Home Bibles ☰ Books 2 ದಿನವೃತ್ತಾಂತ 4:9 · ಕನ್ನಡ ಬೈಬಲ್
2 ದಿನವೃತ್ತಾಂತ 4:9 · ಕನ್ನಡ ಬೈಬಲ್

ಇದ ಲ್ಲದೆ ಅವನು ಯಾಜಕರ ಅಂಗಳವನ್ನೂ ದೊಡ್ಡ ಅಂಗಳವನ್ನೂ ಅಂಗಳಗಳಿಗೋಸ್ಕರ ಬಾಗಲುಗಳನ್ನೂ ಮಾಡಿಸಿ

Cross references

ನಿರ್ಗಮಕಾಂಡ 27:9

ಗುಡಾರದ ಅಂಗಳವನ್ನು ಮಾಡಬೇಕು. ದಕ್ಷಿಣ ದಿಕ್ಕಿನಲ್ಲಿರುವ ದಕ್ಷಿಣ ಭಾಗದಲ್ಲಿ ಅಂಗಳಕ್ಕೋಸ್ಕರ ನಯವಾದ ಹೊಸೆದ ನಾರಿನ ಪರದೆಗಳನ್ನು ಮಾಡ ಬೇಕು. ಒಂದು ಕಡೆಯಲ್ಲಿ ಅದರ ಉದ್ದವು ನೂರು ಮೊಳವಿರಬೇಕು.

1 ಅರಸುಗಳು 6:36

ಅವನು ಒಳಗಿನ ಅಂಗಳವನ್ನು ಕಟ್ಟಿದ ಕಲ್ಲುಗಳಿಂದ ಮೂರು ಸಾಲುಗಳಾಗಿಯೂ ದೇವದಾರಿನ ಸ್ತಂಭಗಳಿಂದ ಒಂದು ಸಾಲಾಗಿಯೂ ಕಟ್ಟಿಸಿದನು.

1 ಅರಸುಗಳು 7:12

ದೊಡ್ಡ ಅಂಗಳವು ಸುತ್ತಲಾಗಿ ಮೂರು ತರ ಕೆತ್ತಿದ ಕಲ್ಲುಗಳೂ ಒಂದು ತರ ದೇವ ದಾರು ಮರದ ತೊಲೆಗಳೂ ಆಗಿದ್ದವು; ಕರ್ತನ ಮನೆಯ ಒಳ ಅಂಗಳಕ್ಕೂ ಮನೆಯ ದ್ವಾರಾಂಗಳಕ್ಕೂ ಹಾಗೆಯೇ ಇತ್ತು.

2 ಅರಸುಗಳು 21:5

ಕರ್ತನ ಮನೆಯ ಎರಡು ಅಂಗಳಗಳಲ್ಲಿ ಆಕಾಶದ ಎಲ್ಲಾ ಸೈನ್ಯಕ್ಕೋಸ್ಕರ ಬಲಿಪೀಠಗಳನ್ನು ಕಟ್ಟಿಸಿದನು.

ಯೆಹೆಜ್ಕೇಲ 42:15

ಹೀಗೆ ಅವನು ಒಳಗಿನ ಆಲಯದ ಅಳತೆ ಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು.

Interlinear

Choose Theme