Home Bibles 2 ದಿನವೃತ್ತಾಂತ 36:21 · ಕನ್ನಡ ಬೈಬಲ್
2 ದಿನವೃತ್ತಾಂತ 36:21 · ಕನ್ನಡ ಬೈಬಲ್

ದೇಶವು ಎಪ್ಪತ್ತು ವರುಷ ತೀರುವ ಪರ್ಯಂತರ ಹಾಳಾಗಿದ್ದು ಸಬ್ಬತ್ತನ್ನು ಅನುಭವಿಸುತ್ತಾ ಇತ್ತು.

Cross references

ಲೇವ್ಯಕಾಂಡ 25:4

ಆದರೆ ಏಳನೆಯ ವರುಷವು ದೇಶಕ್ಕೆ ವಿಶ್ರಾಂತಿಗಾಗಿ ಸಬ್ಬತ್ತಾಗಿರುವದು, ಕರ್ತನಿಗಾಗಿ ಒಂದು ಸಬ್ಬತ್ತಾಗಿರುವದು. ನೀವು ನಿಮ್ಮ ಹೊಲವನ್ನು ಬಿತ್ತಬಾರದು ಇಲ್ಲವೆ ದ್ರಾಕ್ಷೇತೋಟ ವನ್ನು ಕತ್ತರಿಸಬಾರದು.

ಲೇವ್ಯಕಾಂಡ 26:34

ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವ ವರೆಗೂ ಭೂಮಿ ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ತನ್ನ ಸಬ್ಬತ್ತುಗಳನ್ನು ಅನುಭವಿಸುವದು; ಆಗ ಭೂಮಿ ವಿಶ್ರಮಿಸಿಕೊಂಡು ತನ್ನ ಸಬ್ಬತ್ತುಗಳನ್ನು ಅನುಭವಿ ಸುವದು.

ಲೇವ್ಯಕಾಂಡ 26:43

ಅವರು ದೇಶದೊಳಗಿಂದ ಹೊರಡಿಸಲ್ಪಟ್ಟು ಅವರಿಲ್ಲದೆ ಹಾಳಾದ ವೇಳೆಯಲ್ಲಿ ಅದು ತನ್ನ ಸಬ್ಬತ್ತು ಗಳನ್ನು ಅನುಭವಿಸುವದು; ಅವರು ತಮ್ಮ ಅಕ್ರಮ ದಿಂದಾದ ಶಿಕ್ಷೆಗೆ ಒಪ್ಪಿಕೊಳ್ಳುವರು; ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ಅಸಹ್ಯಿಸಿದ್ದರಿಂದಲೇ.

ಯೆರೆಮಿಯ 25:9

ಈ ಮನೆಯು ಶಿಲೋವಿನ ಹಾಗೆ ಆಗುವದೆಂದೂ ಈ ಪಟ್ಟಣವು ನಿವಾಸಿಗಳಿಲ್ಲದೆ ಹಾಳಾಗುವದೆಂದೂ ಕರ್ತನ ಹೆಸರಿನಲ್ಲಿ ಯಾಕೆ ನೀನು ಪ್ರವಾದಿಸಿದ್ದೀ ಅಂದರು. ಆಗ ಜನರೆಲ್ಲರೂ ಕರ್ತನ ಆಲಯದಲ್ಲಿ ಯೆರೆವಿಾಯನಿಗೆ ವಿರೋಧವಾಗಿ ಕೂಡಿಕೊಂಡರು.

ಯೆರೆಮಿಯ 25:11

ಆಗ ಯಾಜಕರೂ ಪ್ರವಾದಿ ಗಳೂ ಪ್ರಧಾನರಿಗೂ ಜನರೆಲ್ಲರಿಗೂ ಹೇಳಿದ್ದೇನಂದರೆ --ಈ ಮನುಷ್ಯನು ಮರಣಕ್ಕೆ ತಕ್ಕವನು. ಯಾಕಂದರೆ ನಿಮ್ಮ ಕಿವಿಗಳಿಂದಲೇ ನೀವು ಕೇಳಿದ ಪ್ರಕಾರ ಅವನು ಈ ಪಟ್ಟಣಕ್ಕೆ ವಿರೋಧವಾಗಿ ಪ್ರವಾದಿಸಿದ್ದಾನೆ ಎಂಬದೇ.

ಯೆರೆಮಿಯ 26:6

ಈಗ ನಾನು ಈ ದೇಶಗಳನ್ನೆಲ್ಲಾ ಬಾಬೆಲಿನ ಅರಸನಾದ ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈಯಲ್ಲಿ ಕೊಟ್ಟಿದ್ದೇನೆ; ಭೂಮಿಯ ಮೃಗಗಳನ್ನು ಸಹಾ ಅವ ನಿಗೆ ಸೇವೆಮಾಡುವ ಹಾಗೆ ಅವನಿಗೆ ಕೊಟ್ಟಿದ್ದೇನೆ.

ಯೆರೆಮಿಯ 27:12

ಆಗ ಪ್ರವಾದಿಯಾದ ಹನನ್ಯನು ಆ ನೊಗವನ್ನು ಪ್ರವಾದಿಯಾದ ಯೆರೆವಿಾಯನ ಕುತ್ತಿಗೆಯ ಮೇಲಿನಿಂದ ಮುರಿದು ಹಾಕಿದ ಮೇಲೆ ಕರ್ತನ ವಾಕ್ಯವು ಯೆರೆವಿಾಯನಿಗೆ ಉಂಟಾಗಿ ಹೇಳಿದ್ದೇನಂದರೆ--

ಯೆರೆಮಿಯ 29:10

ಆದದರಿಂದ ನನ್ನ ಸೇವಕನಾದ ಯಾಕೋ ಬನೇ, ಭಯಪಡಬೇಡ ಎಂದು ಕರ್ತನು ಅನ್ನುತ್ತಾನೆ; ಇಸ್ರಾಯೇಲೇ ಹೆದರಬೇಡ; ಇಗೋ, ನಾನು ನಿನ್ನನ್ನು ದೂರದಿಂದಲೂ ನಿನ್ನ ಸಂತಾನವನ್ನು ಸೆರೆ ಒಯ್ದ ದೇಶದಿಂದಲೂ ರಕ್ಷಿಸುತ್ತೇನೆ; ಯಾಕೋಬನು ತಿರುಗಿ ಬಂದು ವಿಶ್ರಾಂತಿಯಲ್ಲಿರುವನು; ಹೆದರಿಸುವವನಿಲ್ಲದೆ ಸೌಖ್ಯವಾಗಿರುವನು.

ದಾನಿಯೇಲ 9:2

ಅವನ ಆಳಿಕೆಯ ಮೊದಲನೆಯ ವರುಷದಲ್ಲಿ ದಾನಿಯೇಲನಾದ ನಾನು ಕರ್ತನು ತನ್ನ ವಾಕ್ಯವನ್ನು ಪ್ರವಾದಿಯಾದ ಯೆರೆವಿಾಯನಿಗೆ ದಯಪಾಲಿಸಿದ ಹಾಗೆ ತಾನು ಯೆರೂಸಲೇಮಿಗೆ ಹಾಳು ಬೀಳುವಿಕೆಗಳಲ್ಲಿ ಎಪ್ಪತ್ತು ವರುಷಗಳನ್ನು ಸಂಪೂರ್ಣಮಾಡುವ ಹಾಗೆ ವರುಷಗಳ ಲೆಕ್ಕವನ್ನು ಪುಸ್ತಕದಿಂದ ತಿಳಿದುಕೊಂಡೆನು.

ಜೆಕರ್ಯ 1:4

ನೀವು ನಿಮ್ಮ ಪಿತೃಗಳ ಹಾಗಿರಬೇಡಿರಿ; ಅವರಿಗೆ ಪೂರ್ವದ ಪ್ರವಾದಿಗಳು ಕೂಗಿ--ನಿಮ್ಮ ಕೆಟ್ಟ ಮಾರ್ಗಗಳನ್ನೂ ನಿಮ್ಮ ಕೆಟ್ಟ ಕ್ರಿಯೆಗಳನ್ನೂ ಬಿಟ್ಟು ತಿರುಗಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆಂದು ಹೇಳಿದರು; ಆದರೆ ಅವರು ಕೇಳಲಿಲ್ಲ; ನನ್ನಲ್ಲಿ ಲಕ್ಷ್ಯ ವಿಡಲಿಲ್ಲವೆಂದು ಕರ್ತನು ಅನ್ನುತ್ತಾನೆ.

ಜೆಕರ್ಯ 1:12

ಆಗ ಕರ್ತನ ದೂತನು ಉತ್ತರಕೊಟ್ಟು ಹೀಗಂ ದನು--ಓ ಸೈನ್ಯಗಳ ಕರ್ತನೇ, ನೀನು ಯೆರೂಸಲೇ ಮನ್ನೂ ಯೆಹೂದದ ಪಟ್ಟಣಗಳನ್ನೂ ಎಷ್ಟರ ವರೆಗೆ ಕನಿಕರಿಸದೆ ಇರುವಿ? ಅವುಗಳ ಮೇಲೆ ಈ ಎಪ್ಪತ್ತು ವರುಷಗಳು ಸಿಟ್ಟು ಮಾಡಿದ್ದೀಯಲ್ಲವೋ ಅಂದನು.

ಜೆಕರ್ಯ 7:14

ಇದಲ್ಲದೆ ಅವರು ಅರಿಯದ ಎಲ್ಲಾ ಜನಾಂಗಗಳೊಳಗೆ ಅವರನ್ನು ಸುಂಟರ ಗಾಳಿಯಿಂದ ಚದರಿಸಿಬಿಟ್ಟೆನು. ಹೀಗೆ ಅವರ ಹಿಂದೆ ದೇಶವು ನಾಶವಾಯಿತು; ಹಾದುಹೋಗುವವನೂ ತಿರುಗಿಕೊಳ್ಳುವವನೂ ಇಲ್ಲದೆ ಹೋದರು. ರಮ್ಯವಾದ ದೇಶವನ್ನು ಹಾಳಾಗಿ ಮಾಡಿದರು.

Interlinear

Choose Theme