ಯೋಷೀಯನು ಅವನ ಮೇಲೆ ಯುದ್ಧಕ್ಕೆ ಹೋದನು. ಆದರೆ ಇವನು ಯೋಷೀಯನ ಬಳಿಗೆ ಸೇವಕರನ್ನು ಕಳುಹಿಸಿ--ಯೆಹೂದದ ಅರಸನೇ, ನನಗೆ ನಿನಗೆ ಏನು? ಈ ಹೊತ್ತು ನಿನ್ನ ಮೇಲೆ ಅಲ್ಲ, ನಾನು ಯುದ್ಧಮಾಡುವ ಮನೆಯ ಮೇಲೆ ಬರುತ್ತೇನೆ; ತ್ವರೆಮಾಡು ಎಂದು ದೇವರು ನನಗೆ ಹೇಳಿದ್ದಾನೆ. ನನ್ನ ಸಂಗಡ ಇರುವ ದೇವರು ನಿನ್ನನ್ನು ನಾಶ ಮಾಡದ ಹಾಗೆ ನೀನು ಆತನ ಮುಂದೆ ಸುಮ್ಮನಿರು.
Cross references
ಆದರೆ ಅರಸನು--ಚೆರೂಯಳ ಮಕ್ಕಳೇ, ನನಗೂ ನಿಮಗೂ ಏನು? ಅವನು ನನ್ನನ್ನು ದೂಷಿಸಲಿ; ಯಾಕಂದರೆ--ದಾವೀದ ನನ್ನು ದೂಷಿಸು ಎಂದು ಕರ್ತನು ಅವನಿಗೆ ಹೇಳಿದ್ದಾನೆ; ಹಾಗಾದರೆ ಯಾಕೆ ಹೀಗೆ ಮಾಡುತ್ತೀ ಎಂದು ಹೇಳುವ ವನಾರು ಅಂದನು.
ಈ ಸ್ಥಳವನ್ನು ನಾಶಮಾಡುವದಕ್ಕೆ ಕರ್ತನ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಕರ್ತನು ನನಗೆ ಹೇಳಿದನು ಅಂದನು.
ಇಗೋನಾನು ಎದೋಮ್ಯರನ್ನು ಹೊಡೆದಿದ್ದೇನೆಂದು ಹೇಳಿ ಕೊಳ್ಳುತ್ತೀ; ಆದದರಿಂದ ನಿನ್ನ ಹೃದಯವು ನಿನ್ನನ್ನು ಅಹಂಕಾರದಿಂದ ಕೊಚ್ಕಿಕೊಳ್ಳುವಂತೆ ಮಾಡುತ್ತದೆ. ಈಗ ಮನೆಯಲ್ಲಿ ಕೂತಿರು. ನೀನೂ ನಿನ್ನ ಸಂಗಡ ಯೆಹೂದವೂ ಬಿದ್ದು ಹೋಗುವ ಹಾಗೆ ನಿನ್ನ ಕೇಡಿಗೆ ನೀನು ಕೈ ಹಾಕುವದೇನು ಅಂದನು.
ಈ ದೇಶವನ್ನು ಹಾಳುಮಾಡು ವದಕ್ಕೆ ಕರ್ತನಿಲ್ಲದೆ ನಾನು ಬಂದಿದ್ದೇನೋ? ಈ ದೇಶಕ್ಕೆ ವಿರೋಧವಾಗಿ ಬಂದು ಅದನ್ನು ಹಾಳುಮಾಡಿ ಬಿಡು ಎಂದು ಕರ್ತನೇ ನನಗೆ ಆಜ್ಞಾಪಿಸಿದನು ಎನ್ನುವದು.
ಆಗ ಇಗೋ, ಅವರು--ಯೇಸುವೇ, ದೇವ ಕುಮಾರನೇ, ನಿನ್ನೊಂದಿಗೆ ನಮ್ಮ ಗೊಡವೆ ಏನು? ಸಮಯಕ್ಕೆ ಮುಂಚೆ ನಮ್ಮನ್ನು ಸಂಕಟಪಡಿಸು ವದಕ್ಕಾಗಿ ಇಲ್ಲಿಗೆ ಬಂದೆಯಾ ಎಂದು ಕೂಗಿ ಹೇಳಿದರು.
ಯೇಸು ಆಕೆಗೆ-- ಸ್ತ್ರೀಯೇ, ನನ್ನ ಗೊಡವೆ ನಿನಗೆ ಯಾಕೆ? ನನ್ನ ಗಳಿಗೆ ಯು ಇನ್ನೂ ಬಂದಿಲ್ಲ ಅಂದನು.