Home Bibles 2 ದಿನವೃತ್ತಾಂತ 34:33 · ಕನ್ನಡ ಬೈಬಲ್
2 ದಿನವೃತ್ತಾಂತ 34:33 · ಕನ್ನಡ ಬೈಬಲ್

ಹೀಗೆಯೇ ಯೋಷೀಯನು ಇಸ್ರಾಯೇಲ್‌ ಮಕ್ಕಳಿಗೆ ಇದ್ದ ಎಲ್ಲಾ ದೇಶಗಳೊಳಗಿಂದ ಸಮಸ್ತ ಅಸಹ್ಯಗಳನ್ನು ತೆಗೆದು ಹಾಕಿ ಇಸ್ರಾಯೇಲಿನಲ್ಲಿ ಉಳಿದಿರುವರೆಲ್ಲರೂ ತಮ್ಮ ದೇವರಾದ ಕರ್ತನನ್ನು ಸೇವಿಸುವ ಹಾಗೆ ಮಾಡಿದನು. ಅವನ ದಿವಸಗಳೆಲ್ಲಾ ಅವರು ತಮ್ಮ ಪಿತೃಗಳ ದೇವ ರಾದ ಕರ್ತನನ್ನು ಹಿಂಬಾಲಿಸುವದನ್ನು ಬಿಡದೆ ಇದ್ದರು.

Cross references

ಯೆಹೋಶುವ 24:31

ಯೆಹೋಶುವನ ಎಲ್ಲಾ ದಿನಗಳಲ್ಲಿಯೂ ಅವನ ತರುವಾಯ ಕರ್ತನು ಇಸ್ರಾಯೇಲಿಗೆ ಮಾಡಿದ ಸಕಲಕಾರ್ಯಗಳನ್ನು ಅರಿತಿದ್ದ ಹಿರಿಯರ ಸಕಲ ದಿನಗಳಲ್ಲಿಯೂ ಇಸ್ರಾಯೇಲ್ಯರು ಕರ್ತನನ್ನು ಸೇವಿಸಿದರು.

1 ಅರಸುಗಳು 11:5

ಸೊಲೊಮೋನನು ಚೀದೋನ್ಯರ ದೇವತೆಯಾದ ಅಷ್ಟೋರೆತನ್ನೂ ಅಮ್ಮೋ ನ್ಯರ ಅಸಹ್ಯಕರವಾದ ಮಿಲ್ಕೋಮನ್ನೂ ಹಿಂಬಾ ಲಿಸಿದನು.

2 ಅರಸುಗಳು 23:4

ಅರ ಸನು--ಬಾಳನಿಗೋಸ್ಕರವೂ ವಿಗ್ರಹದ ತೋಪುಗಳಿ ಗೋಸ್ಕರವೂ ಆಕಾಶದ ಸೈನ್ಯಕ್ಕೋಸ್ಕರವೂ ಮಾಡ ಲ್ಪಟ್ಟಿದ್ದ ಎಲ್ಲಾ ಪಾತ್ರೆಗಳನ್ನು ಕರ್ತನ ಆಲಯದಿಂದ ಹೊರಗೆ ತಕ್ಕೊಂಡು ಬರಬೇಕೆಂದು ಪ್ರಧಾನ ಯಾಜಕ ನಾದ ಹಿಲ್ಕೀಯನಿಗೂ ಎರಡನೇ ತರಗತಿಯ ಯಾಜಕ ರಿಗೂ ದ್ವಾರಪಾಲಕರಿಗೂ ಆಜ್ಞಾಪಿಸಿದನು ಮತ್ತು ಅವನು ಅವುಗಳನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹೊಲಗಳಲ್ಲಿ ಸುಡಿಸಿ ಅವುಗಳ ಬೂದಿ ಯನ್ನು ಬೇತೇಲಿಗೆ ತರುವಂತೆ ಮಾಡಿದನು.

2 ದಿನವೃತ್ತಾಂತ 34:3

ಅವನು ಇನ್ನೂ ಹುಡುಗನಾಗಿರುವಾಗ ತನ್ನ ಆಳ್ವಿಕೆಯ ಎಂಟನೇ ವರುಷದಲ್ಲಿ ತನ್ನ ಪಿತೃವಾದ ದಾವೀದನ ದೇವರನ್ನು ಹುಡುಕಲು ಆರಂಭಿಸಿದನು. ಅವನ ಆಳ್ವಿಕೆಯ ಹನ್ನೆರಡನೇ ವರುಷದಲ್ಲಿ ಉನ್ನತ ಸ್ಥಳಗಳನ್ನೂ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕಹೊಯಿದ ವಿಗ್ರಹಗಳನ್ನೂ ತೆಗೆದುಹಾಕಿ ಯೆಹೂದ ಯೆರೂಸಲೇಮನ್ನು ಶುಚಿಮಾಡಲು ಆರಂಭಿಸಿದನು.

2 ದಿನವೃತ್ತಾಂತ 34:4

ಅವರು ಬಾಳನ ಬಲಿಪೀಠಗಳನ್ನು ಅವನ ಸಮ್ಮುಖದಿಂದ ಕೆಡವಿಹಾಕಿದರು. ಅವುಗಳ ಮೇಲಿರುವ ಸೂರ್ಯಸ್ತಂಭಗಳನ್ನು ಕಡಿದುಹಾಕಿ ತೋಪುಗಳನ್ನೂ ಕೆತ್ತಿದ ವಿಗ್ರಹಗಳನ್ನೂ ಎರಕ ಹೊಯ್ದ ವಿಗ್ರಹಗಳನ್ನೂ ಒಡೆದುಬಿಟ್ಟು ಪುಡಿಪುಡಿ ಮಾಡಿ, ಅವುಗಳಿಗೆ ಬಲಿ ಅರ್ಪಿಸಿದವರ ಸಮಾಧಿ ಗಳ ಮೇಲೆ ಚೆಲ್ಲಿಸಿ

2 ದಿನವೃತ್ತಾಂತ 34:5

ಪೂಜಾರಿಗಳ ಎಲುಬುಗಳನ್ನು ಅವರ ಬಲಿಪೀಠಗಳ ಮೇಲೆ ಸುಟ್ಟುಬಿಟ್ಟು, ಯೆಹೂ ದವನ್ನೂ ಯೆರೂಸಲೇಮನ್ನೂ ಶುಚಿಮಾಡಿದರು.

ಯೆರೆಮಿಯ 3:10

ಇದೆಲ್ಲಾ ಆದಾಗ್ಯೂ ವಂಚನೆಯುಳ್ಳ ಅವಳ ಸಹೋ ದರಿಯಾದ ಯೆಹೂದಳು ಪೂರ್ಣ ಹೃದಯದಿಂದಲ್ಲ, ಕಪಟದಿಂದಲೇ ನನ್ನ ಬಳಿಗೆ ತಿರುಗಿಕೊಂಡಿದ್ದಾಳೆ ಎಂದು ಕರ್ತನು ಅನ್ನುತ್ತಾನೆ.

ಯೆರೆಮಿಯ 4:1

ಓ ಇಸ್ರಾಯೇಲೇ, ನೀನು ತಿರುಗಿಕೊಂಡರೆ ನನ್ನ ಬಳಿಗೆ ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ; ನೀನು ನಿನ್ನ ಅಸಹ್ಯಗಳನ್ನು ನನ್ನ ಎದುರಿನಿಂದ ತೊಲಗಿಸಿದರೆ ಕದಲದೆ ಇರುವಿ.

ಹೊಶೇಯ 6:4

ಓ ಎಫ್ರಾಯಾಮೇ, ನಿನಗೆ ನಾನು ಏನು ಮಾಡಲಿ? ಓ ಯೆಹೂದವೇ, ನಿನಗೆ ನಾನು ಏನು ಮಾಡಲಿ? ನಿಮ್ಮ ಒಳ್ಳೇತನವು ಹೊತ್ತಾ ರೆಯ ಮೇಘದ ಹಾಗೆಯೂ ಮುಂಜಾನೆಯ ಮಂಜಿ ನಂತೆಯೂ ಹೋಗಿಬಿಡುತ್ತದೆ.

Interlinear

Choose Theme