2 ಅರಸುಗಳು 10:8 · ಕನ್ನಡ ಬೈಬಲ್
ಆಗ ಆ ಸೇವಕರು ಬಂದು ಅವನಿಗೆಅರಸನ ಮಕ್ಕಳ ತಲೆಗಳನ್ನು ತೆಗೆದುಕೊಂಡು ಬಂದಿ ದ್ದಾರೆಂದು ತಿಳಿಸಿದರು. ಅದಕ್ಕವನು--ಉದಯ ಕಾಲದ ವರೆಗೂ ಅವುಗಳನ್ನು ಹೆಬ್ಬಾಗಿಲಿನ ದ್ವಾರದಲ್ಲಿ ಎರಡು ಕುಪ್ಪೆಗಳಾಗಿ ಹಾಕಿರಿ ಅಂದನು.
Cross references
ದ್ವಿತೀಯೋಪದೇಶಕಾಂಡ 21:23
ಅವನ ಹೆಣವು ರಾತ್ರಿಯಲ್ಲಿ ಮರದ ಮೇಲಿರಬಾರದು; ಅವನನ್ನು ಹೇಗಾದರೂ ಅದೇ ದಿವಸದಲ್ಲಿ ಹೂಣಿಡ ಬೇಕು; (ಯಾಕಂದರೆ ತೂಗಾಡುವವನು ದೇವರಿಂದ ಶಾಪಗ್ರಸ್ತನಾಗಿದ್ದಾನೆ); ಆದರೆ ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯವಾಗಿ ಕೊಡುವ ಭೂಮಿಯು ಅಶುದ್ಧವಾಗಬಾರದು.
2 ಸಮುವೇಲ 11:18
ಆಗ ಯೋವಾಬನು ಯುದ್ಧದ ವರ್ತಮಾನ ಗಳನ್ನೆಲ್ಲಾ ದಾವೀದನಿಗೆ ತಿಳಿಸುವದಕ್ಕೆ ದೂತನನ್ನು ಕಳುಹಿಸುವಾಗ ಅವನಿಗೆ ಹೇಳಿದ್ದೇನಂದರೆ--
1 ಅರಸುಗಳು 21:14
ಅವರು ಈಜೆಬೆಲಳಿಗೆ--ನಾಬೋತನು ಕಲ್ಲೆಸೆಯ ಲ್ಪಟ್ಟು ಸತ್ತನೆಂದು ಹೇಳಿ ಕಳುಹಿಸಿದರು.
ಮಾರ್ಕ 6:28
ಕೂಡಲೆ ಅವನ ತಲೆಯನ್ನು ತರುವದಕ್ಕಾಗಿ ಅರಸನು ಒಬ್ಬ ಕೊಲೆ ಯಾಳಿಗೆ ಅಪ್ಪಣೆಕೊಟ್ಟು ಕಳುಹಿಸಿದನು; ಅವನು ಹೋಗಿ ಸೆರೆಮನೆಯಲ್ಲಿ ಅವನ ತಲೆಯನ್ನು ಹೊಯು