ಇದಲ್ಲದೆ ಅವನ ಪ್ರಾರ್ಥನೆಯೂ ಅವನು ದೇವ ರಿಗೆ ಭಿನ್ನವಿಸಿದ್ದೂ ಅವನ ಸಮಸ್ತ ಪಾಪವೂ ಅವನ ಅಪರಾಧವೂ ಅವನು ತಗ್ಗಿಸಿಕೊಳ್ಳುವದಕ್ಕಿಂತ ಮುಂಚೆ ಉನ್ನತ ಸ್ಥಳಗಳಲ್ಲಿ ಕಟ್ಟಿಸಿದ ತೋಪುಗಳೂ ಕೆತ್ತಿಸಿದ ವಿಗ್ರಹಗಳೂ ಸ್ಥಾಪಿಸಿದ ಸ್ಥಳಗಳೂ ಇಗೋ, ಪ್ರವಾದಿ ಗಳ ಚರಿತ್ರೆಯಲ್ಲಿ ಬರೆಯಲ್ಪಟ್ಟಿವೆ.
Cross references
ಆದಾಗ್ಯೂ ಅಶೇರ, ಮನಸ್ಸೆ, ಜೆಬುಲೂನ್ ಇವರಲ್ಲಿ ಕೆಲವರು ತಮ್ಮನ್ನು ತಗ್ಗಿಸಿಕೊಂಡು ಯೆರೂಸಲೇಮಿಗೆ ಬಂದರು.
ಮನಸ್ಸೆಯು ಆಳಲು ಆರಂಭಿಸಿದಾಗ ಹನ್ನೆರಡು ವರುಷದವನಾಗಿದ್ದು ಯೆರೂ ಸಲೇಮಿನಲ್ಲಿ ಐವತ್ತೈದು ವರುಷ ಆಳಿದನು.
ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು.
ನಾನು ಶ್ರಮೆಪಡು ವದಕ್ಕಿಂತ ಮುಂಚೆ ತಪ್ಪಿಹೋಗುತ್ತಿದ್ದೆನು; ಆದರೆ ಈಗ ನಿನ್ನ ವಾಕ್ಯವನ್ನು ಕೈಕೊಂಡಿದ್ದೇನೆ.
ನಿನ್ನ ನಿಯಮಗಳನ್ನು ಕಲಿಯುವ ಹಾಗೆ ನಾನು ಶ್ರಮೆಪಟ್ಟದ್ದು ನನಗೆ ಒಳ್ಳೇದು.
ಕರ್ತನೇ, ನಿನ್ನ ನ್ಯಾಯ ವಿಧಿಗಳು ನೀತಿಯುಳ್ಳವುಗಳೆಂದೂ ನಂಬಿಕೆಯಿಂದಲೇ ನೀನು ನನ್ನನ್ನು ಶ್ರಮೆಪಡಿಸಿದ್ದೀ ಎಂದು ಬಲ್ಲೆನು.
ದುಷ್ಟರ ಯಜ್ಞವು ಕರ್ತನಿಗೆ ಅಸಹ್ಯ; ಯಥಾರ್ಥವಂತರ ಪ್ರಾರ್ಥನೆಯು ಆತನ ಆನಂದವು.
ನೀನು ನನ್ನ ಸ್ವರವನ್ನು ಕೇಳಿದ್ದೀ; ನನ್ನ ಶ್ವಾಸಕ್ಕೂ ನನ್ನ ಕೂಗಿಗೂ ನಿನ್ನ ಕಿವಿಯನ್ನು ಮರೆಮಾಡಲಿಲ್ಲ.
ಅವನ ಮಗನಾದ ಓ ಬೇಲ್ಯಚ್ಚರನೇ--ನೀನು ಇದನ್ನೆಲ್ಲಾ ತಿಳಿದರೂ ನಿನ್ನ ಹೃದಯವನ್ನು ತಗ್ಗಿಸದೆ
ಕರ್ತನು ಅವನಿಗೆ--ನೀನೆದ್ದು ನೆಟ್ಟನೇಬೀದಿ ಎಂಬ ಬೀದಿಗೆ ಹೋಗಿ ಯೂದನ ಮನೆಯಲ್ಲಿ ತಾರ್ಸದ ಸೌಲನೆಂಬವನನ್ನು ವಿಚಾರಿಸು; ಇಗೋ, ಅವನು ಪ್ರಾರ್ಥನೆ ಮಾಡುತ್ತಾನೆ.
ಇದಲ್ಲದೆ ಪಾಪಮಾಡಿದ ಆ ಒಬ್ಬನಿಂದಲೇ ಬಂದಂತೆ ಈ ದಾನವು ಬರಲಿಲ್ಲ; ಯಾಕಂದರೆ ಒಬ್ಬ ಮನುಷ್ಯನ ಅಪರಾಧದ ದೆಸೆಯಿಂದಲೇ ತೀರ್ಪು ಉಂಟಾಯಿತು. ಆದರೆ ಉಚಿತವಾದ ದಾನವು ಅನೇಕರ ಅಪರಾಧಗಳ ಕಾರಣದಿಂದ ಉಂಟಾಗಿ ನಿರ್ಣಯಿಸುವಂಥದ್ದಾಗಿದೆ.
ನಾವು ನಮ್ಮ ಪಾಪಗಳನ್ನು ಅರಿಕೆ ಮಾಡಿದರೆ ಆತನು ನಂಬಿಗಸ್ತನೂ ನೀತಿವಂತನೂ ಆಗಿರುವದರಿಂದ ನಮ್ಮ ಪಾಪಗಳನ್ನು ಕ್ಷಮಿಸಿಬಿಟ್ಟು ಸಕಲ ಅನೀತಿಯಿಂದ ನಮ್ಮನ್ನು ಶುದ್ಧಿ ಮಾಡುವನು.ನಾವು ಪಾಪ ಮಾಡಲಿಲ್ಲವೆಂದು ಹೇಳಿದರೆ ಆತನನ್ನು ಸುಳ್ಳುಗಾರನನ್ನಾಗಿ ಮಾಡುತ್ತೇವೆ, ಮತ್ತು ಆತನ ವಾಕ್ಯವು ನಮ್ಮಲ್ಲಿಲ್ಲ.