Home Bibles ☰ Books 2 ಕೊರಿಂಥದವರಿಗೆ 2:9 · ಕನ್ನಡ ಬೈಬಲ್
2 ಕೊರಿಂಥದವರಿಗೆ 2:9 · ಕನ್ನಡ ಬೈಬಲ್

ಸರ್ವವಿಷಯದಲ್ಲೂ ನೀವು ವಿಧೇಯರಾಗಿದ್ದೀರೋ ಏನೋ ನಿಮ್ಮನ್ನು ಪರೀಕ್ಷಿಸಿ ತಿಳುಕೊಳ್ಳಬೇಕೆಂಬ ಉದ್ದೇಶದಿಂದಲೇ ಬರೆದೆನು.

Cross references

ನಿರ್ಗಮಕಾಂಡ 16:4

ಆಗ ಕರ್ತನು ಮೋಶೆಗೆ--ಇಗೋ, ರೊಟ್ಟಿಯನ್ನು ನಿಮಗಾಗಿ ನಾನು ಆಕಾಶದಿಂದ ಸುರಿಸುತ್ತೇನೆ; ಅವರು ನನ್ನ ನ್ಯಾಯಪ್ರಮಾಣದ ಪ್ರಕಾರ ನಡೆದುಕೊಳ್ಳುವರೋ ಇಲ್ಲವೋ ಎಂದು ನಾನು ಅವರನ್ನು ಪರೀಕ್ಷಿಸುವ ಹಾಗೆ ಜನರು ಹೊರಗೆಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದ ದ್ದನ್ನು ಕೂಡಿಸಲಿ.

ದ್ವಿತೀಯೋಪದೇಶಕಾಂಡ 8:2

ನೀನು ತಗ್ಗಿಸಿಕೊಳ್ಳುವ ನಿಮಿತ್ತವೂ ಹೃದಯದಲ್ಲಿ ಇರುವದನ್ನು ಅಂದರೆ ನೀನು ಆತನ ಆಜ್ಞೆಗಳನ್ನು ಕಾಪಾಡುವಿಯೋ ಇಲ್ಲವೋ ಎಂದು ತಿಳುಕೊಳ್ಳುವ ದಕ್ಕೂ ನಿನ್ನ ದೇವರಾದ ಕರ್ತನು ನಿನ್ನನ್ನು ಈ ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಬೇಕು.

ದ್ವಿತೀಯೋಪದೇಶಕಾಂಡ 8:16

ನಿನ್ನನ್ನು ಕುಂದಿಸಿ ಶೋಧಿಸಿ ಕಡೆಯಲ್ಲಿ ನಿನಗೆ ಒಳ್ಳೇದನ್ನು ಮಾಡುವಂತೆ, ನಿನ್ನ ಪಿತೃಗಳು ಅರಿಯದ ಮನ್ನವನ್ನು ಅರಣ್ಯದಲ್ಲಿ ನಿನಗೆ ತಿನ್ನಿಸಿ ದಂಥ ನಿನ್ನ ದೇವರಾದ ಕರ್ತನನ್ನು ಮರೆತು--

ದ್ವಿತೀಯೋಪದೇಶಕಾಂಡ 13:3

ಆ ಪ್ರವಾದಿಯ ಇಲ್ಲವೆ ಕನಸು ಕಾಣುವವನ ಮಾತುಗಳನ್ನು ಕೇಳಬಾರದು. ನಿಮ್ಮ ದೇವರಾದ ಕರ್ತನು ನಿಮ್ಮನ್ನು ಶೋಧಿಸಿ ನೀವು ನಿಮ್ಮ ಪೂರ್ಣಹೃದಯದಿಂದಲೂ ನಿಮ್ಮ ಪೂರ್ಣ ಪ್ರಾಣದಿಂದಲೂ ನಿಮ್ಮ ದೇವರಾದ ಕರ್ತನನ್ನು ಪ್ರೀತಿ ಮಾಡುತ್ತೀರೇನೋ ಎಂದು ಪರೀಕ್ಷಿಸುತ್ತಾನೆ.

2 ಕೊರಿಂಥದವರಿಗೆ 7:12

ನಾನು ಹೀಗೆ ನಿಮಗೆ ಬರೆದದ್ದು ಅನ್ಯಾಯ ಮಾಡಿದವನಿ ಗೋಸ್ಕರವಲ್ಲ, ಅನ್ಯಾಯ ಸಹಿಸಿದವನಿಗೋಸ್ಕರವೂ ಅಲ್ಲ; ದೇವರ ದೃಷ್ಟಿಯಲ್ಲಿ ನಿಮಗೋಸ್ಕರ ನಮಗಿರುವ ಚಿಂತೆಯು ನಿಮಗೆ ತೋರಿ ಬರುವದಕ್ಕೋಸ್ಕರವೇ ಬರೆದೆನು.

2 ಕೊರಿಂಥದವರಿಗೆ 8:24

ಆದಕಾರಣ ನಿಮ್ಮ ಪ್ರೀತಿಯನ್ನೂ ನಿಮ್ಮ ವಿಷಯವಾಗಿರುವ ನಮ್ಮ ಹೊಗಳಿ ಕೆಯನ್ನೂ ಇವರಿಗೂ ಸಭೆಗಳಿಗೂ ವ್ಯಕ್ತಪಡಿಸಿರಿ.

2 ಕೊರಿಂಥದವರಿಗೆ 10:6

ನಾವು ಊಹೆಗಳನ್ನು ದೇವಜ್ಞಾನವನ್ನೂ ವಿರೋಧಿ ಸುವದಕ್ಕೆ ಏರಿಸಲ್ಪಟ್ಟಿರುವ ಉನ್ನತವಾದವುಗಳೆಲ್ಲವನ್ನೂ ಕೆಡವಿಹಾಕಿ ಎಲ್ಲಾ ಯೋಚನೆಗಳನ್ನು ಕ್ರಿಸ್ತನಿಗೆ ವಿಧೇಯವಾಗುವಂತೆ ಸೆರೆಹಿಡಿದು

ಫಿಲಿಪ್ಪಿಯವರಿಗೆ 2:12

ಹೀಗಿರುವಲ್ಲಿ ನನ್ನ ಪ್ರಿಯರೇ, ನೀವು ಯಾವಾ ಗಲೂ ವಿಧೇಯರಾದಂತೆ ಈಗಲೂ ವಿಧೇಯರಾಗಿ ನಾನು ನಿಮ್ಮಲ್ಲಿರುವಾಗ ಮಾತ್ರವಲ್ಲದೆ ನಾನಿಲ್ಲದಿರು ವಾಗಲೂ ಬಹು ಹೆಚ್ಚಾಗಿ ಭಯದಿಂದ ನಡುಗುತ್ತಾ ನಿಮ್ಮ ಸ್ವಂತ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ.

ಫಿಲಿಪ್ಪಿಯವರಿಗೆ 2:22

ಆದರೆ ಅವನನ್ನು ನೀವು ಪರೀಕ್ಷಿಸಿ ತಿಳಿದುಕೊಂಡಿದ್ದೀರಿ. ಮಗನು ತಂದೆಗೆ ಹೇಗೋ ಹಾಗೆಯೇ ಅವನು ಸುವಾರ್ತೆಯಲ್ಲಿ ನನ್ನೊಂದಿಗೆ ಸೇವೆ ಮಾಡಿದ್ದಾನೆ.

2 ತೆಸಲೋನಿಕದವರಿಗೆ 3:14

ಈ ಪತ್ರಿಕೆಯ ಮೂಲಕ ವಾಗಿ ಹೇಳಿರುವ ನಮ್ಮ ಮಾತಿಗೆ ಯಾವನಾದರೂ ವಿಧೇಯನಾಗದಿದ್ದರೆ ಅವನನ್ನು ಗುರುತು ಇಟ್ಟು ಕೊಂಡು ಅವನಿಗೆ ನಾಚಿಕೆಯಾಗುವಂತೆ ಅವನ ಸಹವಾಸದಲ್ಲಿ ಸೇರಬೇಡಿರಿ.

ಫಿಲೇಮೋನ 1:21

ನನ್ನ ಮಾತನ್ನು ಕೇಳುವಿ ಎಂಬ ಭರವಸ ವುಳ್ಳವನಾಗಿ ನಿನಗೆ ಬರೆದಿದ್ದೇನೆ; ನಾನು ಹೇಳಿದ್ದ ಕ್ಕಿಂತಲೂ ಹೆಚ್ಚಾಗಿ ಮಾಡುವಿಯೆಂದು ನನಗೆ ಗೊತ್ತುಂಟು.

Interlinear

Choose Theme