Home Bibles ☰ Books 2 ಕೊರಿಂಥದವರಿಗೆ 3:17 · ಕನ್ನಡ ಬೈಬಲ್
2 ಕೊರಿಂಥದವರಿಗೆ 3:17 · ಕನ್ನಡ ಬೈಬಲ್

ಕರ್ತನು ಆ ಆತ್ಮನೇ ಆಗಿದ್ದಾನೆ; ಕರ್ತನ ಆತ್ಮನು ಯಾರಲ್ಲಿದ್ದಾನೋ ಅವರಿಗೆ ಬಿಡುಗಡೆ ಉಂಟು.ಆದರೆ ನಾವೆಲ್ಲರೂ ತೆರೆದ ಮುಖವುಳ್ಳವರಾಗಿ ದರ್ಪಣದಲ್ಲಿ ಕಾಣುವಂತೆ ಕರ್ತನ ಮಹಿಮೆಯನ್ನು ನೋಡುತ್ತಾ ಕರ್ತನ ಆತ್ಮನಿಂದಲೋ ಎಂಬಂತೆ ಅದೇ ಸಾರೂಪ್ಯಕ್ಕೆ ಮಹಿಮೆಯಿಂದ ಮಹಿಮೆಗೆ ಮಾರ್ಪಡುತ್ತೇವೆ.

Cross references

ಕೀರ್ತನೆಗಳು 51:12

ನಿನ್ನ ರಕ್ಷಣೆಯ ಆನಂದವನ್ನು ನನಗೆ ತಿರುಗಿಕೊಡು; ನಿನ್ನ ಸಿದ್ಧಮನಸ್ಸಿನಿಂದ ನನ್ನನ್ನು ಮೇಲೆತ್ತು.

ಯೆಶಾಯ 61:1

ದೇವರಾದ ಕರ್ತನ ಆತ್ಮವು ನನ್ನ ಮೇಲೆ ಅದೆ; ದೀನರಿಗೆ ಶುಭಸಮಾಚಾರವನ್ನು ಸಾರುವದಕ್ಕೆ ಕರ್ತನು ನನ್ನನ್ನು ಅಭಿಷೇಕಿಸಿದ್ದಾನೆ; ಮುರಿದ ಹೃದಯವುಳ್ಳವರನ್ನು ಕಟ್ಟುವದಕ್ಕೂ ಸೆರೆಯವರಿಗೆ ಬಿಡುಗಡೆಯನ್ನು ಬಂಧಿಸಲ್ಪಟ್ಟವರಿಗೆ ಸೆರೆಮನೆಯ ಕದ ತೆರೆಯುವದನ್ನು ಪ್ರಸಿದ್ಧಿ ಮಾಡುವದಕ್ಕೂ

ಯೋಹಾನ 6:63

ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ.

ಯೋಹಾನ 8:32

ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು ಎಂದು ಹೇಳಿದನು.

ರೋಮಾಪುರದವರಿಗೆ 8:2

ಜೀವವನ್ನುಂಟು ಮಾಡುವ ಆತ್ಮನ ನಿಯಮವು ಕ್ರಿಸ್ತ ಯೇಸುವಿನಲ್ಲಿ ನನ್ನನ್ನು ಪಾಪ ಮರಣಗಳ ನಿಯಮ ದಿಂದ ಬಿಡಿಸಿತು.

ರೋಮಾಪುರದವರಿಗೆ 8:15

ನೀವು ತಿರಿಗಿ ಭಯವುಳ್ಳವರಾಗಿರುವಂತೆ ದಾಸನ ಭಾವವನ್ನು ಹೊಂದಿದವರಲ್ಲ; ಆದರೆ ದತ್ತುಪುತ್ರ ಸ್ವೀಕಾರದ ಆತ್ಮನನ್ನು ಹೊಂದಿರುವದರಿಂದ ದೇವರನ್ನು ನಾವು ಅಪ್ಪಾ, ತಂದೆಯೇ ಎಂದು ಕೂಗುತ್ತೇವೆ.

1 ಕೊರಿಂಥದವರಿಗೆ 15:45

ಬರೆದಿರುವ ಪ್ರಕಾರ-- ಮೊದಲನೆಯ ಮನುಷ್ಯನಾದ ಆದಾಮನು ಜೀವಾತ್ಮ ನಾದನು; ಕಡೇ ಆದಾಮನು ಬದುಕಿಸುವ ಆತ್ಮ ನಾಗಿದ್ದಾನೆ.

2 ಕೊರಿಂಥದವರಿಗೆ 3:6

ಆತನು ನಮ್ಮನ್ನು ಸಹ ಹೊಸ ಒಡಂಬಡಿಕೆಗೆ ಸಮರ್ಥರಾದ ಸೇವಕರನ್ನಾಗಿ ಮಾಡಿದ್ದಾನೆ; ಅಕ್ಷರಕ್ಕನುಸಾರವಾಗಿ ಅಲ್ಲ; ಆತ್ಮನಿಗನು ಸಾರವಾಗಿಯೇ. ಯಾಕಂದರೆ ಅಕ್ಷರವು ಮರಣ ವನ್ನುಂಟು ಮಾಡುತ್ತದೆ; ಆತ್ಮವು ಜೀವವನ್ನುಂಟು ಮಾಡುತ್ತದೆ.

ಗಲಾತ್ಯದವರಿಗೆ 4:6

ನೀವು ಪುತ್ರ ರಾಗಿರುವದರಿಂದ--ಅಪ್ಪಾ, ತಂದೆಯೇ ಎಂದು ಕೂಗುವ ತನ್ನ ಮಗನ ಆತ್ಮನನ್ನು ದೇವರು ನಿಮ ಹೃದಯಗಳಲ್ಲಿ ಕಳುಹಿಸಿಕೊಟ್ಟನು.

ಗಲಾತ್ಯದವರಿಗೆ 5:1

ಕ್ರಿಸ್ತನು ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ್ದಾನೆ. ಅದರಲ್ಲಿ ಸ್ಥಿರವಾಗಿ ನಿಲ್ಲಿರಿ; ದಾಸತ್ವದ ನೊಗದಲ್ಲಿ ತಿರಿಗಿ ಸಿಕ್ಕಿಕೊಳ್ಳಬೇಡಿರಿ.

ಗಲಾತ್ಯದವರಿಗೆ 5:13

ಸಹೋದರರೇ, ನೀವು ಸ್ವತಂತ್ರರಾಗಿರಬೇಕೆಂದು ಕರೆಯಲ್ಪಟ್ಟಿದ್ದೀರಿ. ಸ್ವಾತಂತ್ರ್ಯವನ್ನು ಶರೀರಕ್ಕೆ ಆಸ್ಪದವಾಗಿ ಬಳಸದೆ ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆ ಮಾಡಿರಿ.

2 ತಿಮೋಥೆಯ 1:7

ದೇವರು ನಮಗೆ ಕೊಟ್ಟಿರುವ ಆತ್ಮವು ಬಲ ಪ್ರೀತಿ ಸ್ವಸ್ಥಬುದ್ಧಿಯ ಆತ್ಮವೇ ಹೊರತು ಭಯದ ಆತ್ಮವಲ್ಲ.

Interlinear

Choose Theme