Home Bibles 2 ಅರಸುಗಳು 15:35 · ಕನ್ನಡ ಬೈಬಲ್
2 ಅರಸುಗಳು 15:35 · ಕನ್ನಡ ಬೈಬಲ್

ಇವನು ಕರ್ತನ ಮನೆಗೆ ಎತ್ತರವಾದ ಬಾಗಲನ್ನು ಕಟ್ಟಿಸಿದನು. ಆದರೆ ಉನ್ನತ ಸ್ಥಳಗಳು ತೆಗೆಯಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನೂ ಧೂಪವನ್ನೂ ಅರ್ಪಿಸುತ್ತಿದ್ದರು.

Cross references

2 ಅರಸುಗಳು 12:3

ಉನ್ನತ ಸ್ಥಳಗಳು ಮಾತ್ರ ಕೆಡವಲ್ಪಡದೆ ಇದ್ದವು; ಜನರು ಉನ್ನತ ಸ್ಥಳಗಳ ಮೇಲೆ ಬಲಿಯನ್ನೂ ಧೂಪವನ್ನೂ ಅರ್ಪಿಸುತ್ತಾ ಇದ್ದರು.

2 ಅರಸುಗಳು 15:4

ಆದರೆ ಉನ್ನತ ಸ್ಥಳಗಳು ಕೆಡವಲ್ಪಡಲಿಲ್ಲ; ಜನರು ಇನ್ನೂ ಉನ್ನತ ಸ್ಥಳಗಳ ಮೇಲೆ ಬಲಿಗಳನ್ನು ಅರ್ಪಿಸಿ ಧೂಪವನ್ನು ಅರ್ಪಿಸುತ್ತಿದ್ದರು.

2 ಅರಸುಗಳು 18:4

ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು.

2 ದಿನವೃತ್ತಾಂತ 23:20

ಅವನು ಶತಾಧಿಪತಿಗಳನ್ನೂ ಗೌರವಸ್ಥರನ್ನೂ ಜನರ ಅಧಿಪತಿಗಳನ್ನೂ ದೇಶದ ಜನರೆಲ್ಲರನ್ನೂ ಕರ ಕೊಂಡು ಅರಸನನ್ನು ಕರ್ತನ ಆಲಯದಿಂದ ಕರ ತಂದನು. ಅವರು ಎತ್ತರವಾದ ಬಾಗಲಿನಿಂದ ಅರಸನ ಮನೆಗೆ ಬಂದು ಅರಸನನ್ನು ರಾಜ್ಯದ ಸಿಂಹಾಸನದ ಮೇಲೆ ಕೂಡ್ರಿಸಿದರು.ಅವರು ಅತಲ್ಯಳನ್ನು ಕತ್ತಿ ಯಿಂದ ಕೊಂದ ತರುವಾಯ ದೇಶದ ಜನರೆಲ್ಲರೂ ಸಂತೋಷಪಟ್ಟರು, ಪಟ್ಟಣವು ಶಾಂತವಾಯಿತು.

2 ದಿನವೃತ್ತಾಂತ 27:3

ಇವನು ಕರ್ತನ ಮಂದಿರದ ಎತ್ತರವಾದ ಬಾಗಲನ್ನು ಕಟ್ಟಿಸಿ ಓಫೇಲ್‌ ಎಂಬ ಗೋಡೆಯ ಮೇಲೆ ಬಹಳವಾಗಿ ಕಟ್ಟಿಸಿದನು.

2 ದಿನವೃತ್ತಾಂತ 32:12

ಈ ಹಿಜ್ಕೀಯನು ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದದವರಿಗೂ ಯೆರೂಸಲೇಮಿ ನವರಿಗೂ--ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು ಅದರ ಮೇಲೆ ಧೂಪವನ್ನರ್ಪಿಸಬೇಕೆಂದು ಹೇಳಿದ್ದಾನಲ್ಲವೇ?

Interlinear

Choose Theme