Home Bibles 2 ಅರಸುಗಳು 11:10 · ಕನ್ನಡ ಬೈಬಲ್
2 ಅರಸುಗಳು 11:10 · ಕನ್ನಡ ಬೈಬಲ್

ಆಗ ಯಾಜಕನು ಕರ್ತನ ಆಲಯದಲ್ಲಿದ್ದ ಅರಸನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ನೂರಕ್ಕೆ ಅಧಿಪತಿಯಾದವರಿಗೆ ಕೊಟ್ಟನು.

Cross references

1 ಸಮುವೇಲ 21:9

ಅದಕ್ಕೆ ಯಾಜಕನು--ನೀನು ಏಲಾ ತಗ್ಗಿನಲ್ಲಿ ಸಂಹರಿಸಿದ ಫಿಲಿಷ್ಟಿಯನಾದ ಗೊಲ್ಯಾ ತನ ಕತ್ತಿಯನ್ನು ಎಫೋದಿನ ಹಿಂದೆ ಒಂದು ಬಟ್ಟೆ ಯಲ್ಲಿ ಸುತ್ತಿ ಇಟ್ಟಿದೆ. ಅದನ್ನು ನೀನು ತೆಗೆದುಕೊಂಡರೆ ತೆಗೆದುಕೋ ಯಾಕಂದರೆ ಅದು ಒಂದೇ ಅಲ್ಲದೆ ಇಲ್ಲಿ ಬೇರೊಂದು ಇಲ್ಲ ಅಂದನು. ಅದಕ್ಕೆ ದಾವೀದನು ಅದರಂಥದ್ದು ಇನ್ನಿಲ್ಲ; ಅದನ್ನು ನನಗೆ ಕೊಡು ಅಂದನು.

2 ಸಮುವೇಲ 8:7

ಆದರೆ ದಾವೀದನು ಹದದೆಜೆರನ ಸೇವಕ ರಿಗಿದ್ದ ಬಂಗಾರದ ಡಾಲುಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು.

1 ದಿನವೃತ್ತಾಂತ 18:7

ಆಗ ದಾವೀದನು ಹದರೆಜರನ ಸೇವಕರಿಗುಂಟಾದ ಬಂಗಾ ರದ ಗುರಾಣಿಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು.

1 ದಿನವೃತ್ತಾಂತ 26:26

ಈ ಶೆಲೋಮೊತನೂ ಅವನ ಸಹೋದರರೂ ಅರಸ ನಾದ ದಾವೀದನೂ ಮುಖ್ಯಸ್ಥರಾದ ಪಿತೃಗಳೂ ಸೈನ್ಯಾಧಿಪತಿಗಳಾದ ಸಹಸ್ರಗಳ ಮೇಲೆಯೂ ಶತಗಳ ಮೇಲೆಯೂ ಅಧಿಪತಿಗಳಾದವರೂ ಪ್ರತಿಷ್ಠೆಮಾಡಿದ ಪ್ರತಿಷ್ಠವಾದವುಗಳ ಬೊಕ್ಕಸಗಳ ಮೇಲೆಯೂ ಇದ್ದರು.

2 ದಿನವೃತ್ತಾಂತ 5:1

ಹೀಗೆ ಸೊಲೊಮೋನನು ಕರ್ತನ ಆಲಯಕ್ಕೊಸ್ಕರ ಮಾಡಿಸಿದ ಕೆಲಸವೆಲ್ಲಾ ಮುಗಿಸಿ ತನ್ನ ತಂದೆಯಾದ ದಾವೀದನು ಪ್ರತಿಷ್ಠೆ ಮಾಡಿದ್ದ ಬೆಳ್ಳಿಬಂಗಾರವನ್ನೂ ಎಲ್ಲಾ ಸಾಮಾನು ಗಳನ್ನೂ ದೇವರ ಆಲಯದ ಬೊಕ್ಕಸಗಳಲ್ಲಿ ಇಟ್ಟನು.

2 ದಿನವೃತ್ತಾಂತ 23:9

ಇದಲ್ಲದೆ ಯಾಜಕನಾದ ಯೆಹೋಯಾದನು ದೇವರ ಆಲಯದಲ್ಲಿದ್ದ ಅರಸ ನಾದ ದಾವೀದನ ಈಟಿಗಳನ್ನೂ ಗುರಾಣಿಗಳನ್ನೂ ಡಾಲುಗಳನ್ನೂ ಶತಾಧಿಪತಿಗಳಾದವರಿಗೆ ಕೊಟ್ಟು

Interlinear

Choose Theme