ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
Cross references
ಆತನ ಪರಿಶುದ್ಧ ನಾಮದಲ್ಲಿ ಹೊಗಳಿಕೊಳ್ಳಿರಿ; ಕರ್ತನನ್ನು ಹುಡುಕುವವರ ಹೃದಯವು ಸಂತೋಷಿಸಲಿ.
ಕರ್ತನೇ, ನೀನು ಆದುಕೊಂಡವರ ಸುಖವನ್ನು ನಾನು ನೋಡಿ ನಿನ್ನ ಜನಾಂಗದ ಸಂತೋಷ ದೊಂದಿಗೆ ಸಂತೋಷಿಸಿ ನಿನ್ನ ಬಾಧ್ಯತೆಯ ಸಂಗಡ ಹೊಗಳಿಕೊಳ್ಳುವೆನು.
ನೀನು ಅವುಗಳನ್ನು ತೂರಲು ಗಾಳಿಯು ಅವುಗಳನ್ನು ಬಡಿದುಕೊಂಡು ಹೋಗುವದು, ಬಿರುಗಾಳಿಯು ಚೆಲ್ಲಾಪಿಲ್ಲಿ ಮಾಡುವದು; ನೀನಂತೂ ಕರ್ತನಲ್ಲಿ ಸಂತೋಷಿಸಿ, ಇಸ್ರಾಯೇಲಿನ ಪರಿಶುದ್ಧನಲ್ಲಿ ಮಹಿಮೆಹೊಂದುವಿ.
ಇಸ್ರಾಯೇಲಿನ ಸಂತಾನದವರೆಲ್ಲರೂ ಕರ್ತನಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
ಆಗ ದೇಶದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳು ವವನು ಸತ್ಯ ದೇವರಲ್ಲಿ ಆಶೀರ್ವದಿಸಿಕೊಳ್ಳುವನು. ದೇಶದಲ್ಲಿ ಆಣೆ ಇಟ್ಟುಕೊಳ್ಳುವವನು; ಸತ್ಯದೇವರ ಮೇಲೆ ಆಣೆ ಇಟ್ಟುಕೊಳ್ಳುವನು; ಮುಂಚಿನ ಕಷ್ಟಗಳು ಮರೆತುಹೋಗಿವೆ ಮತ್ತು ಅವು ನನ್ನ ಕಣ್ಣುಗಳಿಗೆ ಮರೆಯಾಗಿವೆ.
ನೀನು ಸತ್ಯದಿಂದಲೂ ನ್ಯಾಯದಿಂದಲೂ ನೀತಿ ಯಿಂದಲೂ ಕರ್ತನ ಜೀವದಾಣೆ ಎಂದು ಪ್ರಮಾಣಮಾಡುವಿ; ಆಗ ಜನಾಂಗಗಳು ಆತನಲ್ಲಿ ಆಶೀರ್ವದಿಸಿ ಕೊಳ್ಳುವವು; ಮತ್ತು ಆತನಲ್ಲಿ ಹೊಗಳಿಕೊಳ್ಳುವವು.
ಕರ್ತನೇ, ಮನುಷ್ಯನ ಮಾರ್ಗವು ತನ್ನಲ್ಲಿಲ್ಲವೆಂದೂ ತನ್ನ ಹೆಜ್ಜೆ ನೆಟ್ಟಗೆ ಮಾಡುವದು ನಡೆಯುವ ಮನುಷ್ಯನದಲ್ಲವೆಂದೂ ಬಲ್ಲೆನು.
ಇಷ್ಟು ಮಾತ್ರವಲ್ಲದೆ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ಈಗ ಸಮಾಧಾನ ಹೊಂದಿದವರಾಗಿ ಆತನ ಮುಖಾಂತರ ನಾವು ಸಹ ದೇವರಲ್ಲಿ ಹರ್ಷಗೊಳ್ಳುತ್ತೇವೆ.
ಹೀಗಿರಲು ಆತನ ಮುಂದೆ ಹೊಗಳಿಕೊಳ್ಳುವದಕ್ಕೆ ಯಾರಿಗೂ ಆಸ್ಪದವಿಲ್ಲ.
ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ ಎಂದು ಬರೆಯಲ್ಪಟ್ಟಂತೆ ಆಯಿತು.
ಸುನ್ನತಿ ಮಾಡಿಸಿಕೊಳ್ಳುವ ತಾವಾದರೊ ನ್ಯಾಯಪ್ರಮಾಣ ವನ್ನು ಕೈಕೊಂಡು ನಡೆಯುವದಿಲ್ಲ. ಆದರೆ ಅವರು ನಿಮ್ಮ ಶರೀರದ ವಿಷಯದಲ್ಲಿ ಹೆಚ್ಚಳ ಪಡುವದಕ್ಕಾಗಿ ನಿಮಗೆ ಸುನ್ನತಿಯಾಗಬೇಕೆಂದು ಅಪೇಕ್ಷಿಸುತ್ತಾರೆ.
ಆತ್ಮದಲ್ಲಿ ದೇವರನ್ನು ಆರಾಧಿಸುವವರೂ ಕ್ರಿಸ್ತ ಯೇಸುವಿನಲ್ಲಿ ಸಂತೋಷಿಸುವವರೂ ಶರೀರದಲ್ಲಿ ಭರವಸೆಯಿಲ್ಲದವರೂ ಆದ ನಾವೇ ಸುನ್ನತಿಯವರಾಗಿ ದ್ದೇವೆ.
ಹೀನಸ್ಥಿತಿಯಲ್ಲಿರುವ ಸಹೋದರನು ತಾನು ಉನ್ನತ ಸ್ಥಿತಿಗೆ ಬಂದೆನೆಂದು ಉಲ್ಲಾಸಪಡಲಿ;