Home Bibles 2 ಕೊರಿಂಥದವರಿಗೆ 11:22 · ಕನ್ನಡ ಬೈಬಲ್
2 ಕೊರಿಂಥದವರಿಗೆ 11:22 · ಕನ್ನಡ ಬೈಬಲ್

ಅವರು ಇಬ್ರಿಯರೋ? ನಾನೂ ಇಬ್ರಿಯನು; ಅವರು ಇಸ್ರಾಯೇಲ್ಯರೊ? ನಾನೂ ಇಸ್ರಾಯೇ ಲ್ಯನು; ಅವರು ಅಬ್ರಹಾಮನ ವಂಶದವರೋ? ನಾನೂ ಅದೇ ವಂಶದವನು;

Cross references

ಆದಿಕಾಂಡ 17:8

ನಿನಗೂ ನಿನ್ನ ತರುವಾಯ ನಿನ್ನ ಸಂತಾನಕ್ಕೂ ನೀನು ಪ್ರವಾಸಿಯಾಗಿರುವ ಕಾನಾನ್‌ ದೇಶವನ್ನೆಲ್ಲಾ ಶಾಶ್ವತವಾದ ಸ್ವಾಸ್ಥ್ಯವಾಗಿ ಕೊಡುತ್ತೇನೆ. ನಾನು ಅವರ ದೇವರಾಗಿರುವೆನು ಅಂದನು.

ನಿರ್ಗಮಕಾಂಡ 3:18

ಅವರು ನಿನ್ನ ಮಾತನ್ನು ಕೇಳುವರು. ಆಗ ನೀನು ಇಸ್ರಾಯೇಲ್‌ ಹಿರಿಯರ ಸಹಿತವಾಗಿ ಐಗುಪ್ತದ ಅರಸನ ಬಳಿಗೆ ಹೋಗಿ ಅವನಿಗೆ--ಇಬ್ರಿಯರ ದೇವರಾಗಿರುವ ಕರ್ತನು ನಮಗೆ ಪ್ರತ್ಯಕ್ಷ ನಾಗಿದ್ದಾನೆ. ಆದದರಿಂದ ನಾವು ಅರಣ್ಯದಲ್ಲಿ ಮೂರು ದಿವಸ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿಯನ್ನರ್ಪಿಸುವ ಹಾಗೆ ನಮ್ಮನ್ನು ಬಿಡು ಎಂದು ಕೇಳಿಕೊಳ್ಳುತ್ತೇವೆ ಎಂದು ಹೇಳಬೇಕು.

ನಿರ್ಗಮಕಾಂಡ 5:3

ಆಗ ಅವರು ಫರೋಹ ನಿಗೆ--ಇಬ್ರಿಯರ ದೇವರು ನಮ್ಮನ್ನು ಎದುರುಗೊಂಡಿ ದ್ದಾನೆ; ಆದದರಿಂದ ನಾವು ಅರಣ್ಯದಲ್ಲಿ ಮೂರು ದಿನ ಪ್ರಯಾಣಮಾಡಿ ನಮ್ಮ ದೇವರಾದ ಕರ್ತನಿಗೆ ಬಲಿ ಅರ್ಪಿಸುವದಕ್ಕಾಗಿ ನಾವು ಹೋಗಬೇಕು; ಇಲ್ಲ ವಾದರೆ ಆತನು ವ್ಯಾಧಿಯಿಂದಲಾದರೂ ಕತ್ತಿಯಿಂದ ಲಾದರೂ ನಮ್ಮನ್ನು ಸಂಹಾರ ಮಾಡಾನು ಎಂದು ಅಂದರು.

ನಿರ್ಗಮಕಾಂಡ 7:16

ಅವನಿಗೆ ನೀನು--ಇಬ್ರಿಯರ ದೇವರಾದ ಕರ್ತನು ನನ್ನನ್ನು ನಿನ್ನ ಬಳಿಗೆ ಕಳುಹಿಸಿ ಅರಣ್ಯದಲ್ಲಿ ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು ಎಂದು ಹೇಳಿದ್ದಾನೆ. ಆದರೆ ಇಗೋ, ಇಂದಿನ ವರೆಗೂ ನೀನು ಕೇಳಲಿಲ್ಲ.

ನಿರ್ಗಮಕಾಂಡ 9:1

ಕರ್ತನು ಮೋಶೆಗೆ--ಫರೋಹನ ಬಳಿಗೆ ಹೋಗಿ ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿ ಸುವಂತೆ ನನ್ನ ಜನರನ್ನು ಕಳುಹಿಸು.

ನಿರ್ಗಮಕಾಂಡ 9:13

ಕರ್ತನು ಮೋಶೆಗೆ--ಬೆಳಿಗ್ಗೆ ಎದ್ದು ಫರೋಹನ ಮುಂದೆ ನಿಂತುಕೊಂಡು ಅವನಿಗೆ--ಇಬ್ರಿಯರ ದೇವ ರಾದ ಕರ್ತನು ಹೀಗೆ ಹೇಳುತ್ತಾನೆ--ನನ್ನನ್ನು ಸೇವಿಸುವ ಹಾಗೆ ನನ್ನ ಜನರನ್ನು ಕಳುಹಿಸು.

ನಿರ್ಗಮಕಾಂಡ 10:3

ಮೋಶೆ ಆರೋನರು ಫರೋಹನ ಬಳಿಗೆ ಬಂದು ಅವನಿಗೆ--ಇಬ್ರಿಯರ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನ ಸನ್ನಿಧಿಯಲ್ಲಿ ತಗ್ಗಿಸಿಕೊಳ್ಳದೆ ಇರುವದು ಎಲ್ಲಿಯವರೆಗೇ? ನನ್ನನ್ನು ಸೇವಿಸುವಂತೆ ನನ್ನ ಜನರನ್ನು ಹೋಗಗೊಡಿಸು.

2 ದಿನವೃತ್ತಾಂತ 20:7

ನೀನು ನಿನ್ನ ಜನವಾದ ಇಸ್ರಾಯೇಲಿನ ಎದುರಿನಿಂದ ಈ ದೇಶದ ನಿವಾಸಿಗ ಳನ್ನು ಓಡಿಸಿಬಿಟ್ಟು ಅದನ್ನು ನಿನ್ನ ಸ್ನೇಹಿತನಾದ ಅಬ್ರ ಹಾಮನ ಸಂತತಿಗೆ ಎಂದೆಂದಿಗೂ ಕೊಟ್ಟ ನೀನು ನಮ್ಮ ದೇವರಲ್ಲವೋ?

ಮತ್ತಾಯ 3:9

ಮತ್ತು -- ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ ಎಂದು ನಿಮ್ಮ ನಿಮ್ಮೊಳಗೆ ಅಂದು ಕೊಳ್ಳಬೇಡಿರಿ; ಯಾಕಂದರೆ ದೇವರು ಅಬ್ರಹಾಮನಿಗೆ ಈ ಕಲ್ಲುಗಳಿಂದ ಮಕ್ಕಳನ್ನು ಎಬ್ಬಿಸ ಶಕ್ತನೆಂದು ನಾನು ನಿಮಗೆ ಹೇಳುತ್ತೇನೆ.

ಯೋಹಾನ 8:33

ಅದಕ್ಕೆ ಅವರು ಪ್ರತ್ಯುತ್ತರವಾಗಿ ಆತನಿಗೆ--ನಾವು ಅಬ್ರಹಾಮನ ಸಂತತಿಯವರಾಗಿರಲಾಗಿ ಯಾವ ಮನುಷ್ಯನಿಗೂ ಎಂದಿಗೂ ಗುಲಾಮರಾಗಿರಲಿಲ್ಲ; ಹಾಗಾದರೆ--ನಿಮಗೆ ಬಿಡುಗಡೆಯಾಗುವದೆಂದು ನೀನು ಹೇಗೆ ಹೇಳುತ್ತೀ ಅಂದರು.

ಅಪೋಸ್ತಲರ ಕೃತ್ಯಗಳು 22:3

ನಿಜವಾಗಿಯೂ ನಾನು ಕಿಲಿಕ್ಯದ ತಾರ್ಸ ಪಟ್ಟಣದಲ್ಲಿ ಹುಟ್ಟಿದ ಒಬ್ಬ ಯೆಹೂದ್ಯನು; ಆದರೂ ಈ ಪಟ್ಟಣದಲ್ಲಿ ಗಮಲಿ ಯೇಲನ ಪಾದದ ಬಳಿಯಲ್ಲಿ ಬೆಳೆದವನಾಗಿದ್ದು ಪಿತೃಗಳ ನ್ಯಾಯಪ್ರಮಾಣದ ಸಂಪೂರ್ಣಕ್ರಮಕ್ಕನು ಸಾರವಾಗಿ ಶಿಕ್ಷಣ ಹೊಂದಿ ಈ ದಿನ ನೀವೆಲ್ಲರೂ ಹೇಗೋ ಹಾಗೇ ದೇವರ ಕಡೆಗೆ ಆಸಕ್ತಿಯುಳ್ಳ ವನಾಗಿದ

ರೋಮಾಪುರದವರಿಗೆ 4:13

ಅವನು ಲೋಕಕ್ಕೆ ಬಾಧ್ಯನಾಗುವನೆಂಬ ವಾಗ್ದಾ ನವು ಅಬ್ರಹಾಮನಿಗಾಗಲಿ ಅವನ ಸಂತತಿಯವರಿ ಗಾಗಲಿ ನ್ಯಾಯಪ್ರಮಾಣದಿಂದ ಆದದ್ದಲ್ಲ, ನಂಬಿಕೆ ಯಿಂದಾದ ನೀತಿಯಿಂದಲೇ ಆದದ್ದು.

ರೋಮಾಪುರದವರಿಗೆ 9:4

ಇವರು ಇಸ್ರಾಯೇಲ್ಯರು; ದತ್ತುಪುತ್ರ ಸ್ವಿಕಾರವೂ ಮಹಿಮೆಯೂ ಒಡಂಬಡಿ ಕೆಗಳೂ ನ್ಯಾಯಪ್ರಮಾಣ ಕೊಡೋಣವೂ ದೇವರ ಸೇವೆಯೂ ವಾಗ್ದಾನಗಳೂ ಇವರಿಗೆ ಸಂಬಂಧ ಪಟ್ಟವುಗಳು.

ರೋಮಾಪುರದವರಿಗೆ 11:1

ಹಾಗಾದರೆ--ದೇವರು ತನ್ನ ಪ್ರಜೆಯನ್ನು ತಳ್ಳಿಬಿಟ್ಟದ್ದುಂಟೇ ಎಂದು ನಾನು ಕೇಳುತ್ತೇನೆ. ಹಾಗೆ ಎಂದಿಗೂ ಹೇಳಬಾರದು. ಯಾಕಂದರೆ ನಾನು ಸಹ ಇಸ್ರಾಯೇಲ್ಯನು. ಅಬ್ರ ಹಾಮನ ಸಂತತಿಯವನು, ಬೆನ್ಯಾವಿಾನನ ಗೋತ್ರ ದವನು ಆಗಿದ್ದೇನಲ್ಲಾ.

ಫಿಲಿಪ್ಪಿಯವರಿಗೆ 3:5

ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು; ನಾನು ಇಸ್ರಾಯೇಲ್‌ ವಂಶದವನು, ಬೆನ್ಯಾವಿಾನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು; ನ್ಯಾಯಪ್ರಮಾಣವನ್ನು ನೋಡಿದರೆ ನಾನು ಫರಿಸಾ ಯನು;

Interlinear

Choose Theme