Home Bibles 2 ಅರಸುಗಳು 15:38 · ಕನ್ನಡ ಬೈಬಲ್
2 ಅರಸುಗಳು 15:38 · ಕನ್ನಡ ಬೈಬಲ್

ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು. ಅವನನ್ನು ಅವನ ತಂದೆಯಾದ ದಾವೀ ದನ ಪಟ್ಟಣದಲ್ಲಿ ತನ್ನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾಜನು ಅವನಿಗೆ ಬದಲಾಗಿ ಅರಸನಾದನು.

Cross references

2 ಸಮುವೇಲ 7:12

ಇದಲ್ಲದೆ ಕರ್ತನು ನಿನಗೆ ತಿಳಿಸುವದೇನಂದರೆ, ನಾನು ನಿನಗೆ ಮನೆಯನ್ನು ಕಟ್ಟುವೆನು. ನಿನ್ನ ದಿವಸಗಳು ಪೂರ್ತಿ ಯಾಗಿ ನೀನು ನಿನ್ನ ಪಿತೃಗಳ ಸಂಗಡ ಮಲಗಿಕೊಂಡಿ ರುವಾಗ ನಿನ್ನ ಕರುಳುಗಳಿಂದ ಹೊರಡುವ ನಿನ್ನ ಸಂತತಿಯನ್ನು ನಿನ್ನ ತರುವಾಯ ಎಬ್ಬಿಸಿ ನಾನು ಅವನ ರಾಜ್ಯವನ್ನು ಸ್ಥಿರಮಾಡುವೆನು.

1 ಅರಸುಗಳು 1:2

ಆದದರಿಂದ ಅವನ ಸೇವಕರು ಅವನಿಗೆ--ಅರಸನಾದ ನಮ್ಮ ಒಡೆಯನಿ ಗೋಸ್ಕರ ಕನ್ನಿಕೆಯನ್ನು ಹುಡುಕುವೆವು; ಅವಳು ಅರಸನ ಬಳಿಯಲ್ಲಿ ನಿಂತು ಅವನನ್ನು ಆದರಿಸಿ ಅರಸನಾದ ನಮ್ಮ ಒಡೆಯನಿಗೆ ಬೆಚ್ಚಗೆ ಆಗುವ ಹಾಗೆ ಅವನ ಮಗ್ಗುಲಲ್ಲಿ ಮಲಗಲಿ ಅಂದರು.

1 ಅರಸುಗಳು 2:10

ಹೀಗೆಯೇ ದಾವೀದನು ತನ್ನ ಪಿತೃಗಳ ಸಂಗಡ ಮಲಗಿಕೊಂಡನು; ಅವನು ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು.

1 ಅರಸುಗಳು 14:20

ಯಾರೊಬ್ಬಾಮನು ಆಳಿದ ದಿವಸಗಳು ಇಪ್ಪತ್ತೆರಡು ವರುಷಗಳಾಗಿದ್ದವು. ಅವನು ತನ್ನ ಪಿತೃಗಳ ಸಂಗಡ ಮಲಗಿದನು. ಅವನ ಮಗನಾದ ನಾದಾಬನು ಅವನಿಗೆ ಬದಲಾಗಿ ಆಳಿದನು.

1 ಅರಸುಗಳು 14:31

ರೆಹಬ್ಬಾಮನು ತನ್ನ ಪಿತೃಗಳ ಸಂಗಡ ಮಲಗಿದನು. ದಾವೀದನ ಪಟ್ಟಣದಲ್ಲಿ ಅವನು ಹೂಣಿಡಲ್ಪಟ್ಟನು. ಅವನ ತಾಯಿ ಅಮ್ಮೋನ್ಯಳಾದ ನಯಮಾಳೆಂಬ ಹೆಸರುಳ್ಳವಳಾ ಗಿದ್ದಳು. ಅವನ ಮಗನಾದ ಅಬೀಯಾಮನು ಅವನಿಗೆ ಬದಲಾಗಿ ಆಳಿದನು.

2 ಅರಸುಗಳು 8:24

ಯೆಹೋರಾಮನು ತನ್ನ ಪಿತೃಗಳ ಬಳಿಯಲ್ಲಿ ದಾವೀದನ ಪಟ್ಟಣದಲ್ಲಿ ಹೂಣಿಡಲ್ಪಟ್ಟನು; ಅವನ ಮಗನಾದ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು.

2 ಅರಸುಗಳು 16:1

ರೆಮಲ್ಯನ ಮಗನಾದ ಪೆಕಹನ ಆಳ್ವಿಕೆಯ ಹದಿನೇಳನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಯೋತಾಮನ ಮಗನಾದ ಆಹಾಜನು ಆಳಲು ಆರಂಭಿಸಿದನು.

1 ದಿನವೃತ್ತಾಂತ 3:13

ಇವನ ಮಗನು ಆಹಾಜನು; ಇವನ ಮಗನು ಹಿಜ್ಕೀಯನು; ಇವನ ಮಗನು ಮನಸ್ಸೆಯು.

2 ದಿನವೃತ್ತಾಂತ 27:9

ಯೋತಾಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಹೂಣಿಟ್ಟರು. ಅವನ ಮಗನಾದ ಆಹಾ ಜನು ಅವನಿಗೆ ಬದಲಾಗಿ ಆಳಿದನು.

2 ದಿನವೃತ್ತಾಂತ 28:1

ಆಹಾಜನು ಆಳಲು ಆರಂಭಿಸಿದಾಗ ಇಪ್ಪತ್ತು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಹದಿನಾರು ವರುಷ ಆಳಿದನು. ಅವನು ತನ್ನ ಪಿತೃವಾದ ದಾವೀದನ ಹಾಗೆ ಕರ್ತನ ದೃಷ್ಟಿ ಯಲ್ಲಿ ಸರಿಯಾದದ್ದನ್ನು ಮಾಡಿದವನಲ್ಲ.

ಮತ್ತಾಯ 1:9

ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು;

Interlinear

Choose Theme