Home Bibles 2 ದಿನವೃತ್ತಾಂತ 6:39 · ಕನ್ನಡ ಬೈಬಲ್
2 ದಿನವೃತ್ತಾಂತ 6:39 · ಕನ್ನಡ ಬೈಬಲ್

ನೀನು ಆಕಾಶದಲ್ಲಿ ವಾಸಮಾಡುವ ಸ್ಥಳದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸಿ ನಿನ್ನ ಜನರು ನಿನಗೆ ವಿರೋಧವಾಗಿ ಮಾಡಿದ ಪಾಪಗಳನ್ನು ಮನ್ನಿಸು.

Cross references

2 ದಿನವೃತ್ತಾಂತ 6:35

ನೀನು ಆಕಾಶದಿಂದ ಅವರ ಪ್ರಾರ್ಥನೆಯನ್ನೂ ವಿಜ್ಞಾಪನೆಯನ್ನೂ ಕೇಳಿ ಅವರ ನ್ಯಾಯವನ್ನು ತೀರಿಸು.

ಕೀರ್ತನೆಗಳು 25:18

ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು.

ಕೀರ್ತನೆಗಳು 65:4

ನೀನು ಆದುಕೊಂಡು ನಿನ್ನ ಬಳಿಗೆ ಬರ ಮಾಡಿಕೊಳ್ಳುವವನು ಧನ್ಯನು; ನಿನ್ನ ಅಂಗಳಗಳಲ್ಲಿ ಅವನು ವಾಸವಾಗಿರುವನು. ನಿನ್ನ ಪರಿಶುದ್ಧ ಮಂದಿರ ವಾದ ನಿನ್ನ ಆಲಯದ ಒಳ್ಳೇದರಿಂದ ನಾವು ತೃಪ್ತರಾಗುವೆವು.

ಕೀರ್ತನೆಗಳು 85:3

ನಿನ್ನ ಕೋಪ ವನ್ನೆಲ್ಲಾ ನೀನು ತೆಗೆದುಬಿಟ್ಟಿದ್ದೀ; ನೀನು ಕೋಪದ ಉರಿಯಿಂದ ತಿರುಗಿಕೊಂಡಿದ್ದೀ.

ಯೆರೆಮಿಯ 50:34

ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.

ಮೀಕ 7:18

ಅಕ್ರಮವನ್ನು ಮನ್ನಿಸುವಂಥ, ತನ್ನ ಬಾಧ್ಯತೆಯ ಶೇಷದ ದ್ರೋಹವನ್ನು ದಾಟಿಹೋಗುವಂಥ, ನಿನ್ನ ಹಾಗೆ ದೇವರು ಯಾರು? ಆತನು ತನ್ನ ಕೋಪವನ್ನು ಎಂದೆಂದಿಗೂ ಇಟ್ಟುಕೊಳ್ಳುವದಿಲ್ಲ; ಯಾಕಂದರೆ ಆತನು ಕರುಣೆಯಲ್ಲಿ ಸಂತೋಷಪಡುತ್ತಾನೆ.

ಜೆಕರ್ಯ 1:15

ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು.

Interlinear

Choose Theme