ಸೊಲೊಮೋನನು ಫರೋಹನ ಕುಮಾರ್ತೆ ಯನ್ನು ದಾವೀದನ ಪಟ್ಟಣದಿಂದ ತಾನು ಅವಳಿ ಗೋಸ್ಕರ ಕಟ್ಟಿಸಿದ ಮನೆಗೆ ಬರಮಾಡಿದನು. ಕರ್ತನ ಒಡಂಬಡಿಕೆಯ ಮಂಜೂಷವು ಬಂದ ಸ್ಥಳಗಳು ಪರಿಶುದ್ಧವಾಗಿರುವದರಿಂದ ನನ್ನ ಹೆಂಡತಿಯು ಇಸ್ರಾ ಯೇಲಿನ ಅರಸನಾದ ದಾವೀದನ ಮನೆಯಲ್ಲಿ ವಾಸ ವಾಗಿರಕೂಡದೆಂದು ಹೇಳಿದನು.
Cross references
ಆಗ ಆತನು--ಇಲ್ಲಿ ಸವಿಾಪಕ್ಕೆ ಬರಬೇಡ, ನಿನ್ನ ಪಾದಗಳಿಂದ ಕೆರ ಗಳನ್ನು ತೆಗೆದುಹಾಕು; ನೀನು ನಿಂತಿರುವ ಸ್ಥಳವು ಪರಿಶುದ್ಧ ಭೂಮಿಯಾಗಿದೆ ಅಂದನು.
ಅಲ್ಲಿ ನಾನು ಇಸ್ರಾಯೇಲ್ ಮಕ್ಕಳನ್ನು ಸಂಧಿಸುವೆನು. ಗುಡಾರವು ನನ್ನ ಮಹಿಮೆಯಿಂದ ಪವಿತ್ರವಾಗುವದು.
ಸೊಲೊಮೋನನು ಐಗುಪ್ತದ ಅರಸ ನಾದ ಫರೋಹನ ಸಂಗಡ ಬಂಧುತ್ವ ಮಾಡಿ ಫರೋಹನ ಮಗಳನ್ನು ತಕ್ಕೊಂಡನು. ಅವನು ತನ್ನ ಮನೆಯನ್ನೂ ಕರ್ತನ ಆಲಯವನ್ನೂ ಯೆರೂಸ ಲೇಮಿಗೆ ಸುತ್ತಲೂ ಗೋಡೆಯನ್ನೂ ಕಟ್ಟಿ ತೀರಿಸುವ ಮಟ್ಟಿಗೂ ಅವಳನ್ನು ದಾವೀದನ ಪಟ್ಟಣದಲ್ಲಿ ತಂದು ಇಟ್ಟನು.
ತಾನು ವಾಸವಾಗಿರುವ ತನ್ನ ಮನೆಯಲ್ಲಿ ದ್ವಾರಾಂಗ ಳದ ಒಳಭಾಗದಲ್ಲಿ ಈ ಕೆಲಸದ ಹಾಗೆ ಮಾಡಲ್ಪಟ್ಟ ಬೇರೆ ಒಂದು ಅಂಗಳ ಇತ್ತು. ಇದಲ್ಲದೆ ಸೊಲೊ ಮೋನನು ತಾನು ತಕ್ಕೊಂಡ ಫರೋಹನ ಮಗಳಿಗೂ ಈ ದ್ವಾರಾಂಗಳದ ಹಾಗೆ ಒಂದು ಮನೆಯನ್ನು ಮಾಡಿ ದನು.
ಆದರೆ ಫರೋಹನ ಮಗಳು ದಾವೀದನ ಪಟ್ಟಣ ದಿಂದ ತನಗೋಸ್ಕರ ಸೊಲೊಮೋನನು ಕಟ್ಟಿಸಿದ ಪಟ್ಟಣಕ್ಕೆ ಬಂದಳು. ಆಗ ಅವನು ಮಿಲ್ಲೋವನ್ನು ಕಟ್ಟಿಸಿದನು.
ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು.
ನಾವು ಪರಿಶುದ್ಧ ಪರ್ವತದ ಮೇಲೆ ಆತನ ಸಂಗಡ ಇದ್ದಾಗ ಆಕಾಶದಿಂದ ಬಂದ ಆ ಧ್ವನಿಯನ್ನು ನಾವೇ ಕೇಳಿದೆವು.