ನಿನ್ನ ಕುಮಾರರು ನಾಲ್ಕನೇ ಸಂತತಿಯ ವರೆಗೂ ಇಸ್ರಾಯೇಲಿನ ಸಿಂಹಾಸನದ ಮೇಲೆ ಕುಳಿತಿರುವರು ಎಂದು ಕರ್ತನು ಯೇಹುವಿಗೆ ಹೇಳಿದ ವಾಕ್ಯವು ಇದೇ; ಹೀಗೆಯೇ ಆಯಿತು.
Cross references
ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?
ಸಮುವೇಲನು ಬೆಳೆಯುತ್ತಾ ಬಂದನು; ಕರ್ತನು ಅವನ ಸಂಗಡ ಇದ್ದು ಆತನ ವಾಕ್ಯಗಳಲ್ಲಿ ಒಂದಾ ದರೂ ಭೂಮಿಗೆ ಬಿದ್ದು ಹೋಗಗೊಡಿಸಲಿಲ್ಲ.
ಆಗ ಯೇಹುವು ತನ್ನ ಅಧಿಪತಿ ಯಾದ ಬಿದ್ಕರನಿಗೆ--ನೀನು ಅವನನ್ನು ತೆಗೆದುಕೊಂಡು ಹೋಗಿ ಇಜ್ರೇಲ್ಯನಾದ ನಾಬೋತನ ಪಾಲಾಗಿರುವ ಹೊಲದಲ್ಲಿ ಹಾಕಿಬಿಡು.
ಅದಕ್ಕವನುಕರ್ತನು ತನ್ನ ಸೇವಕನಾಗಿರುವ ತಿಷ್ಬೀಯನಾದ ಎಲೀ ಯನ ಮುಖಾಂತರ ಹೇಳಿದ ವಾಕ್ಯವು ಇದೇ--ಇಜ್ರೇಲಿನ ಹೊಲದಲ್ಲಿ ನಾಯಿಗಳು ಈಜೆಬೆಲಳ ಮಾಂಸವನ್ನು ತಿನ್ನುವವು.ಇದಲ್ಲದೆ ಇದೇ ಈಜೆ ಬೆಲಳೆಂದು ಹೇಳಕೂಡದ ಹಾಗೆ ಇಜ್ರೇಲಿನ ಪಾಲಿನ ಹೊಲದ ಮೇಲ್ಭಾಗದಲ್ಲಿ ಈಜೆಬೆಲಳ ಹೆಣ ಗೊಬ್ಬರದ ಹಾಗೆ ಇರುವದು ಎಂಬದೇ.
ಆದರೆ ಇವರೆಲ್ಲರನ್ನು ಸಂಹರಿಸಿದವರಾರು? ಕರ್ತನು ಅಹಾ ಬನ ಮನೆಯನ್ನು ಕುರಿತು ಹೇಳಿದ ಕರ್ತನ ಮಾತು ಗಳಲ್ಲಿ ಒಂದೂ ವ್ಯರ್ಥವಾಗುವದಿಲ್ಲವೆಂದು ನೀವು ತಿಳಿದುಕೊಳ್ಳಿರಿ. ಕರ್ತನು ತನ್ನ ಸೇವಕನಾದ ಎಲೀಯನ ಮುಖಾಂತರ ಹೇಳಿದ್ದನ್ನು ನೆರವೇರಿಸಿದ್ದಾನೆ ಅಂದನು.
ಕರ್ತನು ಯೇಹು ವಿಗೆ--ನೀನು ನನ್ನ ದೃಷ್ಟಿಗೆ ಸರಿಯಾದದ್ದನ್ನು ನಡಿಸಿ ನನ್ನ ಹೃದಯದಲ್ಲಿದ್ದ ಎಲ್ಲಾದರ ಪ್ರಕಾರ ಅಹಾಬನ ಮನೆಗೆ ಮಾಡಿ ಯುಕ್ತವಾದದ್ದನ್ನು ಮಾಡಿದ್ದರಿಂದ ನಿನ್ನ ಮಕ್ಕಳು ನಾಲ್ಕು ವಂಶಗಳ ವರೆಗೂ ಇಸ್ರಾಯೇ ಲಿನ ಸಿಂಹಾಸನದ ಮೇಲೆ ಕುಳಿತುಕೊಳ್ಳುವರು ಅಂದನು.
ಯೆಹೂದದ ಅರಸನಾಗಿರುವ ಅಹಜ್ಯನಮಗನಾದ ಯೆಹೋವಾಷನ ಇಪ್ಪತ್ತ ಮೂರನೇ ವರುಷದಲ್ಲಿ ಯೇಹುವಿನ ಮಗನಾದ ಯೆಹೋವಾಹಾಜನು ಸಮಾರ್ಯದಲ್ಲಿ ಇಸ್ರಾಯೇಲ್ಯರ ಅರಸನಾಗಿ ಹದಿನೇಳು ವರುಷ ಆಳಿದನು.
ಯೆಹೂದದ ಅರಸನಾದ ಯೆಹೋವಾಷನ ಆಳ್ವಿಕೆಯ ಮೂವತ್ತೇಳನೇ ವರುಷದಲ್ಲಿ ಯೆಹೋವಾ ಹಾಜನ ಮಗನಾದ ಯೋವಾಷನು ಸಮಾರ್ಯ ದಲ್ಲಿ ಇಸ್ರಾಯೇಲ್ಯರ ಅರಸನಾಗಿ ಹದಿನಾರು ವರುಷ ಆಳಿದನು.
ಯೆಹೋವಾ ಷನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಸಮಾರ್ಯ ದಲ್ಲಿ ಇಸ್ರಾಯೇಲಿನ ಅರಸುಗಳ ಸ್ಮಶಾನ ಭೂಮಿಯಲ್ಲಿ ಅವನನ್ನು ಹೂಣಿಟ್ಟರು. ಯಾರೊಬ್ಬಾಮನು ಅವನ ಸಿಂಹಾಸನದ ಮೇಲೆ ಕುಳಿತುಕೊಂಡನು.
ಯಾರೊಬ್ಬಾಮನು ಇಸ್ರಾಯೇಲಿನ ಅರಸುಗಳಾದ ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನ ಮಗನಾದ ಜೆಕರ್ಯ ಅವನಿಗೆ ಬದಲಾಗಿ ಅರಸನಾದನು.
ಆದರೆ ನಾನು ನನ್ನ ಸೇವಕರಾದ ಪ್ರವಾದಿಗಳಿಗೆ ಆಜ್ಞಾಪಿಸಿದ ನನ್ನ ವಾಕ್ಯ ಗಳೂ ನನ್ನ ನಿಯಮಗಳೂ ನಿಮ್ಮ ಪಿತೃಗಳಿಗೆ ಸೇರಲಿ ಲ್ಲವೋ? ಆಗ ಅವರು ತಿರುಗಿಕೊಂಡು--ಸೈನ್ಯಗಳ ಕರ್ತನು ಯೋಚಿಸಿದ ಹಾಗೆಯೇ ನಮ್ಮ ಮಾರ್ಗಗಳ ಪ್ರಕಾರವಾಗಿಯೂ ನಮ್ಮ ಕ್ರಿಯೆಗಳ ಪ್ರಕಾರವಾ ಗಿಯೂ ನಮಗೆ ಮಾಡಿದ್ದಾನೆಂದು ಹೇಳಿದರು ಎಂಬದು.
ಆಕಾಶವೂ ಭೂಮಿಯೂ ಅಳಿದು ಹೋಗುವವು; ಆದರೆ ನನ್ನ ಮಾತುಗಳು ಅಳಿದು ಹೋಗುವದೇ ಇಲ್ಲ.
ಹಾಗಾದರೆ ದೇವರವಾಕ್ಯವನ್ನು ಹೊಂದಿದವರು ದೇವರುಗಳೆಂದು ಆತನು ಕರೆದಿರುವಲ್ಲಿ ಬರಹವು ವ್ಯರ್ಥವಾಗಲಾರದಷ್ಟೆ.
ಆದದ ರಿಂದ ಅವರು--ನಾವು ಅದನ್ನು ಹರಿಯುವದು ಬೇಡ; ಆದರೆ ಅದು ಯಾರಿಗಾಗುವದೋ ಎಂದು ಅದಕ್ಕೋಸ್ಕರ ಚೀಟು ಹಾಕಿಕೊಳ್ಳೋಣ ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು; ಹೀಗೆ--ನನ್ನ ಬಟ್ಟೆಯನ್ನು ಅವರು ತಮ್ಮೊಳಗೆ ಪಾಲುಮಾಡಿ ಕೊಂಡರು; ನನ್ನ ಮೇಲಂಗಿಗೋಸ್ಕರ ಚೀಟು ಹಾಕಿ ದರ
ಯಾಕಂದರೆ--ಆತನ ಒಂದು ಎಲುಬಾದರೂ ಮುರಿಯಲ್ಪಡಬಾರದು ಎಂಬ ಬರಹವು ನೆರವೇರುವಂತೆ ಇವುಗಳು ಸಂಭವಿಸಿದವು.
ಜನರೇ, ಸಹೋದ ರರೇ, ಯೇಸುವನ್ನು ಹಿಡಿದವರಿಗೆ ದಾರಿ ತೋರಿಸಿದ ಯೂದನ ವಿಷಯವಾಗಿ ಮೊದಲು ದಾವೀದನ ಬಾಯಿಂದ ಪವಿತ್ರಾತ್ಮನು ಹೇಳಿದ್ದ ಬರಹವು ನೆರ ವೇರುವದು ಅವಶ್ಯವಾಗಿತ್ತು.