಯಾವ ಮರಗಳ ತೋಪನ್ನಾದರೂ ನೆಡಬಾರದು.ಯಾವ ವಿಗ್ರಹ ವನ್ನೂ ನಿಲ್ಲಿಸಬಾರದು; ಇದನ್ನು ನಿನ್ನ ದೇವರಾದ ಕರ್ತನು ಹಗೆಮಾಡುತ್ತಾನೆ.

ದ್ವಿತೀಯೋಪದೇಶಕಾಂಡ 16:22

ಯಾವ ವಿಗ್ರಹ ವನ್ನೂ ನಿಲ್ಲಿಸಬಾರದು; ಇದನ್ನು ನಿನ್ನ ದೇವರಾದ ಕರ್ತನು ಹಗೆಮಾಡುತ್ತಾನೆ.

1 ಅರಸುಗಳು 14:23

ಅವರು ಎತ್ತರವಾದ ಪ್ರತಿ ಗುಡ್ಡದ ಮೇಲೆಯೂ ಹಸುರಾದ ಪ್ರತಿ ಗಿಡದ ಕೆಳಗೂ ತೋಪು ಗಳನ್ನು ವಿಗ್ರಹಗಳನ್ನು ಉನ್ನತ ಸ್ಥಳಗಳನ್ನು ತಮಗಾಗಿ ಮಾಡಿಕೊಂಡರು. ಇದಲ್ಲದೆ ದೇಶದಲ್ಲಿ ಪುರುಷ ಸಂಗಮರಿದ್ದರು.

2 ಅರಸುಗಳು 16:4

ಇದಲ್ಲದೆ ಅವನು ಉನ್ನತ ಸ್ಥಳಗಳ ಮೇಲೆಯೂ ಬೆಟ್ಟಗಳ ಮೇಲೆಯೂ ಹಸುರಾದ ಎಲ್ಲಾ ಮರಗಳ ಕೆಳಗೂ ಬಲಿಗಳನ್ನೂ ಧೂಪವನ್ನೂ ಸಮರ್ಪಿಸಿದನು.

ಯೆಶಾಯ 2:8

ಅವರ ದೇಶವು ವಿಗ್ರಹಗಳಿಂದಲೂ ತುಂಬಿದೆ; ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನೇ ಆರಾಧಿಸುವರು.

ಯೆಶಾಯ 57:5

ಹಸಿರಾದ ಏಲಾ ಮರಗಳ ಕೆಳಗೆ ವಿಗ್ರಹಗಳಿಂದ ಮದವೇರಿಸಿ ಕೊಂಡು ಹಳ್ಳಗಳಲ್ಲಿ ಬಂಡೆಗಳ ಬಿರುಕುಗಳಲ್ಲಿ ಮಕ್ಕಳನ್ನು ಕೊಂದುಹಾಕುವ ನೀವು ದ್ರೋಹದ ಮಕ್ಕಳೂ ಸುಳ್ಳಿನ ಸಂತತಿಯೂ ಅಲ್ಲವೋ?

ಯೆರೆಮಿಯ 3:6

ಕರ್ತನು ಅರಸನಾದ ಯೋಷೀಯನ ದಿವಸಗಳಲ್ಲಿ ನನಗೆ ಹೇಳಿದ್ದೇನಂದರೆ--ಹಿಂದಿರುಗಿದ ಇಸ್ರಾ ಯೇಲು ಮಾಡಿದ್ದನ್ನು ನೀನು ನೋಡಿದ್ದಿಯೋ? ಅವಳು ಒಂದೊಂದು ಎತ್ತರವಾದ ಬೆಟ್ಟದ ಮೇಲೆಯೂ ಒಂದೊಂದು ಹಸುರಾದ ಮರದ ಕೆಳಗೂ ಹೋಗಿ ಸೂಳೆತನ ಮಾಡಿದ್ದಾಳೆ.

ಯೆಹೆಜ್ಕೇಲ 20:28

ನಾನು ಕೈ ಎತ್ತಿ ಅವರಿಗೆ ಕೊಟ್ಟ ದೇಶದಲ್ಲಿ ನಾನು ಅವರನ್ನು ಬರಮಾಡಿದ ಮೇಲೆ ಅವರು ಎತ್ತರವಾದ ಎಲ್ಲಾ ಗುಡ್ಡಗಳನ್ನೂ ಗಾತ್ರವಾದ ಮರಗಳನ್ನೂ ನೋಡಿ ಅಲ್ಲಿ ತಮ್ಮ ಬಲಿಗಳನ್ನರ್ಪಿಸಿ ಅಲ್ಲಿ ರೇಗಿಸುವ ತಮ್ಮ ಕಾಣಿಕೆಗಳನ್ನರ್ಪಿಸಿ ಸುವಾಸನೆ ಗಳನ್ನಿಟ್ಟು ಪಾನದ್ರವ್ಯವನ್ನು ಸುರಿದರು.

ಮೀಕ 5:14

ನಿನ್ನ ತೋಪುಗಳನ್ನು ನಿನ್ನ ಮಧ್ಯ ದೊಳಗಿಂದ ಕಿತ್ತುಹಾಕಿ ನಿನ್ನ ಪಟ್ಟಣಗಳನ್ನು ನಾಶ ಮಾಡುವೆನು.ಇದಲ್ಲದೆ ಕಿವಿಗೊಡದೆ ಇದ್ದ ಜನಾಂಗಗಳಿಗೆ ಕೋಪದಿಂದಲೂ ಉಗ್ರದಿಂದಲೂ ಮುಯ್ಯಿ ತೀರಿಸುವೆನು.

Interlinear

Choose Theme