ಹಿಜ್ಕೀಯನು ಆಳಲಾರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸ ಲೇಮಿನಲ್ಲಿ ಇಪ್ಪತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಅಬೀಯಳು; ಇವಳು ಜೆಕರೀಯನ ಮಗಳಾಗಿದ್ದಳು.
Cross references
ಇಸ್ರಾಯೇಲಿನ ಅರಸನಾಗಿರುವ ಏಲನ ಮಗನಾದ ಹೋಶೇಯನ ಆಳ್ವಿಕೆಯ ಮೂರನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಆಹಾಜನ ಮಗನಾದ ಹಿಜ್ಕೀಯನು ಆಳಲು ಆರಂಭಿ ಸಿದನು.
ಇವನ ಮಗನು ಆಹಾಜನು; ಇವನ ಮಗನು ಹಿಜ್ಕೀಯನು; ಇವನ ಮಗನು ಮನಸ್ಸೆಯು.
ದೇವರ ದರ್ಶನಗಳಲ್ಲಿ ಗ್ರಹಿಕೆಯುಳ್ಳವನಾಗಿದ್ದ ಜೆಕರೀಯನ ದಿವಸಗಳಲ್ಲಿ ಅವನು ದೇವರನ್ನು ಹುಡುಕಿದನು. ಕರ್ತನನ್ನು ಹುಡು ಕುವ ದಿವಸಗಳ ಮಟ್ಟಿಗೂ ದೇವರು ಅವನನ್ನು ಅಭಿ ವೃದ್ಧಿಪಡಿಸಿದನು.
ಆಹಾಜನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ಅವನನ್ನು ಯೆರೂಸಲೇಮ್ ಪಟ್ಟಣದಲ್ಲಿ ಹೂಣಿಟ್ಟರು; ಆದರೆ ಇಸ್ರಾಯೇಲಿನ ಅರಸುಗಳ ಸಮಾಧಿಯ ಸ್ಥಳದಲ್ಲಿ ಅವನನ್ನು ತರಲಿಲ್ಲ. ಅವನ ಮಗನಾದ ಹಿಜ್ಕೀಯನು ಅವನಿಗೆ ಬದಲಾಗಿ ಆಳಿದನು.
ಯೆಹೂದ ದೇಶದ ಅರಸರುಗಳಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ ಇವರ ಕಾಲದಲ್ಲಿ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಆಮೋಚನ ಮಗ ನಾದ ಯೆಶಾಯನಿಗಾದ ದರ್ಶನವು.
ನಾನು ನಂಬಿಗಸ್ತರಾದ ಯಾಜಕನಾದ ಊರೀಯನನ್ನು ಯೆಬೆ ರೆಕ್ಯನ ಮಗನಾದ ಜೆಕರ್ಯನನ್ನು ಸಾಕ್ಷಿಗಳನ್ನಾಗಿ ಇರಿಸಿಕೊಂಡೆನು.
ಯೆಹೂದದ ಅರಸುಗಳಾದ ಉಜ್ಜೀಯ, ಯೋಥಾಮ, ಆಹಾಜ, ಹಿಜ್ಕೀಯ, ಇವರ ದಿನಗಳಲ್ಲಿಯೂ ಇಸ್ರಾಯೇಲಿನ ಅರಸನೂ ಯೋವಾಷನ ಮಗನೂ ಆದ ಯಾರೊಬ್ಬಾಮನ ದಿನಗಳಲ್ಲಿಯೂ ಬೆಯೇರಿಯನ ಮಗನಾದ ಹೋಶೇ ಯನಿಗೆ ಕರ್ತನ ವಾಕ್ಯವು ಬಂತು.
ಯೆಹೂದದ ಅರಸನಾದ ಯೋಥಾಮ ಆಹಾಜ, ಹಿಜ್ಕೀಯ, ದಿವಸಗಳಲ್ಲಿ ಸಮಾರ್ಯದ ಯೆರೂಸಲೇಮಿನ ವಿಷಯವಾಗಿ ಮೋರೇಷೆತಿನವನಾದ ವಿಾಕನಿಗೆ ಉಂಟಾದ ಕರ್ತನ ವಾಕ್ಯವು.
ಉಜ್ಜೀಯ ನಿಂದ ಯೋತಾಮನು ಹುಟ್ಟಿದನು; ಯೋತಾಮನಿಂದ ಆಹಾಜನು ಹುಟ್ಟಿದನು; ಆಹಾಜನಿಂದ ಹಿಜ್ಕೀಯನು ಹುಟ್ಟಿದನು;