ಅವನ ಸೇವಕರಾದ ಶಿಮೆಯಾತನ ಮಗನಾದ ಯೊಜಾಕಾರನೂ, ಶೋಮೇರನ ಮಗನಾದ ಯೆಹೋ ಜಾಬಾದನೂ ಅವನನ್ನು ಹೊಡೆದದ್ದರಿಂದ ಅವನು ಸತ್ತುಹೋದನು. ಅವರು ಅವನನ್ನು ದಾವೀದನ ಪಟ್ಟಣದಲ್ಲಿ ಅವನ ಪಿತೃಗಳ ಸ್ಮಶಾನ ಭೂಮಿಯಲ್ಲಿ ಹೂಣಿಟ್ಟರು; ಅವನ ಮಗನಾದ ಅಮಚ್ಯನು ಅವನಿಗೆ ಬದಲಾಗಿ ಅರಸನಾದನು.
Cross references
ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು.
ಇಸ್ಸಾಕಾರನ ಮನೆಯವನಾಗಿರುವ ಅಹೀಯನ ಮಗನಾದ ಬಾಷನು ಅವನಿಗೆ ವಿರೋಧವಾಗಿದ್ದು ಫಿಲಿಷ್ಟಿಯರಿಗೆ ಉಂಟಾದ ಗಿಬ್ಬೆತೋನಿನಲ್ಲಿ ಅವನನ್ನು ಹೊಡೆದುಬಿಟ್ಟನು. ಯಾಕಂದರೆ ನಾದಾಬನೂ ಸಮಸ್ತ ಇಸ್ರಾಯೇಲ್ಯರೂ ಗಿಬ್ಬೆತೋನಿಗೆ ಮುತ್ತಿಗೆ ಹಾಕುತ್ತಾ ಇದ್ದರು.
ಹೀಗೆ ನಿಂಷಿಯ ಮಗನಾಗಿ ರುವ ಯೆಹೋಷಾಫಾಟನ ಮಗನಾದ ಯೇಹುವು ಯೆಹೋರಾಮನಿಗೆ ವಿರೋಧವಾಗಿ ಒಳಸಂಚು ಮಾಡಿ ದನು. ಅರಾಮ್ಯರ ಅರಸನಾದ ಹಜಾಯೇಲನ ನಿಮಿತ್ತ ಯೆಹೋರಾಮನೂ ಎಲ್ಲಾ ಇಸ್ರಾಯೇಲ್ಯರೂ ಗಿಲ್ಯಾ ದಿನ ರಾಮೋತಿನಲ್ಲಿ ಕಾಯುತ್ತಾ ಇದ್ದರು.
ಯೆಹೂದದ ಅರಸ ನಾದ ಅಹಜ್ಯನು ಇದನ್ನು ನೋಡಿದಾಗ ಅವನು ತೋಟದ ಮನೆಯ ಮಾರ್ಗವಾಗಿ ಓಡಿಹೋದನು. ಯೇಹುವು ಅವನ ಹಿಂದೆ ಹೋಗಿ--ರಥದಲ್ಲಿ ಅವ ನನ್ನು ಸಹ ಸಂಹರಿಸಿರಿ ಅಂದನು. ಇಬ್ಲೆಯಾಮಿನ ಬಳಿಯಲ್ಲಿರುವ ಗೂರ್ ಎಂಬ ಸ್ಥಳಕ್ಕೆ ಏರಿ ಹೋಗುವ ಮಾರ್ಗದಲ್ಲಿ ಹೊಡೆದರು. ಅವನು ಮೆಗಿದ್ದೋನಿಗೆ ಓಡಿಹೋಗಿ ಅಲ್ಲಿ ಸತ್ತುಹೋದನು.
ಉದಯ ಕಾಲದಲ್ಲಿ ಏನಾಯಿತೆಂದರೆ, ಅವನು ಹೊರಟು ನಿಂತು ಎಲ್ಲಾ ಜನರಿಗೆ ಹೇಳಿದ್ದೇನಂದರೆ -- ನೀವು ನೀತಿವಂತರು; ಇಗೋ, ನಾನು ನನ್ನ ಯಜಮಾನನ ಮೇಲೆ ಒಳಸಂಚು ಮಾಡಿ ಅವನನ್ನು ಕೊಂದುಹಾಕಿದೆನು.
ಇಸ್ರಾಯೇಲಿನ ಅರಸನಾಗಿರುವ ಯೆಹೋ ವಾಹಾಜನ ಮಗನಾದ ಯೋವಾಷನ ಆಳ್ವಿಕೆಯ ಎರಡನೇ ವರುಷದಲ್ಲಿ ಯೆಹೂದದ ಅರಸ ನಾಗಿರುವ ಯೆಹೋವಾಷನ ಮಗನಾದ ಅಮಚ್ಯನು ಅರಸನಾದನು.
ರಾಜ್ಯವು ತನ್ನ ಕೈಯಲ್ಲಿ ಸ್ಥಿರಪಟ್ಟ ತರುವಾಯ ಅರಸ ನಾಗಿದ್ದ ತನ್ನ ತಂದೆಯನ್ನು ಕೊಂದ ತನ್ನ ಸೇವಕರನ್ನು ಕೊಂದುಹಾಕಿದನು.
ಅವರು ಯೆರೂಸಲೇಮಿ ನಲ್ಲಿ ಅವನ ಮೇಲೆ ಒಳಸಂಚು ಮಾಡಿದ್ದರಿಂದ ಅವನು ಲಾಕೀಷಿಗೆ ಓಡಿಹೋದನು. ಆದರೆ ಅವರು ಅವನ ಹಿಂದೆ ಲಾಕೀಷಿಗೆ ಜನರನ್ನು ಕಳುಹಿಸಿ ಅಲ್ಲಿ ಅವನನ್ನು ಕೊಂದುಹಾಕಿದರು.
ಆಗ ಯಾಬೇಷನ ಮಗನಾದ ಶಲ್ಲೂಮನು ಅವನ ಮೇಲೆ ಒಳಸಂಚು ಮಾಡಿ ಜನರ ಮುಂದೆ ಅವನನ್ನು ಹೊಡೆದು ಕೊಂದು ಹಾಕಿ ಅವನಿಗೆ ಬದಲಾಗಿ ಅರಸನಾದನು.
ಅವನಿಗೆ ವಿರೋಧವಾಗಿ ಒಳಸಂಚು ಮಾಡಿ ದವರಾರಂದರೆ, ಅಮ್ಮೋನ್ಯಳಾಗಿರುವ ಶಿಮ್ಗಾಳ ಮಗ ನಾದ ಜಾಬಾದನು, ಮೋವಾಬ್ಯಳಾಗಿರುವ ಶಿವ್ರೆಾ ತಳ ಮಗನಾದ ಯೆಹೋಜಾಬಾದನು.ಆದರೆ ಅವನ ಕುಮಾರರನ್ನು ಕುರಿತೂ ಅವನ ಮೇಲೆ ಹಾಕಿದ ಭಾರಗಳನ್ನು ಕುರಿತೂ ದೇವರ ಆಲಯ ದುರಸ್ತು ಮಾಡುವದನ್ನು ಕುರಿತೂ ಇಗೋ, ಅವು ಅರಸುಗಳ ಚರಿತ್ರೆಯ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನ ಮಗ ನಾದ ಅಮಚ್ಯನು ಅವನಿಗೆ ಬದಲಾಗಿ ಆಳಿದನು.